ಹಾಸನ

'ಅಂತಾರಾಷ್ಟ್ರೀಯ ನಾಯಕರಾಗಿದ್ದ ಗಾಂಧೀಜಿ'

Published On :

ಹಾಸನ: ಮಹಾತ್ಮ ಗಾಂಧೀಜಿ ಅಂತಾರಾಷ್ಟ್ರೀಯ ನಾಯಕರಾಗಿದ್ದು,  ಅವರ ತತ್ವಗಳು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಪ್ರಾಂಶುಪಾಲ ಪ್ರೊ.ಕೆ.ಶಾಮಭಟ್ ತಿಳಿಸಿದರು. ನಗರದ ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ಕೌಟ್ಸ್ ಗೈಡ್ಸ್ ರೋವರ್ ಘಟಕದಿಂದ ಏರ್ಪಡಿಸಿದ್ದ ಗಾಂಧಿಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಉಪನ್ಯಾಸಕ  ಡಾ.ನೀಲಕಂಠ ಎನ್. ಮನ್ವಾಚಾರ್ ಅವರು ಗಾಂಧೀಜಿಯವರ ಜೀವನ ಸಾಧನೆಗಳು ಹಾಗೂ ಅವರ ತತ್ವಗಳ ಬಗ್ಗೆ ಸವಿವರವಾಗಿ ವಿವರಿಸಿದರು. ರೋವರ್ಸ್ ಘಟಕ ಸಂಚಾಲಕ ಹಾಗೂ ಇತಿಹಾಸ ಉಪನ್ಯಾಸಕ ಜಯಣ್ಣ ಮಾತನಾಡಿ, ಗಾಂಧೀಜಿಯವರ ಸರಳ ಜೀವನ ಹಾಗೂ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಸಲುವಾಗಿ ನಡೆಸಿದ ಚಳವಳಿಗಳ ಬಗ್ಗೆ ತಿಳಿಸಿದರು.  
ವಾಣಿಜ್ಯಶಾಸ್ತ್ರದ ಸಹ ಪ್ರಾಧ್ಯಾಪಕಪರಮೇಶ್ವರಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗಾಂಧೀಜಿಯವರ ತತ್ವಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಎಚ್.ಎಸ್.ನಿಂಗಪ್ಪ ಮತ್ತು ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ  ರವಿಕಾಂತ್ ಇದ್ದರು. ದರ್ಶನ್ ಪ್ರಾರ್ಥಿಸಿದರು. ರವಿಗೌಡ ಸ್ವಾಗತಿಸಿದರು. ನವೀನ್ಕುಮಾರ್ ವಂದಿಸಿದರು. ಪುಟ್ಟಸ್ವಾಮಿಚಾರಿ ನಿರೂಪಿಸಿದರು.
ಕುರುಬರ ಸಂಘಕ್ಕೆ ಆಯ್ಕೆ
ಹಾಸನ: ರಾಜ್ಯ ಕುರುಬ ಸಮುದಾಯದ ಚುನಾವಣೆ ಇತ್ತೀಚೆಗೆ ನಡೆದಿದ್ದು, ಜಿಲ್ಲೆಯ ನಾಲ್ಕು ಸ್ಥಾನಗಳಿಗೆ. ನವಿಲೆ ಅಣ್ಣಪ್ಪ, ಅನಿಲ್ಕುಮಾರ್,  ಬಿ.ಎಸ್. ಸತೀಶ್ ಹಾಗೂ ಸವಿತಾ ಸತೀಶ್ ಮಹಿಳಾ ಮೀಸಲಾತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಜಿಲ್ಲಾ ಸಮುದಾಯದ ಬಂಧುಗಳು ಮತ್ತು ಅಭ್ಯರ್ಥಿಗಳಿಗೆ ಜಿಲ್ಲಾ ಕುರುಬರ ಸಂಘ ಅಭಿನಂದಿಸಿದೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.