ಹಾಸನ

ಸರ್ಕಾರದ ಸವಲತ್ತು ಸದ್ಬಳಕೆಗೆ ಕುರುಹಿನಶೆಟ್ಟಿ ಜನಾಂಗಕ್ಕೆ ಸಲಹೆ

Published On :

ಕ.ಪ್ರ. ವಾರ್ತೆ ಹಾಸನ ಅ.21
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಾಂಗದವರು ಇವುಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಬಿ.ಈಶ್ವರಪ್ಪ ತಿಳಿಸಿದರು.
 ನಗರದ ರವೀಂದ್ರನಗರದಲ್ಲಿರುವ ಜನಾಂಗದ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ನೌಕರರ ಸಂಘದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ರಾಜ್ಯದ ವಿವಿಧೆಡೆ ಜನಾಂಗದ 125 ಶಾಖೆಗಳಿವೆ. ಪ್ರತಿ ಸಂಘದ ಪದಾಧಿಕಾರಿಗಳು ಒಗ್ಗೂಡಿ ಮತ್ತು ಪರಸ್ಪರ ಸಹಕಾರದಿಂದ ಜನಾಂಗದವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
    ಜನಾಂಗದ ವೈದ್ಯರನ್ನು ಸನ್ಮಾನಿಸಿದ ಬೆಳ್ಳಿಚುಕ್ಕಿ ವೀರೇಂದ್ರ ಮಾತನಾಡಿ, ರಾಜ್ಯದ ನಾನಾ ಕಡೆಗಳಲ್ಲಿ ಜನಾಂಗದ 28 ರಿಂದ 32 ಲಕ್ಷ ನೇಕಾರ ಕುರುಹಿನಶೆಟ್ಟಿ  ಜನರು ಇದ್ದಾರೆ. ಇವರನ್ನೆಲ್ಲ ಸಂಘಟಿಸಿ ಸಮಾವೇಶ ನಡೆಸುವ ಮೂಲಕ ರಾಜಕೀಯವಾಗಿಯೂ ಸಮಾಜದ ಜನರು ಮುಂದೆ ಬರಬೇಕು ಎಂದು ಆಶಿಸಿದರು.
  ಸಮಾಜದ ಜನರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ, ಹಂಚಿ ಹೋಗಿರುವುದರಿಂದ ನೇಕಾರ ಕುರುಹಿನಶೆಟ್ಟಿ ಜನಾಂಗ ಹೆಚ್ಚು ಪ್ರಭಾವ ಬೀರಿಲ್ಲ. ಸಮಾಜದ ಸಂಘಟ ನೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿ ಜಿಲ್ಲಾ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ನಗರದ ರವೀಂದ್ರನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಜನಾಂಗದ ವಿದ್ಯಾರ್ಥಿ ನಿಲಯಕ್ಕೆ ಈಗಾಗಲೇ 60 ಲಕ್ಷ ರು. ವೆಚ್ಚ ಮಾಡಲಾಗಿದೆ.
  ಜನಾಂಗದವರು ಮತ್ತು ಸರ್ಕಾರ ಆರ್ಥಿಕ ನೆರವು ನೀಡಿದೆ. ಇದರ ಕಾಮಗಾರಿ ಪೂರ್ಣ ಗೊಳಿಸಲು ಇನ್ನೂ 20-25 ಲಕ್ಷ ರು. ಗಳ ಅಗತ್ಯವಿದೆ. ಸಮಾಜದ ಉಳ್ಳವರು ಈ ಕಟ್ಟಡ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.
  ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಶೆಟ್ಟಿ ಮಾತನಾಡಿ, ಐದು ವರ್ಷದ ಹಿಂದೆ ಸಂಘವು ಅಸ್ತಿತ್ವಕ್ಕೆ ಬಂದಿದೆ. ಜನಾಂಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ಪುರಸ್ಕಾರ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 65 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
 ಚಲನಚಿತ್ರ ಮತ್ತು ಕಿರುತೆರೆ ನಟ ಕಾರ್ತೀಕ್ ಜಯರಾಂ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪಶೆಟ್ಟಿ, ಕೆ.ಜೆ.ನಾರಾಯಣ ಮಾತನಾಡಿದರು. ನೇಕಾರ ಕುರುಹಿನಶೆಟ್ಟಿ ಜನಾಂಗದ ಗಣ್ಯರು, ವೈದ್ಯರು, ವಕೀಲರು ಮತ್ತು ಜಿಲ್ಲೆಯ ವಿವಿಧೆಡೆಯ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಜಿಲ್ಲಾ ಕುರುಹಿನಶೆಟ್ಟಿ ಸಂಘದ ಗೌರವಾಧ್ಯಕ್ಷ ರಂಗಶೆಟ್ಟಿ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜನಾಂಗದ ಕೇಂದ್ರ ಸಂಘದ ಗೌರವ ಕಾರ್ಯದರ್ಶಿ ಗೋಪಾಲ ಕೃಷ್ಣ, ಕೈಗಾರಿಕೋದ್ಯಮಿ ಲಕ್ಷ್ಮೀಕಾಂತ, ಡಾ.ತಿಮ್ಮಶೆಟ್ಟಿ, ಟಿ.ಎಚ್.ಶಿವಾನಂದ್, ಬಿ.ಎನ್.ಜಯಕುಮಾರ್, ಕೆ.ಎಸ್. ಸೂರ್ಯನಾರಾಯಣ, ಕೆ.ಎಸ್. ಮಂಜುನಾಥಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪರಮೇಶ್ ಸ್ವಾಗತಿಸಿದರು. ನರಸಿಂಹಮೂರ್ತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.