ಮಾತೃ ಭಾಷೆಯಲ್ಲೇ ಮೂಲ ಕಲ್ಪನೆಯ ಅರ್ಥ: ರಮೇಶ್
ಕ.ಪ್ರ.ವಾರ್ತೆ ಹಾಸನ ನ.28
ನಾಡು-ನುಡಿ ಬೆಳವಣಿಗೆ ಈ ನಾಡಿನ ಜನರ ಮನಸ್ಥಿತಿಯ ಮೇಲೆ ಅವಲಂಬಿಸಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್. ರಮೇಶ್ ಅಭಿಪ್ರಾಯಪಟ್ಟರು. ತಾಲೂಕಿನ ಬಸವಾಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ಯಭಾಷೆ ಕಲಿಕೆ ತಪ್ಪಲ್ಲ. ಆದರೆ ಮಾತೃಭಾಷೆ ಅನ್ಯಭಾಷೆ ಕಲಿಕೆಗೆ ಮಾಧ್ಯಮವಾಗಬೇಕು. ಮೂಲ ಪರಿಕಲ್ಪನೆ ಅರ್ಥವಾಗುವುದು ಮಾತೃ ಭಾಷೆಯಲ್ಲಿ ಎಂದು ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಮತೇಶ್ ಕನ್ನಡಾಂಬೆಯ ಚಿತ್ರವನ್ನು ಅನಾವರಣಗೊಳಿಸಿದರು. ಹಳೇಬೀಡಿನ ಯುವ ಕಲಾವಿದ ಶಾಂತರಾಜು ಅವರು ಕನ್ನಡಾಂಬೆಯ ಚಿತ್ರವನ್ನು ಬಿಡಿಸಿದರು. ಮುಖ್ಯ ಶಿಕ್ಷಕ ಸಿ.ಕೆ. ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾತೃ ಭಾಷೆಯನ್ನು ಚೆನ್ನಾಗಿ ಕಲಿತವರು ಇಂದು ಉತ್ತುಂಗ ಶಿಖರಕ್ಕೇರಿದ್ದಾರೆ ಎಂದು ಹೇಳಿ ಸಿಎನ್ಆರ್ ರಾವ್, ಕಲಾಂ ಅವರನ್ನು ಉದಾಹರಿಸಿದರಲ್ಲದೆ, ಮಾತೃ ಭಾಷೆಯಲ್ಲಿ ಕಲಿತವರು. ನಮ್ಮ ನಾಡು, ನುಡಿ, ಸಂಸ್ಕೃತಿ ಬಗ್ಗೆ ಪ್ರೀತಿಯನ್ನು ಬಾಲ್ಯದಲ್ಲಿ ಬೆಳೆಸಿಕೊಳ್ಳಬೇಕು ಎಂದರು. ಗೀತ ಗಾಯನ ಕಾರ್ಯಕ್ರಮವನ್ನು ಗಾಯಕ ಕೆ. ಶಿವಕುಮಾರಾಚಾರಿ ಮತ್ತು ಕೆ. ದಿನಕರ್ ನಡೆಸಿಕೊಟ್ಟರು. ಹನುಮಂತೇಗೌಡ, ಶಿಕ್ಷಕರಾದ ರಮೇಶ್, ಕೃಷ್ಣ.ಕೆ, ಕೇಶವಮೂರ್ತಿ ಇದ್ದರು. ಕವಿತಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

