ಹಾಸನ

ಹಾಸನ; ಕಲಬೆರಕೆ ಪೆಟ್ರೋಲ್ ಮಾರಾಟ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 6
ಕಲಬೆರಕೆ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಭಾನುವಾರ ನಗರದ ಪೆಟ್ರೋಲ್ ಬಂಕ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರವಲಯ ಬಿ. ಕಾಟೀಹಳ್ಳಿಯಲ್ಲಿರುವ ಶ್ರೀಚಕ್ರ ಪೆಟ್ರೋಲ್ ಬಂಕ್‌ನಲ್ಲಿ ಕಲಬೆರಕೆ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೈಕ್‌ಗಳು ಮೇಲಿಂದ ಮೇಲೆ ರಿಪೇರಿಗೆ ಬರುತ್ತಿವೆ. ಕಲಬೆರಕೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಶಶಿಕುಮಾರ್ ಎಂಬುವರು ಎರಡು ದಿನಗಳ ಹಿಂದೆ ರಾತ್ರಿ  ಈ ಬಂಕ್‌ನಲ್ಲಿ ತಮ್ಮ ಬೈಕ್‌ಗೆ  ಪೆಟ್ರೋಲ್ ಹಾಕಿಸಿಕೊಂಡು ಮನೆಗೆ ತೆರಳಿದ್ದಾರೆ. ನಂತರ ಬೆಳಗ್ಗೆ ಎದ್ದು ಬೈಕ್ ಸ್ಟಾರ್ಟ್ ಮಾಡಲು ಹೋದ ಸಂದರ್ಭದಲ್ಲಿ ಬೈಕ್ ಸ್ಟಾರ್ಟ್ ಆಗದೆ ತೊಂದರೆ ಕೊಟ್ಟಿದೆ. ಯಾವುದೋ ಸಮಸ್ಯೆ ಇರಬೇಕು ಅಂದುಕೊಂಡು ಸುಮ್ಮನಾಗಿದ್ದರು. ಮತ್ತೆ ಅದೇ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದಾರೆ. ಮತ್ತೆ ಅದೇ ರೀತಿ ಬೈಕ್ ತೊಂದರೆ ನೀಡಿದ ಪರಿಣಾಮ ಈ ವಿಚಾರವಾಗಿ ಬಂಕ್‌ಗೆ ಬಂದು ಪ್ರಶ್ನಿಸಿ ಪೆಟ್ರೋಲ್‌ನ್ನು ಬಾಟಲಿಗೆ ಹಾಕಿಸಿ ನೋಡಿದಾಗ ಕಲಬೆರಕೆ ಅಂಶ ನಿಧಾನವಾಗಿ ಬಾಟಲ್ ತಳಭಾಗಕ್ಕೆ ಇಳಿಯುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸತೀಶ್ ಎಂಬುವರು ಸಹ ಈ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದಾರೆ. ಅವರ ಬೈಕ್ ಸಹ ಇದೇ ಪೆಟ್ರೋಲ್‌ನಿಂದಾಗಿ ರಿಪೇರಿಗೆ ಬಂದಿದೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ಭಾನುವಾರ ಬೆಳಗ್ಗೆ ಬಂಕ್‌ಗೆ ಬಂದು ಆಕ್ರೋಶಗೊಂಡು ಮಾಲೀಕರೊಂದಿಗೆ ವಾಗ್ವಾದ ನಡೆಸಿದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ನ್ಯಾಯದ ಪರ ವಕಾಲತು ವಹಿಸದೇ ಉಡಾಫೆಯಿಂದ ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಪರವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು, ಈ ಬಂಕ್‌ನ ಪೆಟ್ರೋಲ್‌ನ್ನು ಪರೀಕ್ಷೆಗೆ ಕಳುಹಿಸಿ ನಿಜಾಂಶ ಬಯಲಾಗುವವರೆಗೂ ಈ ಬಂಕ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.