ಹಾಸನ

ಆಹಾರ ಕಲಬೆರಕೆದಾರರಿಗೆ 5 ಲಕ್ಷ ದಂಡ, ಜೈಲು ಶಿಕ್ಷೆ

Published On :

ಹಾಸನ: ಆಹಾರ ಕಲಬೆರಕೆ ಮಾಡಿ ಮಾರಾಟ ಮಾಡಿದವರಿಗೆ ಆಹಾರ ಸುರಕ್ಷಿತ ಕಾಯ್ದೆ  2006ರ ಪ್ರಕಾರ 6 ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರು. ದಂಡ ವಿಧಿಸಲಾಗುವುದು ಎಂದು ಆಹಾರ ಸಂರಕ್ಷಣಾಧಿಕಾರಿ ಬಾಲ ಸುಬ್ರಮಣ್ಯಮ್ ಎಚ್ಚರಿಸಿದ್ದಾರೆ.
ನಗರದ ಜೆಸಿಐಹಾಸನ್ ಸಂಜೀವಿನಿ ಸಂಸ್ಥೆ ಹಾಗೂ ಜಿಲ್ಲಾ ಅಂಕಿತಾಧಿಕಾರಿ, ಆಹಾರ ಸಂರಕ್ಷಣಾಧಿಕಾರಿ ಕಚೇರಿ ಹಾಸನಾಂಬ ಬಿ.ಎಡ್ ಕಾಲೇಜು ಆಶ್ರಯದಲ್ಲಿ  ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಲಬೆರಕೆ ಒಂದು ಪಿಡುಗಾಗಿದ್ದು, ವ್ಯಾಪಾರಿಗಳು ಹಣಗಳಿಕೆಗಾಗಿ ಆಹಾರ ಪದಾರ್ಥಗಳಿಗೆ ಕಲಬೆರಕೆ ಮಾಡಿ ಗ್ರಾಹಕರ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಾರೆ ಎಂದು ವಿಷಾದಿಸಿದರು.
ಆಹಾರ ಕಲಬೆರಕೆ ತಡೆಯುವಲ್ಲಿ ಬಳಕೆದಾರರ ಪಾತ್ರ ಮುಖ್ಯವಾದುದು. ಯಾವುದೇ ಮಾರಾಟಗಾರ ಕಲಬೆರಕೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೆ ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕು. ದೂರು ನೀಡಿದರೆ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ವಿವಿಧ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಯಾವ ರೀತಿ ಕಂಡು ಹಿಡಿಯ ಬಹುದು ಎಂಬುದನ್ನು  ವಿವರಿಸಿದರು.
ಜೆ.ಸಿ.ಐ ಅಧ್ಯಕ್ಷ ಪ್ರಸಾದ್ ಮಾತನಾಡಿ ಕುಟುಂಬ ಆಹಾರಕ್ಕಾಗಿ ವೆಚ್ಚ ಮಾಡುವ ಹಣದಲ್ಲಿ  ಐದು ಭಾಗವಾಗಿ ವಿಂಗಡಿಸಿ ಐದನೇ ಒಂದು ಭಾಗ ಧಾನ್ಯಕ್ಕೆ ಇನ್ನೊಂದು ಭಾಗ ಮಾಂಸ ಅಥವಾ ಬೆಳೆ ಕಾಳುಗಳಿಗೆ, ಹಾಲು ಮತ್ತು ಅದರ ಉತ್ಪನ್ನಗಳಿಗೆ ಮತ್ತೊಂದು ಭಾಗ ತರಕಾರಿ ಹಣ್ಣುಗಳಿಗೆ  ವಿನಿಯೋಗಿಸಬೇಕು. ಈ ರೀತಿ ವಿಂಗಡಿಸಿಕೊಂಡರೆ ಸಾಕಷ್ಟು ಸಮತೋಲನ ಆಹಾರ ದೊರೆಯುವುದು ಎಂದು ಹೇಳಿದರು.
ಸಹ ಪ್ರಾಧ್ಯಾಪಕ  ಜಿ.ಕೆ.ಶ್ರೀನಿವಾಸ್ ಮಾತನಾಡಿ ಆಹಾರದಲ್ಲಿ ಸಾಂಬಾರು ಸೊಪ್ಪಿನೊಡನೆ ಪಾರ್ಥೇನಿಯಂ ಕಳೆ ತೆಗೆಯದೆ ಬಳಸುವುದು, ಪಾನಿಪೂರಿ, ಗೋಬಿ ಮಂಜೂರಿಗಳಲ್ಲಿ ಬಳಸುವ ಅಧಿಕ ರಾಸಾಯನಿಕ ಬಳಕೆ , ರುಚಿಗೆ ಅಧಿಕ ಉಪ್ಪು ಸೇವನೆಯಿಂದ  ಬಹಳಷ್ಟು ದುಷ್ಪರಿಣಾಮ ಉಂಟಾಗುವುದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.