ಬೂದುಗುಂಬಳಕ್ಕೆ ಭರ್ಜರಿ ಬೆಲೆ
ಕ.ಪ್ರ. ವಾರ್ತೆ ಹಾರನಹಳ್ಳಿ ಅ.3
ಬರಗಾಲದಿಂದ ತತ್ತರಿಸಿದ್ದ ಅರಸೀಕೆರೆ ತಾಲೂಕಿನ ರೈತರಿಗೆ ಈ ಬಾರಿ ಬೂದುಗಂಬಳಕಾಯಿ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.
ಇನ್ನೇನೂ ನವರಾತ್ರಿ - ಆಯುಧ ಪೂಜೆ ಹಿನ್ನೆಲೆಯಲ್ಲಿ ಬೂದುಗುಂಬಳಕಾಯಿಗೆ ಉತ್ತಮ ಬೆಲೆ ದೊರಕಲಿದ್ದು, ಜಮೀನಿನಲ್ಲಿ ಚೆನ್ನಾಗಿ ಬೆಳೆದಿರುವ ಬೂದೂಗುಂಬಳಕಾಯಿಗಳನ್ನು ಆಯುಧಪೂಜೆ ಕಾರಣ ಕಿತ್ತು ಪಟ್ಟಣ ಪ್ರದೇಶದಲ್ಲಿ ಮಾರಾಟ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ.
ಬೂದುಗುಂಬಳ ಕಾಯಿ ಎಂದೊಡನೆ ನೆನಪಿಗೆ ಬರುವುದು ಬೂದುಗುಂಬಳ ಹಲ್ವ . ಆಯುರ್ವೇದ ಪದ್ಧತಿಯಲ್ಲಿ ಔಷಧಿಗೆ ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ನವರಾತ್ರಿ, ಆಯುಧಪೂಜೆ ಸಂದರ್ಭದಲ್ಲಿ ದೃಷ್ಟಿ ನಿವಾರಣೆಗೆ ಬೂದುಗುಂಬಳಕಾಯಿ ಬಳಸುವುದರಿಂದ ಸಾಮಾನ್ಯವಾಗಿ ವಿಶೇಷ ಬೇಡಿಕೆ ಇದ್ದೇ ಇದೆ.
ಹಾರನಹಳ್ಳಿ ಸುತ್ತಮುತ್ತಲಿನ ಗುತ್ತಿನಕೆರೆ, ಯಳವಾರೆ, ಬಾಗೇಶಪುರ, ಬೆಲವತ್ತಹಳ್ಳಿ, ಯರೇಹಳ್ಳಿ ಮುಂತಾದ ಹಳ್ಳಿಗಳ ರೈತರು ನೂರಾರು ಎಕರೆಗಳಲ್ಲಿ ಪಂಪ್ಸೆಟ್ ನೀರು ಹಾಯಿಸಿ ಬೂದುಗುಂಬಳ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ.
ಬೂದುಗುಂಬಳಕಾಯಿ ಬೆಳೆಯುವ ಹೊಲ, ಗದ್ದೆಗಳನ್ನು ಆಳವಾಗಿ ಬೇಸಾಯ ಮಾಡಿ ಮಣ್ಣು ಹೆಂಟೆಗಳನ್ನು ಒಡೆದು ಕಸಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿ ಹದಮಾಡಿ ನಂತರ ಕೊಟ್ಟಿಗೆ ಗೊಬ್ಬರ ಹಾಕಿ ಸಾಲು ಹೊಡೆದು ನಾಟಿ ಮಾಡಬೇಕು. ಜೂನ್ ತಿಂಗಳಲ್ಲಿ ನಾಟಿ ಮಾಡಿದರೆ 3 ತಿಂಗಳಿಗೆ ಉತ್ತಮ ಕಾಯಿ ಬರಲಿದೆ. ಅಲ್ಲದೇ ಬಾಳೆಗಿಡದ ಜೊತೆ ಪರ್ಯಾಯವಾಗಿ ಬೂದುಗುಂಬಳಕಾಯಿ ಬೆಳೆಯಲಾಗುತ್ತದೆ.
ಪ್ರಗತಿಪರ ರೈತ ಕೃಷ್ಣಪ್ಪ ಹೇಳುವಂತೆ ಕಳೆದ ವರ್ಷ, ಟೊಮೆಟೋ ಬೆಳೆದು ಅಂಗಮಾರಿ ರೋಗದಿಂದ ಲಕ್ಷಾಂತರ ರು. ರೈತರಿಗೆ ನಷ್ಟವಾಗಿತ್ತು.
ಈ ಬಾರಿ ಮೈಕೋ ಕಂಪನಿಯ ಬೂದಗುಂಬಳ ಹಾಕಿದ್ದು, ಒಂದು ಎಕರೆಗೆ 800 ಗ್ರಾಂ ಬೀಜ ಹಾಕಿದರೆ ಉತ್ತಮ ಗಾತ್ರದ ಬೂದುಗುಂಬಳಕಾಯಿ ಬಿಟ್ಟಿದೆ. ಒಂದು ಎಕರೆಗೆ 8-9 ಟನ್ ಇಳುವರಿ ನಿರೀಕ್ಷಿಸಬಹುದು ಎಂದರು. ಈಗಾಗಲೇ 1 ಎಕರೆಗೆ 5 ಟನ್ ಮಾರಾಟ ಮಾಡಲಾಗಿದ್ದು, 1 ಟನ್ಗೆ 8 ಸಾವಿರ ರು. ಬೆಲೆ ಇದೆ. ಹಾಸನ, ಚಿಕ್ಕಮಗಳೂರು, ಬೆಂಗಳೂರು ಈ ಭಾಗದಿಂದ ವ್ಯಾಪಾರಿಗಳು ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

