ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಪೂಜೆ
ಕ.ಪ್ರ.ವಾರ್ತೆ ಅರಸೀಕೆರೆ ಅ.2
ಗಾಂಧೀಜಿಯವರ ಆದರ್ಶ ತತ್ವ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕೆಂದು ತಹಶೀಲ್ದಾರ್ ಕೇಶವಮೂರ್ತಿ ಕರೆ ನೀಡಿದರು.
ಪಟ್ಟಣದ ಹೊರವಲಯದ ಕಸ್ತೂರಬಾ ಟ್ರಸ್ಟ್ನಲ್ಲಿರುವ ಗಾಂಧೀಜಿ ಚಿತಾಭಸ್ಮ ಸಮಾಧಿಗೆ ಬುಧವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಗಾಂಧೀಜಿಯವರ ಹೋರಾಟ ಎಲ್ಲರಿಗೂ ಮಾದರಿ. ಬಾಲ್ಯದಲ್ಲಿಯೇ ಸತ್ಯಹರಿಶ್ಚಂದ್ರ, ಶ್ರವಣಕುಮಾರನ ಪಿತೃಭಕ್ತಿ ಮುಂತಾದ ನಾಟಕಗಳು ಅವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಭಗವದ್ಗೀತೆ, ಖುರಾನ್, ಬೈಬಲ್ ಓದಿ ಅದರಂತೆ ಜೀವನ ನಡೆಸಬೇಕೆಂದು ಭಾವಿಸಿದವರಲ್ಲಿ ಗಾಂಧೀಜಿ ಒಬ್ಬರೆಂದು ಗುಣಗಾನ ಮಾಡಿದರು.ಲಾಲ್ಬಹದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಗಳಲ್ಲಿ ಒಬ್ಬರು. ಅವರ ಜೀವನಾದರ್ಶ,ಮೌಲ್ಯಗಳು ಇತರರಿಗೆ ಮಾದರಿಯಾಗಿದೆ ಎಂದರು.
ಕರವೇ ತಾಲೂಕು ಅಧ್ಯಕ್ಷ ಹೇಮಂತ್ಕುಮಾರ್, ಉಪ ತಹಶೀಲ್ದಾರ್ ಪಾಲಾಕ್ಷ, ಕರವೇ ನಗರಾಧ್ಯಕ್ಷ ಕಿರಣ್ ಹಾಗೂ ಕರವೇ ಕಾರ್ಯಕರ್ತರು ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ, ನಮೋ ಸಂಘಟನೆ ಹಾಗೂ ನಾನಾ ಸಂಘಟನೆ ಕಾರ್ಯಕರ್ತರು, ಕಸ್ತೂರಬಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

