ಹಾಸನ

ಕೊಬ್ಬರಿ ಬೆಲೆ ಏರಿಕೆ

Published On :

ಜಾವಗಲ್: ಜಾವಗಲ್ ಸಂತೆಯಲ್ಲಿ ಮಂಗಳವಾರ ಕೊಬ್ಬರಿಬೆಲೆ  ರು. 6,150 ನಿಂದ 6,200 ವರೆಗೆ ಏರಿಕೆಯಾಗಿದ್ದು ಬೆಳೆಗಾರರಿಗೆ ಸಂತಸ ತಂದಿದೆ.
ನ್ಯಾಫೆಡ್ ಕೊಬ್ಬರಿ ಮಾರಾಟವನ್ನು ಕಳೆದವಾರ ನಿಲ್ಲಿಸಿದ್ದರಿಂದ ಮಾರುಕಟ್ಟೆಯಲ್ಲಿ ರು.5,500 ಗಳಿತ್ತು. ಈ ವಾರ ಕೊಬ್ಬರಿ ಬೆಲೆ ಕಳೆದ ವಾರಕ್ಕಿಂತ ರು.600 ನಿಂದ 700     ಏರಿಕೆಯಾಗಿದ್ದು ಬೆಳೆಗಾರರಿಗೆ ಖುಷಿ ನೀಡಿತು. ನ್ಯಾಫೆಡ್ ಕೇಂದ್ರಕ್ಕೆ ಕೊಬ್ಬರಿ ಬಿಡಲು ಹಲವು ನಿಬಂಧನೆಗಳಿದ್ದು, ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಇದ್ದಲ್ಲಿ ರೈತರು ಸುಲಭವಾಗಿ ಕೊಬ್ಬರಿ ಮಾರಾಟಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈರುಳ್ಳಿ ಬೆಲೆ 1ಕೆ.ಜಿಗೆ ರು. 20-25  ಮೂಲಂಗಿ  ರು. 40 ಕ್ಯಾರೆಟ್  ರು. 40 ಗಳಾಗಿತ್ತು. ಮಂಗಳವಾರದಿಂದ ಪ್ರಾರಂಭವಾಗುವ ಹಿರಿಯರ ಹಬ್ಬದ ಪ್ರಯುಕ್ತ ಸಂತೆಗೆಬಂದಿದ್ದ ಕುರಿ ಮತ್ತು ಟಗರುಗಳ ಬೆಲೆ 1ಕ್ಕೆ ಸುಮಾರು ರು.10,000 ನಿಂದ ರು11,000 ವರೆಗೆ ಮಾರಾಟವಾಗುತ್ತಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.