ಚನ್ನರಾಯಪಟ್ಟಣ ಘಟಕಕ್ಕೆ ಕನಿಷ್ಠ 15 ಹೊಸ ಬಸ್ ನೀಡಲು ಶಾಸಕ ಆಗ್ರಹ
ಚನ್ನರಾಯಪಟ್ಟಣ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚನ್ನರಾಯಪಟ್ಟಣ ಘಟಕಕ್ಕೆ ಕನಿಷ್ಠ 15 ಹೊಸ ಬಸ್ಗಳನ್ನು ನೀಡುವಂತೆ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಸಾರಿಗೆ ಇಲಾಖೆ ಹಾಸನ ವಿಭಾಗಾಧಿಕಾರಿ ಅವರಿಗೆ ಒತ್ತಾಯಿಸಿದರು. ಪಟ್ಟಣದ ಸಾರಿಗೆ ಡಿಪೋದಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಚನ್ನರಾಯಪಟ್ಟಣ ಡಿಪೋದಲ್ಲಿರುವ ಬಸ್ಗಳು ಹಳೆ ಮಾದರಿಯಲ್ಲಿದ್ದು, ದೂರದ ರೂಟ್ಗಳಿಗಾದರೂ ಕನಿಷ್ಠ 15 ಹೊಸ ಬಸ್ಗಳನ್ನು ನೀಡುವಂತೆ ಹಾಸನ ವಿಭಾಗಾಧಿಕಾರಿ ನಾರಾಯಣಸ್ವಾಮಿಗೆ ಮನವಿ ಮಾಡಿದರು. ಹಳೆ ಮಾದರಿಯ ಬಸ್ಗಳಿರುವ ಕಾರಣ ಡಿಪೋದಲ್ಲಿ ಬಿಡಿಭಾಗಗಳ ಕೊರತೆಯಿರುವ ಕಾರಣ ಕೆಲ ಕೆಲ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ. ಪಟ್ಟಣದ ಹೊರವಲಯದ ಬೈಪಾಸ್, ಬರಗೂರು, ಹಾಗೂ ಶೆಟ್ಟಿಹಳ್ಳಿ ಡೈರಿ ಸೇರಿದಂತೆ ಬಸ್ ರೂಟ್ ರಚಿಸಿ ಹೊಸ ಬಸ್ ಮಾರ್ಗಕ್ಕೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳಕ್ಕೆ ಅತ್ಯಾಧುನಿಕ ಬಸ್ಗಳು ಅವಶ್ಯಕವಿದ್ದು, ನಾಲ್ಕು ಹೊಸ ಬಸ್ಗಳನ್ನು ನೀಡುವಂತೆ ಒತ್ತಾಯಿಸಿದರು.
ಶಾಸಕರ ಮನವಿ ಸ್ವೀಕರಿಸಿದ ಜಿಲ್ಲಾ ವಿಭಾಗಾಧಿಕಾರಿ ನಾರಾಯಣಸ್ವಾಮಿ ದಸರಾ ಕಳೆದ ನಂತರ ಚನ್ನರಾಯಪಟ್ಟಣ ಡಿಪೋಗೆ 8 ಹೊಸ ಬಸ್ಗಳು ಹಾಗೂ ವಾಹನಗಳ ಬಿಡಿಭಾಗಗಳನ್ನು ನೀಡಲಾಗುವುದು.
ಪಟ್ಟಣದಿಂದ ಶ್ರವಣಬೆಳಗೊಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎರಡು ಬಸ್ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಡಿಟಿಒ ಶ್ರೀನಿವಾಸ್, ಡಿಎಂಎ ನಾಗರಾಜು, ಡಿಪೋ ವ್ಯವಸ್ಥಾಪಕ ದೇವರಾಜೇಗೌಡ ಮೊದಲಾದವರು ಇದ್ದರು.
ಲೋಕಕಲ್ಯಾಣಾರ್ಥ ಚಂಡಿಕಾ ಹೋಮ
ಹೊಳೆನರಸಿಪುರ: ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಹರಿಹರಪುರ ಗ್ರಾಮದಲ್ಲಿನ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ದುರ್ಗಾಷ್ಟಮಿಯಂದು ವೇ.ಬ್ರ.ಎ.ಎಸ್.ಕೃಷ್ಣಮೂರ್ತಿಭಟ್ಟರ ಮುಂದಾಳತ್ವದಲ್ಲಿ ಚಂಡಿಹೋಮ ನಡೆಸಲಾಯಿತು.
ಈ ದೇವಾಲಯದಲ್ಲಿ ಪ್ರತಿ ವರ್ಷವೂ ಲೋಕಕಲ್ಯಾಣಾರ್ಥವಾಗಿ ಚಂಡಿಹೋಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ ಚಂಡಿಹೋಮವನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಗಿತ್ತು. ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶೃಂಗೇರಿ ಶಾರದಾ ಪೀಠಾಧ್ಯಕ್ಷರಾದ ಭಾರತೀತೀರ್ಥಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಅ.5ರಿಂದಲೂ ವಿವಿಧ ಪೂಜಾ ಕಾರ್ಯಗಳು ನೆರವೇರಿದವು.
ಇದರ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಪೂಜೆ, ದುರ್ಗಾ ಸಪ್ತಶತಿ ಪಾರಾಯಣ ಮತ್ತು ಪ್ರದೋಷ ಕಾಲದಲ್ಲಿ ಪಂಚಾಮೃತ ಅಭಿಷೇಕ, ಲಲಿತಾ ಸಹಸ್ರನಾಮ, ತ್ರಿಶತಿ, ಲಲಿತಾಷ್ಟೋತ್ತರ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತಾಧಿಗಳು ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.ವೇ.ಬ್ರ ಕೃಷ್ಣಮೂರ್ತಿಭಟ್ಟರ ಪ್ರಧಾನಾಚಾರ್ಯತ್ವದಲ್ಲಿ ಅಮ್ಮನವರಿಗೆ ವಿವಿಧ ಅಲಂಕಾರಗಳೂ ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

