ಆಲೂರು; ವಾಹನ ಹರಿದು ಇಬ್ಬರು ಸಾವು
ಆಲೂರು: ರಸ್ತೆ ಬದಿ ಕುಳಿತಿದ್ದವರ ಮೇಲೆ ಟಾಟಾ ಪಿಕಪ್ ವಾಹನ ಚಾಲಕನ ಅಚಾತುರ್ಯದಿಂದ ಹರಿದು ಇಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ಬಿಕ್ಕೋಡು ರಸ್ತೆಯಲ್ಲಿ ನಡೆದಿದೆ.
ಮರಸುಹೊಸಳ್ಳಿ ಗ್ರಾಮದ ಮಲ್ಲಮ್ಮ(50), ಆಕೆಯ ಪತಿ ದ್ಯಾವಯ್ಯ(55) ಎಂಬುವರೇ ಮೃತಪಟ್ಟ ದುರ್ದೈವಿಗಳು. ನಾಗಮ್ಮ ಹಾಗೂ ಸಂಗಯ್ಯ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮಧ್ಯಾಹ್ನ ಮರಸುಹೊಸಳ್ಳಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಶ್ರಾಂತಿಗೆಂದು ಬಿಕ್ಕೋಡು ರಸ್ತೆಯ ಮರದ ಬದಿ ಕುಳಿತು ಎಲೆ, ಅಡಕೆ ಹಾಕಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಆಲೂರು ಕಡೆಯಿಂದ ವೇಗವಾಗಿ ಬಂದ ಪಿಕಪ್ ವಾಹನ ಏಕಾಏಕಿ ಇವರ ಮೇಲೆ ಹರಿದು, ನಂತರ ಪಲ್ಟಿಯಾದ ಪರಿಣಾಮ ಮಲ್ಲಮ್ಮ ಅವರು ಸ್ಥಳದಲ್ಲೇ ಮೃತಪಟ್ಟರೆ, ದ್ಯಾವಯ್ಯ ತೀವ್ರವಾಗಿ ಗಾಯಗೊಂಡು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಗಮ್ಮ ಹಾಗೂ ಸಂಗಯ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ.
ಬಿಕ್ಕೋಡು ರಸ್ತೆ ಅತ್ಯಂತ ಕಿರಿದಾಗಿದ್ದು, ರಸ್ತೆಯ ಬದಿಯಲ್ಲೇ ಮರಗಳು ಇರುವುದರಿಂದ ಹಾಗೂ ಈ ರಸ್ತೆಯಲ್ಲಿನ ಸೇತುವೆಗಳು ಈವರೆಗೂ ಸಹ ಪೂರ್ಣಗೊಳ್ಳದೆ ಇರುವುದರಿಂದ ಈ ಜಾಗದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಶೀಘ್ರವೇ ರಸ್ತೆಯ ಬದಿಯ ಮರ ತೆರವುಗೊಳಿಸಿ, ಬ್ರಿಡ್ಜ್ಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

