ರೋಟರಿ ಸನ್ರೈಸ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಹಾಸನ: ರೋಟರಿ ಸನ್ರೈಸ್ ಸಂಸ್ಥೆಯು ಸ್ನೇಹ ಮತ್ತು ಸೌಹಾರ್ದತೆ ಸಾರಲು ಹಾಗೂ ಪಲಲ್ಸ್ಪೋಲಿಯೋ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರೋಟರಿ ಜಿಲ್ಲಾ 2180 ಆಯ್ದ ಕ್ಲಬ್ಗಳ ಆಹ್ವಾನಿತ ಎರಡು ದಿನದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ನಗರದ ಎಚ್.ಕೆ.ಎಸ್.ಇಂಟರ್ ನ್ಯಾಷನಲ್ ಶಾಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ ರೋಟರಿ ಜಿಲ್ಲೆಯ ಕುಂದಾಪುರ, ಕೋಟೇಶ್ವರ, ಉಡುಪಿ, ಮಂಗಳೂರು, ಮೈಸೂರು ಹಾಗೂ ಹಾಸನ ಜಿಲ್ಲೆಯ ಅರೇಹಳ್ಳಿ, ಚನ್ನರಾಯಪಟ್ಟಣ, ಹಾಸನ ರೋಟರಿ ಸಂಸ್ಥೆಗಳ ತಂಡಗಳು ಭಾಗವಹಿಸಿದ್ದವು. ಒಟ್ಟು 12 ತಂಡಗಳು ಪಾಲ್ಗೊಂಡಿದ್ದು, ಈ ಎಲ್ಲಾ ತಂಡಗಳಿಂದ ಸ್ವೀಕೃತ ಹಣದಲ್ಲಿ ಶ್ರೀ ಕೃಷ್ಣ ಅಂಧ ಮಕ್ಕಳ ಶಾಲೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡುವ ಉದ್ದೇಶ ಹೊಂದಲಾಗಿದೆ. ರೋ. ಉಪ ರಾಜ್ಯಪಾಲ ಎನ್. ರಮೇಶ್, ರೋಟರಿ ನಿವೃತ್ತ ಉಪ ರಾಜ್ಯಪಾಲ ಸೂರ್ಯಪ್ರಕಾಶ್ ಭಟ್, ಡಾ.ಸುಧೀರ್, ಸಂಸ್ಥೆ ಅಧ್ಯಕ್ಷ ಎ.ನಟೇಶ್, ಮೋಹನ್ ಇತರರು ಉಪಸ್ಥಿತರಿದ್ದರು.
ರಜೆ ರಹಿತ ಬಿ.ಇಡಿ ಪದವಿ ಕಡ್ಡಾಯಕ್ಕೆ ಮರಿತಿಬ್ಬೇಗೌಡ ಆಕ್ಷೇಪ
ಮೈಸೂರು: ಪಿಯುಸಿ ಉಪನ್ಯಾಸಕರು ವೇತನ ಮತ್ತು ರಜೆ ರಹಿತವಾಗಿ ಬಿ.ಇಡಿ ಪದವಿ ಕಡ್ಡಾಯವಾಗಿ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಹೇಳಿಕೆ ಬಗ್ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳಲ್ಲಿ 2009 ಮತ್ತು 2013ನೇ ಸಾಲಿನಲ್ಲಿ ನೇಮಕವಾಗಿರುವ ಬಿ.ಇಡಿ ಪದವಿ ರಹಿತ ಉಪನ್ಯಾಸಕರು ಬಿ.ಇಡಿ ಪದವಿ ಮಾಡಿಕೊಳ್ಳಲು ವೇತನ ಮತ್ತು ರಜೆ ರಹಿತವಾಗಿ ನವೆಂಬರ್ನಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸುವುದಾಗಿ ಸಚಿವರು ಹೇಳಿರುವುದು ದುರದೃಷ್ಟಕರ. ಸಚಿವರು ತಮ್ಮ ಅಸಂಬದ್ಧ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.2009ರಲ್ಲಿ ನೇಮಕವಾದ 2570 ಉಪನ್ಯಾಸಕರ ಪೈಕಿ 1347 ಹಾಗೂ 2013ರಲ್ಲಿ ನೇಮಕವಾದ 1764 ಉಪನ್ಯಾಸಕರ ಪೈಕಿ 991 ಮಂದಿ ಬಿ.ಇಡಿ ಪದವಿ ಪಡೆದಿಲ್ಲ. 2009 ರಲ್ಲಿ ಅರ್ಜಿ ಆಹ್ವಾನಿಸುವಾಗ ಬಿ.ಇಡಿ ಕಡ್ಡಾಯ ಎಂದು ತಿಳಿಸಿಲ್ಲ. ಆದರೆ, ನೇಮಕಾತಿ ಆದೇಶ ನೀಡುವಾಗ ಬಿ.ಇಡಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ.
ಈ ಉಪನ್ಯಾಸಕರಿಗೆ ಮಾತ್ರ ರಾಜ್ಯ ಮುಕ್ತ ವಿವಿ ಬಿ.ಇಡಿ ಪದವಿ ಪಡೆಯಲು ಅವಕಾಶ ಮಾಡಿಕೊಡುವುದಾಗಿ ಅನೇಕ ಬಾರಿ ಶಿಕ್ಷಣ ಸಚಿವರು ಹೇಳಿದ್ದು ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

