ಹಾಸನ

ನೂತನ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

Published On :

ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ.ಸಿ  ಮಂಜುನಾಥ್ ಉಪಾಧ್ಯಕ್ಷರಾಗಿ ಕೆ.ಟಿ ಯೋಗಾನಂಜುಂಡ ಆಯ್ಕೆಯಾಗಿದ್ದಾರೆ.
 ಕಾರ್ಖಾನೆಯ ಆಡಳಿತ ಮಂಡಳಿಯ ಎರಡನೇ ಅವಧಿಗೆ ಸೋಮವಾರ ನಡೆದ ಚುನಾವಣೆಯಲ್ಲಿ  ಅಧ್ಯಕ್ಷರಾಗಿ   ಬಾಗೂರು ಕ್ಷೇತ್ರದ ಬಿ.ಸಿ ಮಂಜುನಾಥ್(12),  ಉಪಾಧ್ಯಕ್ಷರಾಗಿ  ಹಳೇಕೋಟೆ ಕ್ಷೇತ್ರದ  ಯೋಗಾನಂಜುಂಡ(11)ಆಯ್ಕೆಯಾಗುವ ಮುಖೇನ ಜೆಡಿಎಸ್ ಮತ್ತೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
 ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುನಾಥ್ 12, ಎಂ ರಾಜೇಗೌಡ 7, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಯೋಗಾನಂಜುಂಡ 11 ಹಾಗೂ ಸಿ.ಸಿ ರವೀಶ್ 7 ಮತಗಳನ್ನು ಪಡೆದರೆ ಉಪಾಧ್ಯಕ್ಷ ಸ್ಥಾನಕ್ಕೆ ಒಂದು ಮತ ತಿರಸ್ಕೃತಗೊಂಡಿತು ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಟರಾಜು ತಿಳಿಸಿದರು.
 ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಚಾಮುಂಡೇಶ್ವರಿ ಶುಗರ್ಸ್ಗೆ 30ವರ್ಷಗಳಿಗೆ ಗುತ್ತಿಗೆ ನೀಡಿದರೂ ಆಡಳಿತ ಮಂಡಳಿಯ ಚುನಾವಣೆ ಮಾತ್ರ  ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪ್ರತಿಷ್ಠೆಯಾಗಿ ಕಂಡಿತಾದರೂ 13 ನಿರ್ದೇಶಕರನ್ನು ಹೊಂದಿದ್ದ ಜೆಡಿಎಸ್ನಿಂದ ಒಬ್ಬರನ್ನು ಸೆಳೆದು, ಒಬ್ಬ ಸರ್ಕಾರದ ನಾಮ ನಿರ್ದೇಶನ ಸದಸ್ಯರು, ಹಾಗೂ ಸರ್ಕಾರಿ ಅಧಿಕಾರಿಯ ಮತಗಳನ್ನು ಪಡೆದರೂ ಕಾಂಗ್ರೆಸ್ ಸೋಲು ಅನುಭವಿಸಿದೆ.
 ಚುನಾವಣೆಯ ನಂತರ ಕಾರ್ಖಾನೆಯ ನಿರ್ದೇಶಕ, ಶಾಸಕ ಬಾಲಕೃಷ್ಣ ಮಾತನಾಡಿ ಕಾರ್ಖಾನೆಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, ಕಾರ್ಖಾನೆಯ ಕಬ್ಬು ಅರೆಯುವಿಕೆ ಸಾಮರ್ಥ್ಯ ಹಾಗೂ ಇತರೆ ಘಟಕಗಳನ್ನು ಅಳವಡಿಸಲು ಚಾಮುಂಡೇಶ್ವರಿ ಶುಗರ್ಸ್ ಕಂಪನಿ ನಿರ್ಲಕ್ಷ ತೋರುತ್ತಿದೆ ಎಂದು ಆಪಾದಿಸಿದರು.
 ನೂತನ ಅಧ್ಯಕ್ಷ ಬಿ.ಸಿ ಮಂಜುನಾಥ್ ಮಾತನಾಡಿ ರೈತರುಗಳ ಸಹಕಾರ ಪಡೆದು ಕಾರ್ಖಾನೆಯ ವಿಸ್ತರಣೆಗೆ ಹೆಚ್ಚು ಗಮನ ಹರಿಸುವ ಜತೆಗೆ ಕಬ್ಬು ಸಾಗಿಸಿದ ರೈತರಿಗೆ ನಿಗದಿತ ಅವದಿಗೆ ಹಣ ಪಾವತಿ ಹಾಗೂ  ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.