ಹಾಸನ

ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ

Published On :

ರಾಮನಾಥಪುರ: ಇಲ್ಲಿನ ಕಾವೇರಿ ನದಿ ತೀರದಲ್ಲಿ ಮರಳು ದಂಧೆ ಎಗ್ಗಿಲ್ಲದೆ ಭರಾಟೆಯಿಂದ ಸಾಗಿದ್ದು, ಅಧಿಕಾರಿಗಳು ಇದನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಗಲು ಹೊತ್ತಿನಲ್ಲಿ ಮರಳು ದಂಧೆ ನಡೆಸುತ್ತಿದ್ದವರು ಈಗ ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಮರಳು ತೆಗೆಯುವುದನ್ನು ಮುಂದುವರೆಸಿದ್ದಾರೆ. ರಾತ್ರಿ ವೇಳೆ ಮರಳು ತುಂಬಿದ ಟ್ರ್ಯಾಕ್ಟರ್ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಇವುಗಳ ಶಬ್ದ ಮಾಲಿನ್ಯದಿಂದಾಗಿ ಅದೆಷ್ಟೋ ಗ್ರಾಮಗಳಲ್ಲಿ ಗ್ರಾಮಸ್ಥರು ನಿದ್ರೆಗೆಡುವಂತಾಗಿದೆ. ಅದರಲ್ಲೂ ಕಟ್ಟೇಪುರ, ಮಾದಾಪುರ, ಗೊಬ್ಬಳಿ, ಶೀಗೋಡು, ಕಡುವಿನಹೊಸಹಳ್ಳಿ ಎರಡು ಕಡೆಯಾದರೆ ಕೊಣನೂರು ಸಮೀಪದ ಸರಗೂರು ಹೊಳೆ ದಂಡೆಯಲ್ಲಿರುವ ದೇವಸ್ಥಾನ ಬಳಿಯಿಂದ ಮರಳು ತೆಗೆದು ವಾಹನಗಳ ಬಳಿಗೆ ಎತ್ತಿನಗಾಡಿಯಲ್ಲಿ ಕೊಂಡೊಯ್ದು ಲೋಡ್ ಮಾಡಿಸುತ್ತಿದ್ದಾರೆ ಎಂದು ನಾಗರಿಕ ವೇದಿಕೆಯ ಬಸವಣ್ಣ ದೂರಿದ್ದಾರೆ. ಬಸವಾಪಟ್ಟಣದಲ್ಲಂತೂ ಕಾವೇರಿ ನದಿ ಮಧ್ಯದಲ್ಲಿಯೇ ಬಿಡಾರ ಹೂಡಿ ಮರಳು ದಂಧೆಯಲ್ಲಿ ನಿರತರಾಗಿದ್ದಾರೆ. ಇನ್ನು ಮತ್ತಿಗೋಡು, ರುದ್ರಪಟ್ಟಣ, ಆನಂದೂರು, ಹೊನಗಾನಹಳ್ಳಿ, ಕೇರಳಾಪುರ ಹಾಗೆಯೇ ರಾಮನಾಥಪುರ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಹಿಂಭಾಗ ರಸ್ತೆ ಪಟ್ಟಣಕ್ಕೆ ನೀರು ಪೂರೈಕೆ ಮಾಡುತ್ತಿರುವ ಪಂಪ್‌ಹೌಸ್ ಬಳಿ ದಂಧೆ ನಡೆಸುತ್ತಿದ್ದಾರೆ. ದಂಧೆ ನೋಡಿಯೂ ತಡೆಯುವ ಗೋಜಿಗೆ ಹೋಗದೆ ಮೌನದಿಂದ ಇರುವುದು ಮರಳು ದಂಧೆಕೋರರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮರಳು ದಂಧೆಯ ಬಗ್ಗೆ ಆಸಕ್ತಿ ತೋರಿ ಒಂದು ವಿಶೇಷ ತಂಡ ರಚಿಸಿ ಕೂಡಲೇ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.