ಬಾಲನ್ಯಾಯ ಕಾಯ್ದೆ ಕುರಿತ ಉಪನ್ಯಾಸ
ಕನ್ನಡಪ್ರಭ ವಾರ್ತೆ ಹಾಸನ ಅ.4
ಬಾಲನ್ಯಾಯ ಕಾಯ್ದೆಯ 2000 ರ ತಿದ್ದುಪಡಿಯಂತೆ 18 ವರ್ಷ ಒಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ತಪ್ಪನ್ನು ಎಸಗಿದರೆ ಅವರನ್ನು ಬಾಲಾಪರಾಧಿಗಳು ಅಥವಾ ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಎಂದು ಪರಿಗಣಿಸಲಾಗುವುದು ಎಂದು ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಪ್ರಿಯಾ ಆಗ್ನೆಸ್ ತಿಳಿಸಿದ್ದಾರೆ.
ನಗರದ ಸರ್ಕಾರಿ ಕಲಾ ಕಾಲೇಜಿನ ಸಮಾಜಶಾಸ್ತ್ರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಬಾಲ ನ್ಯಾಯ ಕಾಯ್ದೆ ಮತ್ತು ಸುಧಾರಣ ಸಂಸ್ಥೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 18 ವರ್ಷ ಒಳಪಟ್ಟವರನ್ನು ಮಕ್ಕಳು ಎಂದು ಪರಿಗಣಿಸ ಲಾಗುವುದು. ಈ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ರಕ್ಷಣೆ ಮತ್ತು ಪೋಷಣೆಗೆ ಅಗತ್ಯವಿರುವ ಮಕ್ಕಳನ್ನು ಬಾಲಮಂದಿರಗಳಲ್ಲಿ ಸರ್ಕಾರದ ನಿಯಮದಂತೆ ಪೋಷಿಸಲಾಗುವುದು. ಎರಡನೇಯದಾಗಿ ಕಾನೂನಿನ ಸಂಘರ್ಷಕ್ಕೆ ಒಳಪಡುವ ಮಕ್ಕಳನ್ನು ಸರ್ಕಾರ ನಡೆಸುವ ವೀಕ್ಷಣಾಲಯ ಅಥವಾ ಅವಲೋಕನ ಗೃಹಗಳಲ್ಲಿ ಉಪಚರಿಸಲಾಗುವುದು ಎಂದು ವಿವರಿಸಿದರು.
ಮಕ್ಕಳ ವಿಚಾರಣೆಯನ್ನು ಜಿಲ್ಲೆಯಲ್ಲಿರುವ ಬಾಲನ್ಯಾಯ ಮಂಡ ಳಿಯಲ್ಲಿ ವಿಚಾರಣೆ ನಡೆಸಿ ಜಾಮೀನಿನ ಮೇಲೆ ಪೋಷಕರಿಗೆ ಒಪ್ಪಿಸಲಾಗುವುದು ಎಂದು ಹೇಳಿದರು.
ಬಾಲನ್ಯಾಯ ಮಂಡಳಿಯಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅಧ್ಯಕ್ಷರಾಗಿದ್ದು, ಇಬ್ಬರು ಸಮಾಜ ಸೇವಕರು ಸದಸ್ಯರಾಗಿರುತ್ತಾರೆ. ಒಬ್ಬರು ಕಡ್ಡಾಯವಾಗಿ ಮಹಿಳಾ ಸದಸ್ಯರಿರುತ್ತಾರೆ. ಪ್ರತಿ ಶುಕ್ರವಾರ ಸಭೆ ಸೇರಿ ಮಕ್ಕಳ ವಿಚಾರಣೆ ಮಾಡಲಾಗುತ್ತದೆ ಎಂದರು.
ಬಾಲಮಂದಿರಗಳಲ್ಲಿ ಅಸಹಾಯಕ ನಿರ್ಗತಿಕ, ತಂದೆ ತಾಯಿಗಳಿಂದ ತಿರಸ್ಕೃತ ಮಕ್ಕಳು, ತಪ್ಪಿಸಿಕೊಂಡಿರುವ ಮಕ್ಕಳು ಇವರನ್ನು ಸುಧಾರಿಸ ಲಾಗುತ್ತದೆ. ಬಾಲಮಂದಿರಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಬಾಲ ಮಂದಿರಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಯಿದ್ದು ಅಧ್ಯಕ್ಷರು ಹಾಗೂ ನಾಲ್ಕು ಜನ ಸದಸ್ಯರಿರುತ್ತಾರೆ. ಅವರಲ್ಲಿ ಒಬ್ಬರು ಮಹಿಳಾ ಸದಸ್ಯರು ಕಡ್ಡಾಯ. ಈ ಐದು ಜನರು ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆ ಮಾಡಿರುವವರಾಗಿರುತ್ತಾರೆ. ಇವರ ಅಧಿಕಾರದ ಅವಧಿ ಮೂರು ವರ್ಷಗಳು. ಅಗತ್ಯವೆನಿಸಿದರೆ 2 ಅವಧಿಯವರೆಗೆ ವಿಸ್ತರಿಸಬಹುದು. ಇವರು ಪ್ರತಿ ಮಂಗಳವಾರ ಸಭೆ ಸೇರುತ್ತಾರೆ.
ಸಮಾಜಶಾಸ್ತ ಅಧ್ಯಯನ ಮಾಡುವ ವಿದ್ಯಾರ್ಥಿಗಳು ತಮಗೆ ಯಾವುದಾದರು ಅನಾಥ ಅಥವಾ ನಿರ್ಗತಿಕ ಮಕ್ಕಳನ್ನು ಕಂಡರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿದಾಗ ಸಂಬಂಧ ಪಟ್ಟವರು ಆ ಮಕ್ಕಳನ್ನು ಮೇಲಿನ ಸಂಸ್ಥೆಗೆ ಸೇರಿಸುತ್ತಾರೆ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಸುನಿಲಕುಮಾರ್, ಪ್ರೊ. ವೆಂಕಟೇಶ್, ಎಮ್.ಎಚ್. ಲತಾ ಇದ್ದರು. ಅಪರ್ಣಾ ಪ್ರಾರ್ಥನೆ, ಪ್ರೊ. ರಂಗಸ್ವಾಮಿ ವಂದಿಸಿದರು. ಮೇಘರಾಣಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

