ಹಾಸನ

ಸೈಬರ್ ಭದ್ರತೆಗೆ ಮುಂದಾಗಿ

Published On :

ಕನ್ನಡಪ್ರಭ ವಾರ್ತೆ, ಹಾಸನ, ಅ.4
ಸೈಬರ್ ಭದ್ರತೆಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ಸೈಬರ್ ಭದ್ರತಾ ತಜ್ಞ ನಿತೀನ್ ಶರ್ಮ ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೂರು ದಿವಸದ ನೈತಿಕ ಹ್ಯಾಕಿಂಗ್ ಮೇಲೆ ಆಗುತ್ತಿರುವ ಪರಿಣಾಮ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂಟರ್ನೆಟ್ ಬ್ರೇಕ್ ಮಾಡುವ ಮೂಲಕ ಪಾಸ್ವರ್ಡ್ ಕಂಡು ಹಿಡಿಯುತ್ತಿರುವುದು ಎಲ್ಲಾ ದುರಂತಗಳಿಗೆ ಕಾರಣವಾಗಿದೆ. ಯಾವ ರೀತಿ ಬಯಲು ಮಾಡಿ ದುಷ್ಕೃತ್ಯದಲ್ಲಿ ಉಗ್ರಗಾಮಿಗಳು ತೊಡಗುತ್ತಾರೆ. ದೇಶದ ಭದ್ರತ ವ್ಯವಸ್ಥೆಯ ಮಿಲ್ಟ್ರಿ ಪಡೆಯ ಬಗ್ಗೆ ವಿವರ ಪಡೆದು ಆಗುವ ದುಷ್ಪರಿಣಾಮ ತಡೆಗಟ್ಟಲು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವುದರ ಮೂಲಕ ಅರಿತು ಇಂತಹದನ್ನು ತಡೆಯುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಲೆನಾಡು ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಸತ್ಯನಾರಾಯಣ್ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪೊಲೀಸರಾಗಿ ಕಳ್ಳತನ ಮಾಡುವ ಬಗ್ಗೆ ನಿಗಾವಹಿಸುವ ಮೂಲಕ ಸೈಬರ್ ರಕ್ಷಣೆ ಮಾಡಬೇಕಾಗಿದೆ. ಕಳ್ಳರು ಯಾವ ರೀತಿ ಉಪಯೋಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂಬುದನ್ನು ಮನಗಂಡು ತಡೆಯುವಲ್ಲಿ ಮುಂದಾಗಬೇಕು. ವಿದ್ಯಾರ್ಥಿಗಳೆ ತಪ್ಪು ದಾರಿ ಹಿಡಿದು ಅದರಿಂದಾಗುವ ಲಾಭವನ್ನು ಪಡೆಯಲು ಮುಂದಾಗಬಾರದು ಎಂದು ಎಚ್ಚರಿಸಿದರು.
ಮೂರು ದಿನದ ಕಾರ್ಯಾಗಾರದಲ್ಲಿ ಸೈಬರ್ ನೀತಿಶಾಸ್ತ್ರ, ಸ್ಕ್ಯಾನಿಂಗ್ ಬಗ್ಗೆ ಮಾಹಿತಿ, ಭದ್ರತೆ ಮಾಡುವುದು, ಮೊಬೈಲ್ ಮೇಲೆ ಆಗುವ ಪರಿಣಾಮ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ ಡೆವಲಪ್ಮೆಂಟ್ ವಿಭಾಗದ ಡಾ. ಬಿ.ಆರ್. ಸುಜಾತ, ಎಸ್ಎಂಐಇಇಇ ಪಿ.ಎಸ್. ಶ್ರೀಕಾಂತ್, ಡಾ. ಅಮರೇಂದ್ರ, ಸನ್ನಿ ವಾಗಲ್ ಇತರರು ಇದ್ದರು. ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಪ್ರಾರ್ಥಿಸಿದರು. ವೈಷ್ಣವಿ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.