ಮನೆ ಮನೆಗಳಲ್ಲಿ ನವರಾತ್ರಿ ಬೊಂಬೆ ಪ್ರದರ್ಶನ
ಹಾಸನ: ನವರಾತ್ರಿ ವೈಭವದ ಪ್ರಮುಖ ಅಕರ್ಷಗಳಲ್ಲಿ ಬೊಂಬೆಗಳ ಪ್ರದರ್ಶನ ಒಂದು. ನವರಾತ್ರಿಯಲ್ಲಿ ಪ್ರತಿ ಮನೆಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಪ್ರತೀತಿ.
ನವರಾತ್ರಿಯ ಹಬ್ಬಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ ಹಾಸನ ನಗರದ ಟೈಮ್ಸ್ ಶಾಲೆ ಮಕ್ಕಳು ಶಾಲೆಯಲ್ಲಿ ನವರಾತ್ರಿಯ ಬೊಂಬೆಗಳನ್ನು ಪ್ರತಿಷ್ಠಾಪಿಸುವ ಮೂಲಕ ಸಂಪ್ರದಾಯ ಮೆರೆದಿದ್ದಾರೆ.
ಶಾಲೆಯಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ನವರಾತ್ರಿಯ ವೈಭವು ಇತರೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಈ ಹಬ್ಬಗಳ ಬಗ್ಗೆ ತಿಳಿಸಿಕೊಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ.
ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ: ನಗರದ ಉತ್ತರ ಬಡಾವಣೆ, ಹೇಮಾವತಿ ನಗರದ ಸೇರಿದಂತೆ ಇತರೆ ಕಡೆಗಳಲ್ಲಿ ನವರಾತ್ರಿಯ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಪೂರ್ವಿಕರ ಕಾಲದಿಂದಲೂ ಆಚರಿಸಿಕೊಂಡ ಬಂದಿರುವ ಈ ನವರಾತ್ರಿ ಬೊಂಬೆಗಳ ಪ್ರದರ್ಶ ಆಕರ್ಷಣೀಯವಾಗಿದೆ.
ಆಧುನಿಕತೆಗೆ ತಕ್ಕಂತೆ ಸ್ವಲ್ಪಮಟ್ಟಿಗೆ ನೂತನ ರೀತಿಯಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಹೆಚ್ಚು ಆಕರ್ಷಣೆಗೆ ಪಾತ್ರರಾಗಿ ಸಂಪ್ರದಾಯವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸಾಗಿದ್ದಾರೆ.
ದೇಶಾದ್ಯಂತ ಈ ನವರಾತ್ರಿ ಹಬ್ಬ ಬಂತೆಂದರೆ ಒಂಭತ್ತು ದಿನಗಳ ಕಾಲ ಚಾಮುಂಡೇಶ್ವರ, ದುರ್ಗಿ ಪೂಜೆ, ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಜೊತೆಗೆ ಬೊಂಬೆಗಳ ಪ್ರದರ್ಶನವು ಸಹ ಹೆಚ್ಚು ಆಕರ್ಷಣೀಯ.
ಬೊಂಬೆಗಳ ಪ್ರದೇಶನವು ಮನೆ ಮನೆಗಳಲ್ಲಿ ಪೂರ್ವಿಕರ ಕಾಲದಿಂದಲೂ ಆಚರಿಸಿಕೊಂಡು ಬಂದಂತಹ ಸಂಪ್ರದಾಯದ ಪ್ರತೀಕವಾಗಿದೆ. ಮನೆಗಳಲ್ಲಿ ಬೊಂಬೆಗಳನ್ನು ಸುಂದರವಾಗಿ ಅಲಂಕರಿಸಿ ಪ್ರತಿಷ್ಠಾಪಿಸಲಾಗುತ್ತದೆ. ಮನಗಳಲ್ಲಿ ಒಂಭತ್ತು ದಿನಗಳ ಕಾಲ ಮಹಿಳೆಯರು ಮತ್ತು ಮಕ್ಕಳಿಗೆ ಎಲ್ಲಿಲ್ಲದಷ್ಟು ಸಂತೋಷ, ಸಂಭ್ರಮ ಮತ್ತು ಸಡಗರ.
ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಸಂದರ್ಭದಲ್ಲಿ ನಾಡಿನ ಸಂಸ್ಕೃತಿಯು ನಶಿಸುತ್ತಿರುವ ಸಂದರ್ಭದಲ್ಲಿ ನಾಡಿನಾದ್ಯಂತ ನವರಾತ್ರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಕೆಲವು ಮನೆಗಳಲ್ಲಿ ವಂಶಪಾರಂಪರ್ಯವಾಗಿ ಬೊಂಬೆಗಳ ಪ್ರದರ್ಶನವನ್ನು ಆರ್ಚರಿಸುವ ಮೂಲಕ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ನವರಾತ್ರಿ ಅಂದ್ರೇ ಒಂದು ರೀತಿಯ ವೈಭವ, ಸಂಭ್ರಮದ ವಾತಾವರಣ. ನಾಡಿನೆಲ್ಲೆಡೆ ಮನೆ ಮನೆಗಳಲ್ಲಿ ನಾನಾ ಬಗೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಪುರಾಣದ ಕಥೆಗಳನ್ನು ಹೋಲುವಂತಹ ಬೊಂಬೆಗಳನ್ನು ಪ್ರದರ್ಶಿಸುವ ಮೂಲಕ ಬೊಂಬೆ ಇಡುವ ಪದ್ಧತಿ ಇನ್ನೂ ಜೀವಂತಾಗಿದೆ.
