ಹಾಸನ

ಗಾಂಧಿ ಪ್ರತಿಮೆಗೆ ಹೂವಿನ ಹಾರ ಸಮರ್ಪಣೆ

Published On :

ಹಾಸನ: ನಗರದ 9ನೇ ವಾರ್ಡ್ ಹಿರಿಯ ನಾಗರಿಕ ವೇದಿಕೆಯಿಂದ ಎಂ.ಜಿ. ರಸ್ತೆ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಅದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಹೂವಿನ ಹಾರ ಸಮರ್ಪಿಸಿದರು. ಶ್ರೀಗಳು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಮಾರ್ದದರ್ಶನದಲ್ಲಿ ನಡೆದುಕೊಂಡರೆ ದೇಶದಲ್ಲಿ ಶಾಂತಿ ನೆಮ್ಮದಿ ಕಾಣಬಹುದು. ಗಾಂಧೀಜಿ ಶಾಂತಿ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಹೇಳಿದರು. ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಇಡೀ ದೇಶವು ಗಾಂಧೀಜಿ  ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡಿದೆ. ಶಾಂತಿ ಬೋಧನೆ ಮಾಡಿದ ವ್ಯಕ್ತಿಯ ಹೋರಾಟದ ಫಲ ದೇಶಕ್ಕೆ ಇಂದು ಸ್ವಾತಂತ್ರ್ಯ ಬಂದಿದೆ. ಮುಂದಿನ ವರ್ಷದಿಂದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಸನ್ಮಾನ ಮಾಡುವಂತಹ ಕೆಲಸ ಆಗಲಿ ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಆನಂದ್, 9ನೇ ವಾರ್ಡ್ ನಗರಸಭೆ ಸದಸ್ಯ ಎಚ್.ಎಸ್. ಅನಿಲಕುಮಾರ್, ಉಪಾಧ್ಯಕ್ಷ ಇರ್ಷಾದ್ಪಾಷ,  ಶ್ರೀರಂಗ ವಿದ್ಯಾ ಸಂಸ್ಥೆಯ ರಘು, ನವೀನ್, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಇದ್ದರು. ಶ್ರೀರಂಗ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ರಂಜಿತ ಸ್ವಾಗತಿಸಿದರು.
ಸಕಲೇಶಪುರದಲ್ಲಿ ರಾಷ್ಟ್ರಪಿತಗೆ ನಮನ
ಸಕಲೇಶಪುರ: ಮಹಾತ್ಮರ ಕುರಿತ ಅಧ್ಯಯನ ಕೇವಲ ಜ್ಞಾನಾರ್ಜನೆಗೆ ಸೀಮಿತವಾಗಿರದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭ ಅಧ್ಯಕ್ಷ ಸತೀಶ್ ಹೇಳಿದರು. ಬುಧವಾರ ಪುರಭವನ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರೀ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸತ್ಯ, ಶಾಂತಿ, ಅಹಿಂಸಾ ಮಾರ್ಗದ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ಹೆಸರಿಗೆ ಮನ್ನಣೆ ದೊರಕಿಸಿಕೊಟ್ಟ ಧೀಮಂತ ನಾಯಕ ಮಹಾತ್ಮ ಗಾಂಧೀಜಿ ಅವರ ನಡೆ, ನುಡಿ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾಗಿವೆ ಎಂದರು. ಪುರಸಭಾ ಉಪಾಧ್ಯಕ್ಷ ಮುಖೇಶ್ಶೆಟ್ಟಿ ಮಾತನಾಡಿ, ನಾವೆಲ್ಲರೂ ಇಡೀ ವಿಶ್ವಕ್ಕೆ ಮಾದರಿಯಾದ ಗಾಂಧೀಜಿಯವರ ಸತ್ಯ, ಅಹಿಂಸೆ, ಶಾಂತಿ, ಸರಳತೆ ಹಾಗೂ ಶಾಸ್ತ್ರೀಜಿಯವರ, ಪ್ರಾಮಾಣಿಕತೆ, ತ್ಯಾಗ, ಶಿಸ್ತುನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ವೀರಭದ್ರಯ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಕಾಳಿಗಪ್ಪ, ಲಲಿತಮ್ಮ, ಶೋಭ, ರೇಖಾ, ರುದ್ರಕುಮಾರ್, ತಾಜುನ್ನೀಸ, ಪುರಸಭೆ ಸಿಬ್ಬಂದಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.