ಉಪವಾಸ ಸತ್ಯಾಗ್ರಹ: ಗ್ರಾಮೀಣ ಅಂಚೆ ನೌಕರರ ಸಭೆ ನಿರ್ಧಾರ
ಕನ್ನಡಪ್ರಭವಾರ್ತೆ ಆಲೂರು ಅ.3
ಇತ್ತೀಚಿನ ದಿನಗಳಲ್ಲಿ ಅಂಚೆಪಾಲಕರು ಗ್ರಾಮೀಣ ಅಂಚೆ ನೌಕರರಿಗೆ ಮಾನಸಿಕ ಕಿರುಕುಳ ಕೊಡುತ್ತಿರುವುದು ಕಂಡುಬಂದಿದ್ದು, ನ್ಯಾಯ ದೊರಕದಿದ್ದರೆ ಪ್ರಧಾನ ಅಂಚೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ಇಲ್ಲಿ ನಡೆದ ಗ್ರಾಮೀಣ ಅಂಚೆ ನೌಕರರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷ ಕಳೆದರೂ ಗ್ರಾಮೀಣ ಅಂಚೆ ನೌಕರರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜೀತದಾಳು ಪದ್ಧತಿಯಲ್ಲಿಯೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದು ವಿಷಾದನೀಯವೆಂದು ಹೊಳೆ ನರಸೀಪುರ ಅಂಚೆ ಮೇಲ್ವಿಚಾರಕ ನಾಗರಾಜು ಖಂಡಿಸಿದರು. ಗ್ರಾಮೀಣ ಅಂಚೆ ನೌಕರರ ಪ್ರಮುಖ ಬೇಡಿಕೆಗಳಾದ 7ನೇ ವೇತನ ಆಯೋಗ ವ್ಯಾಪ್ತಿಗೆ ಅಂಚೆ ನೌಕರರನ್ನು ಒಳಪಡಿಸುವುದು. ಶೇ. 50 ಡಿಎ ಮೂಲ ವೇತನದೊಂದಿಗೆ ವಿಲೀನಗೊಳಿಸುವುದು, ಗ್ರಾಮೀಣ ಅಂಚೆ ನೌಕರರ ಕಾಯಂ ಹಾಗೂ ಸಾಮಾಜಿಕ ಭದ್ರತೆಯ ಪಿಂಚಣಿ ಮುಂತಾದ ಬೇಡಿಕೆಗಳು ಮತ್ತು ಮೂಲಭೂತ ಹಕ್ಕು ಒತ್ತಾಯಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ಡಿಸೆಂಬರ್ 11 ರಂದು ದೆಹಲಿ ಸಂಸತ್ತಿನ ಮುಂದೆ ಧರಣಿ ಹಮ್ಮಿಕೊಂಡಿದ್ದು ಅಂಚೆ ಇಲಾಖಾ ನೌಕರರು ತಮ್ಮೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ವಿಜಯಸಾರಥಿ, ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಪುರುಷೋತ್ತಮ್, ಕಲ್ಲೇಶ್, ಮಹಿಳಾ ಸಂಘಟನಾ ಕಾರ್ಯದರ್ಶಿ ಯಾಸ್ಮಿನ್ತಾಜ್, ಪೋಸ್ಟ್ ಮಾಸ್ಟರ್ ಶಿವಣ್ಣ (ಕಣತೂರು), ಅಣ್ಣಪ್ಪಸ್ವಾಮಿ(ಹುಣಸವಳ್ಳಿ), ಪರಮೇಶ, ರವೀಂದ್ರ, ರಂಗಸ್ವಾಮಿ,ಕಮಲಾಕ್ಷಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

