ಯೋಗಶಿಕ್ಷಣ ಶಾಲೆಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮದಿನಾಚರಣೆ
ಹಾಸನ: ನಗರದ ವಿವೇಕಾನಂದ ಯೋಗ ಶಿಕ್ಷಣಶಾಲೆಯಲ್ಲಿ ಗಾಂಧಿಜಯಂತಿ ಮತ್ತು ಶಾಸ್ತ್ರೀ ಜನ್ಮದಿನಾಚರಣೆ ಆಚರಿಸಲಾಯಿತು. ಯೋಗಶಿಕ್ಷಕ ಎಚ್.ಬಿ. ರಮೇಶ್ ಮಾತನಾಡಿ, ರಾಷ್ಟ್ರಪಿತ ಗಾಂಧೀಜಿ ತಮ್ಮ ಸಂಕಲ್ಪಬಲದಿಂದ ಸತ್ಯ, ಅಹಿಂಸೆಗಳನ್ನು ಜೀವಿತದ ಕೊನೆಯವರೆಗೂ ಪಾಲಿಸಿ, ಜನರಿಗೆ ಅದರ ಮನವರಿಕೆ ಮಾಡಿ ಅದರ ಮೂಲಕವೇ ಸ್ವಾತಂತ್ರ್ಯಗಳಿಸಲು ಪ್ರಮುಖಪಾತ್ರ ವಹಿಸಿದರು ಎಂದು ಹೇಳಿದರು. ಲೇಖಕ ಗೊರೂರು ಶಿವೇಶ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಜನಾರ್ದನ್ ಮಾತನಾಡಿ, ಗಾಂಧೀಜಿತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗಾಂಧೀಜಿ ಮತ್ತು ಶಾಸ್ತ್ರಿಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ಯೋಗಶಾಲೆಯ ಹಿರಿಯರಾದ ಚಂಗಪ್ಪ, ಧರ್ಮಪ್ಪ, ಪುಟ್ಟಪ್ಪ, ಚಂದ್ರೇಗೌಡ, ರಾಮಣ್ಣ, ಚಂದ್ರ, ಆನಂದ್, ಸುರೇಶ್, ಮದಕರಿನಾಯಕ, ಮಂಜುನಾಥ್ ಶೈಲಜಾ, ಶ್ಯಮಂತಕಮಣಿ, ಗಿರಿಜ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

