ಸುನ್ಮಿ ಜಮಾತ್ ಕಮಿಟಿಗೆ ಆಯ್ಕೆ
ಬಾಣಾವರ(ಅರಸೀಕೆರೆ ತಾ.): ಇಲ್ಲಿನ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಶಫಿ ಅಹಮದ್, ಉಪಾಧ್ಯಕ್ಷರಾಗಿ ಹಯಾತ್ ಮೊಹಿದ್ದೀನ್, ಕಾರ್ಯದರ್ಶಿಯಾಗಿ ಮಹಮ್ಮದ್ ಎಕ್ಬಾಲ್, ಸಹ ಕಾರ್ಯದರ್ಶಿಯಾಗಿ ದಸ್ತಗೀರ್, ಖಜಾಂಚಿಯಾಗಿ ಕೆ. ಇಲಿಯಾಸ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಸೈಯದ್ ರಹೀಂಸಾಬ್, ಅನ್ವರ್ ಸಾಬ್, ಬಿ.ಜಿ. ಪ್ಯಾರೇಜಾನ್, ಅಬ್ದುಲ್ ಸುಬಾನ್, ಬಡಾಮುನ್ನಾ, ಆರೀಫ್ ಜಾನ್ ಇಸ್ಮಾಯಿಲ್, ಸೈಯದ್ ಆಸೀಫ್ ಹಾಗೂ ಅಫ್ಜಲ್ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಗೌರವ ಸಲಹೆಗಾರರಾಗಿ ಅಲ್ಹಜ್ಪಾಧಾ ಹುಸೇನ್ ಸಾಹೇಬ್, ಅಮೀರ್ ಅಹಮದ್ ಸಾಬ್, ಕೆ.ಸಿ. ಖಾದರ್ ಭಾಷ, ಡಾ. ಎಂ.ಕೆ. ಪೀರಾನ್ ಸಾಬ್, ಮಹಮ್ಮದ್ ಇಬ್ರಾಹಿಂ ಸಾಬ್, ನಜೀರ್ ಅಹಮದ್ ಸಾಬ್ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರೋಟರಿ ವಿಜ್ಞಾನ ಸ್ಪರ್ಧೆಗೆ ಅರ್ಜಿ
ಮೈಸೂರು: ರೋಟರಿ ಕ್ಲಬ್ ಆಫ್ ಮೈಸೂರು ಬೃಂದಾವನವು ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿದೆ. ಆಸಕ್ತರು ತಮ್ಮ ಶಾಲೆಯ ಮೂಲಕ ಅರ್ಜಿ ಸಲ್ಲಿಸಬಹುದು. ಸ್ಪರ್ಧೆಯ ಪ್ರಯೋಗದ ವಿವರ 2 ಅಥವಾ 4 ಹಾಳೆ ಮೀರಬಾರದು. 30 ಉತ್ತಮ ಪ್ರಯೋಗಗಳನ್ನು ಆಯ್ಕೆಮಾಡಿ ನ.30 ಮತ್ತು ಡಿ.1ರಂದು ವಿಜ್ಞಾನ ರೋಟರಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಈ ಪೈಕಿ ಅತ್ಯುತ್ತಮ ನಾಲ್ಕು ಪ್ರದರ್ಶನಗಳಿಗೆ ಮೊದಲ ಬಹುಮಾನವಾಗಿ 30 ಸಾವಿರ, ದ್ವಿತೀಯ ಬಹುಮಾನಕ್ಕೆ 20 ಸಾವಿರ ಮತ್ತು ತೃತೀಯ ಬಹುಮಾನಕ್ಕೆ 10 ಸಾವಿರ ನೀಡಲಾಗುತ್ತದೆ. ಅರ್ಜಿಗಾಗಿ ನಂ. 366, ರೋಟರಿ ಬೃಂದಾವನ ಶಾಲೆ, ಬೃಂದಾವನ ಬಡಾವಣೆ, ಮೈಸೂರು- 20 ಅಥವಾ ಹೆಚ್ಚಿನ ಮಾಹಿತಿಗೆ ದೂ.9886764542 ಸಂಪರ್ಕಿಸಬಹುದು.
7ರಂದು ಪ್ರತಿಭಟನೆ
ಹಾಸನ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಕಾರ್ಯಕರ್ತರು ಅ.7ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಮಾಜದ ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಎಲ್ಲಾ ರಾಜಕೀಯ ಪಕ್ಷಗಳ ಅವಧಿಯಲ್ಲೂ ಭ್ರಷ್ಟಾಚಾರ, ದಬ್ಬಾಳಿಕೆ, ದೌರ್ಜನ್ಯ ನಡೆಸುವುದೂ ಸರ್ವೆ ಸಾಮಾನ್ಯವಾಗಿದ್ದು, ಅನ್ಯಾಯ ಅಕ್ರಮ, ನಡಾವಳಿಗಳನ್ನು ಎಸಗಿರುವ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳನ್ನು ಸಂರಕ್ಷಿಸಿಕೊಂಡು ಬಂದಿರುವ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದನ್ನು ಹಾಸನ ಜಿಲ್ಲಾ ದಂಡೋರ ಮೀಸಲಾತಿ ಹೋರಾಟ ಸಮಿತಿ ಖಂಡಿಸಿದೆ. ದುರಹಂಕಾರದಿಂದ ವರ್ತಿಸುತ್ತಿರುವ ಡಿಎಫ್ಒ ಲಕ್ಷ್ಮಣ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಅ.7ರಂದು ಮಾದಿಗ ದಂಡೋರ ರಿಜರ್ವೇಶನ್ ಹೋರಾಟ ಸಮಿತಿಯು ನಗರದ ಹೇಮಾವತಿ ಪ್ರತಿಮೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್ ತಿಳಿಸಿದ್ದಾರೆ.
ವಾರ್ಷಿಕ ಸಭೆ
ಹಾರನಹಳ್ಳಿ: ಗ್ರಾಮ ಪಂಚಾಯ್ತಿ ನೌಕರರ ವಾರ್ಷಿಕ ಮಹಾಸಭೆ ನಡೆಯಿತು. ಹಾರನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಾರಂಗನಾಥ್ ಸಭೆ ಉದ್ಘಾಟಿಸಿ, ನೌಕರರ ಸಹಕಾರ ಸಂಘ ಕಾರ್ಯಕ್ರಮಗಳಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಂಘದ ಅಧ್ಯಕ್ಷ ಡಿ.ಸಿ. ನಂಜುಡಪ್ಪ ಮಾತನಾಡಿ, ಹಾರನಹಳ್ಳಿ ಸುತ್ತಮುತ್ತಲ ನೌಕರರನ್ನು ಈ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಬಸವರಾಜು, ಸಂಘದ ಕಾರ್ಯದರ್ಶಿ ಜಹೀರ್, ನಿರ್ದೇಶಕ ಎಚ್.ಎಂ.ರಂಗನಾಥ್, ಚಂದ್ರೇಗೌಡ, ಮಹದೇವಪ್ಪ, ಸಿದ್ದಮ್ಮ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

