ಹಾಸನ

'ಸರ್ವ ಕಾಲಕ್ಕೂ ಗಾಂಧಿ ತತ್ವ ಅನ್ವಯ'

Published On :

ಕ.ಪ್ರ.ವಾರ್ತೆ    ಹೊಳೆನರಸೀಪುರ    ಅ.2
ಸರ್ವಕಾಲಕ್ಕೂ ಮಹಾತ್ಮಗಾಂಧೀಜಿ ತತ್ವಗಳು ಅನ್ವಯವಾಗುತ್ತವೆ ಎಂದು  ಪ್ರಾಂಶುಪಾಲ  ಡಾ.ಜಿ.ಡಿ.ನಾರಾಯಣ ತಿಳಿಸಿದರು. ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಸಾಂಸ್ಕತಿಕ, ಕ್ರೀಡಾ, ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧೀಜಿ 144ನೇ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಮೌಲ್ಯಗಳು, ಚಿಂತನೆಗಳು ಮತ್ತು ದೂರದೃಷ್ಟಿಕೋನಗಳು ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನ್ವಯವಾಗುತ್ತವೆ.  ಜಗತ್ತಿನ ವಿವಿಧ ದೇಶಗಳು ಗಾಂಧಿ ತತ್ವ ಸಿದ್ದಾಂತ, ಜೀವನಾದರ್ಶಗಳನ್ನು ಅಳವಡಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಭಾರತೀಯರಾದ ನಾವು ಗಾಂಧೀಜಿ ತತ್ವಗಳಿಂದ ದೂರ ಉಳಿದಿರುವುದು ವಿಷಾದನೀಯವೆಂದು ತಿಳಿಸಿದರು.
ಜಗತ್ತಿಗೆ ಶಾಂತಿ, ಅಹಿಂಸೆ, ಸತ್ಯಾಗ್ರಹದ ಮೂಲಕ ನ್ಯಾಯ ಪಡೆಯಬಹುದು ಎಂಬುದನ್ನು ಗಾಂಧೀಜಿ ಖುದ್ದಾಗಿ ಆಚರಿಸುವ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಹಿಂಸೆ, ಕೋಮುಗಲಭೆ, ಭಯೋತ್ಪಾದನೆ ಮುಂತಾದವುಗಳು ತಾಂಡವವಾಡುತ್ತಿರುವ ಈ ದಿನಗಳಲ್ಲಿ ಗಾಂಧೀಜಿ ಮೌಲ್ಯಗಳು ಪ್ರಸ್ತುತವೆನಿಸುತ್ತವೆ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಗಾಂಧೀ ಕುರಿತ ಸ್ವಷ್ಟ ಕಲ್ಪನೆ ಇಲ್ಲದಿರುವ ಹಿನ್ನೆಲೆಯಲ್ಲಿ, ಗಾಂಧಿ ಯುವಜನಾಂಗಕ್ಕೆ ಹಾಸ್ಯಾಸ್ಪದ ವ್ಯಕ್ತಿಯಾಗಿ ಕಂಡುಬರುತ್ತಾರೆ. ಸುಮಾರು 3 ದಶಕಗಳ ಕಾಲ ಅಹಿಂಸೆ ಸತ್ಯಾಗ್ರಹ, ಅಸಹಕಾರ ತತ್ವಗಳ ಮೂಲಕವಾಗಿಯೇ ಬ್ರಿಟಿಷರನ್ನು ಮಣಿಸಿ ಸ್ವಾತ್ರಂತ್ರ್ಯ ತಂದುಕೊಟ್ಟರು ಎಂದು ಹೇಳಿದರು. ಸಮಗ್ರ ಭಾರತೀಯರನ್ನು ಒಟ್ಟುಗೂಡಿಸಿ ಗಾಂಧಿಯವರು ತಂದುಕೊಟ್ಟ ಸ್ವಾತ್ರಂತ್ರ್ಯ ಇಂದು ಸ್ವೇಚ್ಚಾಚಾರದ ಕಲ್ಪನೆಯಾಗಿ ಬಳಕೆಯಾಗುತ್ತಿದೆ. ಕರ್ತವ್ಯ ದೇಶನಿಷ್ಟೆ, ನ್ಯಾಯ ರೀತಿಯ ಬದುಕು ಸಹಕಾರದ ಕಲ್ಪನೆಗಳು, ಪ್ರಮಾಣಿಕತೆ ಮುಂತಾದವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಹಾತ್ಮ ಗಾಂಧೀಜಿಯವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ತಿಳಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ. ಮುನಿರಾಜು ಮಾತನಾಡಿ, ಗಾಂಧೀಜಿಯವರಂತಹ ದೇಶಭಕ್ತರ ಹುಟ್ಟು ಹಬ್ಬಗಳು ಕೇವಲ ಆಚರಣೆಗಾಗಿ ಮಾತ್ರವಾಗಿರದೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಸಾಂಸ್ಕೃತಿಕ ಘಟಕದ ಸಂಚಾಲಕ  ಶ್ರೀನಿವಾಸ.ಎನ್.ಟಿ, ಕ್ರೀಡಾ ನಿರ್ದೇಶಕ   ಯೋಗೇಶ್, ಎನ್.ಎಸ್.ಎಸ್.  ಅಧಿಕಾರಿ ಕೆ.ವಿ.ಪಾರ್ಥೇಶ್ಗೌಡ, ಸ್ಕೌಟ್ಸ್ ಸಂಚಾಲಕ  ಉದಯಕುಮಾರ್, ರೆಡ್ಕ್ರಾಸ್ ಘಟಕ ಸಂಚಾಲಕ ಶ್ರೀನಿವಾಸ.ಬಿ.ಎಚ್, ಅಧೀಕ್ಷಕ ಚಿಕ್ಕೇಗೌಡ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಎನ್ಎಸ್ಎಸ್ ಸ್ವಯಂ ಸೇವಕಿ  ಮಮತಾ ಗಾಂಧಿ ಸ್ಮೃತಿಯ ಮೂಲಕ ಪ್ರಾರ್ಥಿಸಿದರು. ಕೀರ್ತನ್ ಸ್ವಾಗತಿಸಿದರು.  ಕಿರಣ್ ವಂದಿಸಿದರು. ಮದನ್ ಲತಾ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.