ಬೊಂಬೆಗಳ ಪ್ರದರ್ಶನ ಕೇವಲ ಅಕರ್ಷಣೆ ಹಾಗೂ ಅಡಂಬರವಲ್ಲ. ಸಂಪ್ರದಾಯ ಹಾಗೂ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಬೊಂಬೆ ಪ್ರದರ್ಶನದಲ್ಲಿ ಪಟ್ಟದ ಬೊಂಬೆ, ದಸರ ಜಂಬೂಸವಾರಿ, ನವದುರ್ಗಿ, ಅಷ್ಟಲಕ್ಷ್ಮೀ, ದಶಾವತಾರ, ರಾಯಾಮಣ, ಮಹಾಭಾರತ, ಬಾಲಕೃಷ್ಣನ ಲೀಲೆ, ರಾಜ-ರಾಣಿ, ವಿವಾಹ ಸಂಭ್ರಮ, ಕೋಟಿ ಲಿಂಗ ಸೇರಿದಂತೆ ಇತರೆ ಸಂಪ್ರದಾಯ ಹಾಗೂ ಪರಂಪರೆಯನ್ನು ಸಾರುವಂತಹ ಬೊಂಬೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ಇತ್ತೀಚೆಗೆ ಸ್ವಲ್ಪ ಹೊಸತನ ತಂದು ಹಳ್ಳಿಯ ಪರಿಸರ, ನಮ್ಮೂರ ಶಾಲೆ, ಮಕ್ಕಳು ವೇಷಭೂಷಣ, ಆಧುನಿಕ ಮನೆಗಳ ಸೌಲವತ್ತುಗಳು. ಜೊತೆಗೆ ಮಣ್ಣಿನಿಂದ ನಿರ್ಮಿಸಿರುವಂತಹ ಬೆಟ್ಟಗುಟ್ಟಣ, ಈಶ್ವರ, ದಶಾವತಾರ ಸಾಲು ಯಮುನಾ, ವಾದ್ಯ ಗಣಪತಿ ಸಾಲು, ಕೃಷ್ಣಾವತಾರ, ನಾನಾ ರೂಪದ ಗಣಪತಿ, ಸಾಧುಗಳ ಸಾಲು, ಫ್ಯಾನ್ಸಿ ಬೊಂಬೆಗಳು, ರೈತ, ಶಿಲಾ ಬಾಲಕಿಯರು, 50 ವರ್ಷಗಳಿಗೂ ಹಳೆಯದಾದ ಬೊಂಬೆಗಳು, ಆನೆ, ಒಂಟೆ ಮತ್ತು ಕುದುರೆಗಳು, ಮಕ್ಕಳ ಆಟಿಕೆಗಳನ್ನೊಳಗೊಂಡ ಪಟ್ಟದ ಬೊಂಬೆಗಳು ಸಂಪ್ರದಾಯವನ್ನು ಸಾರುವಂತದ್ದಾಗಿದೆ ಎಂದು ನಗರ ನಿವಾಸಿಗಳು ಹೇಳುತ್ತಾರೆ.
ಬೊಂಬೆ ಪ್ರದರ್ಶನವು ಪ್ರತಿವರ್ಷವೂ ಒಂದಲ್ಲ ಎಂದು ರೀತಿಯಲ್ಲಿ ವಿಶಿಷ್ಟವಾದ ಬೊಂಬೆಗಳನ್ನು ಅಲಂಕರ ಮಾಡುವ ಮೂಲಕ ಜನರನ್ನು ಬೊಂಬೆಯತ್ತ ಆಕರ್ಷಿಶಲಾಗುತ್ತದೆ. ಇದನ್ನು ನೋಡಲು ಮಕ್ಕಳು, ಮಹಿಳೆಯರು ಮನೆ ಮನೆಗಳಿಗೆ ತೆರಳಿ ವಿಶಿಷ್ಟವಾಗಿ ಅಲಂಕರಿಸಿದಂತಹ ಬೊಂಬೆಗಳನ್ನು ನೋಡಿ ನವರಾತ್ರಿ ಹಬ್ಬದ ಮೆರಗನ್ನು ಕಾಣುತ್ತಿದ್ದಾರೆ. ಮಕ್ಕಳಿಗೆ ಶಾಲೆಗಳಲ್ಲಿ ದಸರೆಯ ರಜೆ ಇರುವುದರಿಂದ ಬೊಂಬೆಗಳ ಪ್ರದರ್ಶನವು ಒಂದು ಹೆಚ್ಚು ಆಕರ್ಷಣೆಯಾಗಿ ಮಕ್ಕಳ ಸಂತೋಷಕ್ಕೆ ಸರಿಸಾಟಿ ಇಲ್ಲದಂತಾಗಿದ್ದು, ಮನೆಯಲ್ಲಿ ನವರಾತ್ರಿಯ ಸಂಭ್ರಮ ಮೂಡಿದೆ.
ಪಿ. ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

