'ಸಂಗೀತ-ನಾಟಕ ಜೀವನದ ಅವಿಭಾಜ್ಯ ಅಂಗ'
ಹಾಸನ: ಸಂಗೀತ ಮತ್ತು ನಾಟಕವನ್ನು ಮನುಷ್ಯ ಜತೆಯಲ್ಲಿಯೇ ಬೆಳೆಸಿಕೊಂಡು ಬಂದಿದ್ದಾನೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಜವರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹಾಸನಾಂಬ ಕಲಾಭವನದಲ್ಲಿ ಸಿದ್ಧರಾಮೇಶ್ವರ ಕಲಾಸಂಘ, ಯಲಗುಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶನಿಪ್ರಭಾವ (ರಾಜ ಸತ್ಯವ್ರತ) ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ಮತ್ತು ನಾಟಕವನ್ನು ಮನುಷ್ಯನ ಜೀವನದ ಜೊತೆ ಜೊತೆಯಲ್ಲಿಯೇ ಬಂದಿದೆ. ಆಯಾ ಕಾಲದಲ್ಲಿ ನಡೆದ ಘಟನೆಯನ್ನು ಸತ್ಯತೆ ಆಧಾರದ ಮೇಲೆ ಅಂಶವನ್ನು ಒಳಗೊಂಡ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ನಶಿಸಿ ಹೋಗುತ್ತಿರುವ ನಾಟಕವನ್ನು ಎಲ್ಲೂ ಒಂದುಕಡೆ ಉಳಿಸುವಂತಹ ಕೆಲಸ ನಡೆಯುತ್ತಿದೆ ಎಂದರು.
ಕಲೆ ದೈವದತ್ತ ಶಕ್ತಿ: ಕಲೆ ಎಂಬುದು ದೈವದತ್ತವಾದ ಶಕ್ತಿ. ದೇಶದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಲ್ಪವಾದರೂ ಪ್ರಯತ್ನ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುವುದರ ಮೂಲಕ ಮುಂದಿನ ಜನಾಂಗಕ್ಕೆ ಕೊಂಡ್ಯೂಯ್ಯಬೇಕಾಗಿದೆ ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆ ಒಳಗೆ ಒಂದು ವಾರಗಳ ಕಾಲ ನಾಟಕೋತ್ಸವ ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಬೇಕು. ಇಂತಹ ಕಾರ್ಯಕಮ್ರ ಮಾಡುವುದರ ಮೂಲಕ ಕಲೆಯನ್ನು ಉಳಿಸಬೇಕು ಎಂದು ಕರೆ ನೀಡಿದರು. ಕೆಪಿಸಿಸಿ ಸದಸ್ಯ ಮಹೇಶ್ ಮಾತನಾಡಿದರು.
ವಿವಿಧ ಕಲಾವಿದರಿಗೆ ಗೌರವ: ಈ ವೇಳೆ ರಂಗಕಲಾವಿದ ಪಿ.ಎಂ. ಮಲ್ಲೇಶಗೌಡ, ರಾಮನಗರದ ಬೈರೇಗೌಡ, ಕುಣಿಗಲ್ನ ಎನ್. ಸಿದ್ದೇರಾಮೇಗೌಡ, ಚನ್ನೇನಹಳ್ಳಿ ರಂಗ ನಿರ್ದೇಶಕ ಕೃಷ್ಣಪ್ಪ, ಕೆ.ಬಿ. ಲೋಕೇಶ್, ಬಿ.ಇ. ರುಕ್ಮಾಂಗದ್, ಎಸ್.ಆರ್. ಗೌಡ, ಮಂಡ್ಯದ ಕಲಾವಿದ ಟಿ. ಕೆಂಚೇಗೌಡ, ಹಿರಿಯೂರು ಕಲಾವಿದ ಕೆ.ಆರ್. ಕಣ್ಣಪ್ಪ, ಕಿರುಚಿತ್ರ ನಿರ್ದೇಶಕ ಹನುಮಂತು, ಚಿಕೆ.ಎಂ. ಶಿವು, ಆರ್. ಜಯಶೇಖರಯ್ಯ ಸೇರಿಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲೋಕಾಯುಕ್ತ ಡಿವೈಎಸ್ಪಿ ಶಿವಬಸಪ್ಪ, ಮಂಜುನಾಥ್, ಅಂದಾನಿಗೌಡ, ಶಾಂತಕುಮಾರ್, ತಬಲ ನಂಜಪ್ಪ, ನಾರಾಯಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

