ಕಾಡಾನೆ ದಾಳಿ: ಗದ್ದೆಗಳ ನಾಶ
ಕ.ಪ್ರ.ವಾರ್ತೆ ಸಕಲೇಶಪುರ ಅ.2
ಮಲೆನಾಡಿನಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಈ ದಾಳಿಗೆ ರೈತರು ತತ್ತರಿಸಿ ಹೋಗಿದ್ದಾರೆ. ಹಿಂಡಾನೆಗಳು ಹಗಲು ಇರುಳೆನ್ನದೆ ಜಮೀನು ಮತ್ತು ಕಾಫಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.ಇತ್ತೀಚೆಗೆ ತಾಲೂಕಿನ ಭೂಮರಹಳ್ಳಿ ಸಮೀಪ ಕಾಡಾನೆ ಹಿಂಡಿನ ದಾಳಿಗೆ ಸಿಲುಕಿ ನೂರಾರು ಎಕರೆ ಬತ್ತದ ಗದ್ದೆ ನಾಶವಾಗಿದೆ.
ಕಳೆದ ಎರಡು ದಿನಗಳಿಂದ ಗ್ರಾಮ ಸಮೀಪದ ಅರಣ್ಯದಲ್ಲಿ ಬೀಡುಬಿಟ್ಟಿರುವ ಸುಮಾರು 15 ಕಾಡಾನೆಗಳ ಹಿಂಡು ರಾತ್ರಿ ವೇಳೆ ಬೆಳೆದು ನಿಂತಿರುವ ಬತ್ತದ ಗದ್ದೆಗಳನ್ನು ತಿಂದು, ತುಳಿದು ಹಾಳು ಮಾಡುತ್ತಿರುವುದರಿಂದ ಲಕ್ಷಾಂತರ ರು. ಹಾನಿಯಾಗಿದೆ. ಕಾಡಾನೆ ಹಿಂಡಿನಲ್ಲಿ ಎರಡು ಮರಿಗಳಿದ್ದು, ಭತ್ತದ ಗದ್ದೆಗಳಲ್ಲೆ ಆನೆಗಳು ಚಿನ್ನಾಟವಾಡಿರುವ ಕಾರಣ ಬತ್ತದ ಗದ್ದೆಯ ಬದುಗಳು ಕುಸಿದಿವೆ.
ಆಕ್ರೋಶ ಕಾಡಾನೆ ಹಾವಳಿ ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ ಯಸಳೂರು ವಲಯ ಅರಣ್ಯ ರಕ್ಷಕ ಶಿವರಾಂ ಹಾಗೂ ನಾಗೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಮ್ಮ ಗ್ರಾಮ ನಿರಂತರವಾಗಿ ಕಾಡಾನೆಗಳ ಹಾವಳಿಗೆ ತುತ್ತಾಗುತ್ತಿದ್ದರೂ, ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ.ಕಾಡಾನೆ ಹಾವಳಿಯಿಂದ ಬೆಳೆ ಕಳೆದುಕೊಂಡವರು ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದರೂ ಇದುವರಗೆ ಅರಣ್ಯ ಇಲಾಖೆಯಿಂದ ಯಾವುದೇ ಪರಿಹಾರ ನೀಡುತ್ತಿಲ್ಲ.
ರಾತ್ರಿ ವೇಳೆ ಪಟಾಕಿ ಹೊಡೆದು ಕಾಡಾನೆಗಳನ್ನು ಚದುರಿಸಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆಯ ಕ್ರಮ ವ್ಯರ್ಥವಾಗುತ್ತಿದ್ದು ಮತ್ತೇರಡು ದಿನಗಳಲ್ಲಿ ಈ ಗ್ರಾಮಕ್ಕೆ ಕಾಡಾನೆಗಳು ಬಂದು ಸೇರುತ್ತಿವೆ. ಇದರಿಂದಾಗಿ ಕಾಫಿ ತೋಟ ಹಾಗೂ ಬತ್ತದ ಗದ್ದೆಗಳನ್ನು ಬೆಳೆಯದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಿ ಮಾತನಾಡಿದ, ಅರಣ್ಯ ರಕ್ಷಕ ಶಿವರಾಂ ಸಂಜೆ ಕಾಡಾನೆ ಹಾವಳಿಯನ್ನು ಇಲ್ಲಿಂದ ಚದುರಿಸಲು ಕಾರ್ಯಾಚರಣೆ ನಡೆಸಲಾಗುವುದು ಹಾಗೂ ಬತ್ತದ ಗದ್ದೆ ತುಳಿದಿರುವ ರೈತರು ನಾಳೆಯೇ ಬಂದು ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

