ಧರ್ಮ,ವಿಜ್ಞಾನ ಹೊಂದಾಣಿಕೆ ಅಗತ್ಯ
ಕನ್ನಡಪ್ರಭ ವಾರ್ತೆ ಹಾಸನ ಅ.3
ಧರ್ಮವಿಲ್ಲದೆ ವಿಜ್ಞಾನ ಇರಬಾರದು. ಹಾಗೇಯೆ ವಿಜ್ಞಾನ ಇಲ್ಲದ ಧರ್ಮವೂ ಸರಿಯಲ್ಲ. ಧರ್ಮ ಮತ್ತು ವಿಜ್ಞಾನದ ನಡುವೆ ಹೊಂದಾಣಿಕೆ ಇದ್ದರೆ ಉತ್ತಮ. ವಿಜ್ಞಾನಿಗಳಾಗಿ ದೇಶವನ್ನು ಅಭಿವೃದ್ಧಿಗೊಳಿಸಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಗುರುವಾರ ಏರ್ಪಡಿಸಿದ್ದ ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವ ಗ್ರಂಥಗಳ ಮೇಲೆ ಉಪನ್ಯಾಸವನ್ನು ನೀಡುತ್ತಿರುವ ವೇಳೆ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಒಂದು ಕಡೆ ಸನಾತನ ಆಧ್ಯಾತ್ಮಿಕತೆ ಮತ್ತೊಂದು ಕಡೆ ವಿಜ್ಞಾನದ ಮುಂದುವರಿಕೆ ನೋಡಲಾಗುತ್ತಿದೆ ಎಂದು ಹೇಳಿದರು.
ಇಂದು ವಿದ್ಯೆ ಎಂಬ ಚಿಂತನೆಯು ಜಗತ್ತು ಹೇಳಿಕೊಡುವ ಶಿಕ್ಷಣದಿಂದ ಬದಲಾಗಿದೆ. ದೇಶಕ್ಕೆ ಹೆಚ್ಚು ಹೆಚ್ಚು ವಿಜ್ಞಾನಿಗಳ ಅವಶ್ಯಕತೆ ಇದ್ದು, ಸ್ವಾತಂತ್ರ್ಯ ಬಂದ ತಕ್ಷಣ ಅಂದಿನ ಪ್ರಧಾನಿ ನೆಹರು ವಿಜ್ಞಾನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ನುಡಿದರು.
ವೈಜ್ಞಾನಿಕ ಆವಿಷ್ಕಾರವು ಸಂಶೋಧನೆಯಿಂದ ಜನರು ಜೀವನ ನಡೆಸಲಾಗುತ್ತಿದೆ. ವಿಜ್ಞಾನದ ಕೊಡುಗೆಯಿಂದಲೇ ನಾವು ಈಗ ನಾನಾ ಸೌಲಭ್ಯವನ್ನು ಪಡೆಯಲಾಗಿ ಬಸ್, ವಿಮಾನ, ರೈಲು, ಕಾರು, ಬೈಕ್ ಇತರೆ ಕಂಡಿದ್ದೇವೆ.
ಪ್ರಸ್ತುತದಲ್ಲಿ ವಿಮಾನವನ್ನು ಬೇರೆ ದೇಶದಿಂದ ಕೋಟ್ಯಂತರ ರು ನೀಡಿ ಪಡೆಯಲಾಗುತ್ತಿದೆ. ನಮ್ಮಲ್ಲಿ ಇನ್ನು ವಿಮಾನ ತಯಾರು ಮಾಡುವ ಶಕ್ತಿ ಬಂದಿಲ್ಲ. ಸಣ್ಣ ಪುಟ್ಟವನ್ನು ಮಾತ್ರ ಕಂಡುಹಿಡಿಯಲಾಗಿದೆ ಎಂದು ಹೇಳಿದರು.
ಸನ್ಯಾಸಿಗಳಾದರೆ ಅವರು ದೊಡ್ಡ ತ್ಯಾಗಿಗಳಲ್ಲ. ವಿಜ್ಞಾನಿಗಳಾಗಿ ದೇಶಕ್ಕೆ ದೊಡ್ಡ ಕೊಡುಗೆ ಕೊಡ ಬಹುದೆಂದು. ಆರ್ಥಿಕ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ವಿಜ್ಞಾನ ಪ್ರಮುಖ ಪಾತ್ರವಹಿಸುತ್ತದೆಂದು ಕಿವಿಮಾತು ಹೇಳಿದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಒಂದೊಂದು ಕ್ಷಣದಲ್ಲೂ ಹೊಸ ಹೊಸ ತಂತ್ರಜ್ಞಾನ ಕಾಲಿಡುತ್ತಿದೆ. ಮುಂದುವರಿಯುತ್ತಿರುವ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾನ ಮತ್ತು ಆಧ್ಯಾತ್ಮಿಕ ಇಂದಿನದ್ದಲ್ಲ, ಹಿಂದಿನಿಂದ ನಿರಂತರವಾಗಿ ಸಾಗುತ್ತಿದೆ. ಮಕ್ಕಳು ವಿಜ್ಞಾನದಲ್ಲಿ ಮುಂದೆ ಬರಬೇಕು ಎಂದ ಅವರು ಮಹಾ ಸ್ವಾಮೀಜಿ ಕಂಡಂತಹ ಕನಸು ನನಸಾಗಬೇಕು ಎಂದರು.
ರೆಡ್ಕ್ರಾಸ್ ಅಧ್ಯಕ್ಷ ಎಚ್.ಪಿ. ಮೋಹನ್ ಮಾತನಾಡಿ, ವಿಜ್ಞಾನದಲ್ಲಿಯೂ ಬಹಳ ಆಕಸ್ಮಿಕಗಳನ್ನು ಕಂಡಿದ್ದೇವೆ. ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುವ ಮೂಲಕ ಹೊಸ ರೀತಿಯ ಆವಿಷ್ಕಾರವನ್ನು ಕಂಡುಹಿಡಿಯುವಂತೆ ಸಲಹೆ ನೀಡಿದರು.
ಜಿಲ್ಲೆಯ ನಾನಾ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನಕ್ಕ್ಕೆ ಸಂಬಂಧಿಸಿದ ವಸ್ತುವಿನ ಮಾದರಿ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಮೊದಲು ಚುಂಚನಗಿರಿ ಮಠದ ದಿ. ಬಾಲಗಂಗಾಧರನಾಥ ಸ್ವಾಮೀಜಿ ಭಾವಚಿತ್ರಕ್ಕೆ ಮೊದಲು ಪುಷ್ಪವನ್ನು ಅರ್ಪಿಸಲಾಯಿತು.
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಹೆಚ್ಚುವರಿ ಎಸ್ಪಿ ಜೆ.ಕೆ.ರಶ್ಮಿ, ಎಸ್ಐ ಸಂಜೀವೇಗೌಡ, ಶಿವಪುತ್ರ ಸ್ವಾಮೀಜಿ ಇತರರು ಇದ್ದರು. ಶ್ರೀರಕ್ಷಾ ಪ್ರಾರ್ಥಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

