ಹಾಸನ

ಅದ್ಧೂರಿ ಕಲಾ ತಂಡಗಳ ಮೆರವಣಿಗೆ

Published On :

ಕ.ಪ್ರ.ವಾರ್ತೆ    ಹಾಸನ    ಅ.2
ನಗರದ ಹಳೆ ಬಸ್ನಿಲ್ದಾಣದ ಪೆಂಡಾಲ್ ಗಣಪತಿ ವಿಸರ್ಜನಾ ಮಹೋತ್ಸವವು ಮಂಗಳವಾರ ಸಾಂಸ್ಕೃತಿಕ ಕಲಾ ತಂಡಗಳ ಅದ್ಧೂರಿ ಮೆರವಣಿಗೆಯೊಂದಿಗೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಜ್ಯೋತಿ ಬೆಳಗಿಸಿ  ಹೂವು ಅರ್ಪಿಸುವುದರ ಮೂಲಕ  ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು.  ಹೂವಿನ ಮಂಟಪದಲ್ಲಿ ಅಲಂಕರಿಸಿದ ರಥದಲ್ಲಿ ಗಣೇಶ ಮೂರ್ತಿ ಹಾಗೂ ಗೌರಮ್ಮನನ್ನು ಮೆರವಣಿಗೆ ಮೂಲಕ ಸಾವಿರಾರು ಜನರು ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ವಾದ್ಯ ಗೋಷ್ಠಿ, ನಾನಾ ರೀತಿಯ ಡೋಲು, ನಂದಿಧ್ವಜ, ಕೀಲುಕುದುರೆ, ಗರಗ, ಯಕ್ಷಗಾನ, ಬೆದರು ಬೊಂಬೆ, ಜೋಕರ್, ಹುಲಿ ಕುಣಿತ, ವೀರಗಾಸೆ, ಕಂಸಾಳೆ,  ಸ್ವಾಗತ ಮಾಡಲು ಆನೆ, ಗಾರುಡಿ ಗೊಂಬೆ, ಬ್ಯಾಂಡ್ ಸೆಟ್, ಬೀದಿ ಆರ್ಕೆಸ್ಟ್ರಾ, ಕುದುರೆ, ಚೋಮಾನ ಕುಣಿತ ಸೇರಿದಂತೆ ನಾನಾ ಸಾಂಸ್ಕತಿ ಕಲಾ ತಂಡಗಳು ಸಾರ್ವಜನಿಕರ ಗಮನ ಸೆಳೆದವು.
ಕೆಲ ಸಂಘಟನೆಗಳು ಪ್ರಮುಖ ವೃತ್ತಗಳಲ್ಲಿ ಪ್ರಸಾದವನ್ನು ವಿತರಿಸಿದರು.  ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರಮುಖ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.  ಮಳೆರಾಯನ ಆಟದಿಂದ ಮೆರವಣಿಗೆಗೆ ಅಲ್ಪ ಪ್ರಮಾಣದ  ಅಡಚಣೆ ಉಂಟಾಯಿತು.
ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, ಪೌರಾಯುಕ್ತ  ನಾಗಭೂಷಣ್, ಸದಸ್ಯ  ಬಟ್ಟೆ ಗೋಪಾಲ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ. ರಶ್ಮಿ, ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಮಹಂತೇಶ್, ಗಣಪತಿ ಸೇವಾ ಸಮಿತಿ ಅಧ್ಯಕ್ಷ  ಡಾ. ಎಚ್. ನಾಗರಾಜ್, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಕಾರ್ಲೇ ಇಂದೆಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.