ಬೆಳಕಿನ ಹಬ್ಬ; ಸೋಲಾರ್ ಬೀದಿ ದೀಪಗಳ ಅಳವಡಿಕೆಗೆ ಆಗ್ರಹ
ಕ.ಪ್ರ.ವಾರ್ತೆ ರಾಮನಾಥಪುರ ಅ.31
ಈ ಬಾರಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಹಾಗೂ ಬೆಳಕಿನ ಹಬ್ಬ ದೀಪಾವಳಿ ಎರಡು ಒಟ್ಟಿಗೆ ಆಗಮಿಸಿರುವುದು ನಮ್ಮ ನಾಡಿನ ಜನತೆಗೆ ಸಂತಸದಿಂದ ಸಂಭ್ರಮ ಆಚರಿಸಲು ಇನ್ನಷ್ಟು ಇಂಬು ನೀಡಿದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೊನಗಾನಹಳ್ಳಿ ಎಚ್.ಇ. ಜಗದೀಶ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯನ ಬಾಳಿನಲ್ಲಿ ಈ ಕತ್ತಲೆಂಬ ಸಂಕಷ್ಟವನ್ನು ಹೋಗಲಾಡಿಸಿ ಸುಖವೆಂಬ ಬೆಳಕನು ನೀಡಲೆಂದು ಪ್ರಾರ್ಥಿಸವುದಾಗಿ ಹೇಳಿದರು.
ಈ ಬೆಳಕಿನ ಹಬ್ಬ ಆಚರಿಸುವ ವಾಡಿಕೆ ಬೆಳಕಿಗೆ ಹೆಚ್ಚು ಪ್ರಮುಖ್ಯತೆ ಬೆಳಕು ಅಂದ ಕೂಡಲೇ ನೆನಪಾಗುವುದು ಇಂದಿಗೂ ಎಷ್ಟು ಗ್ರಾಮಗಳು ವಿದ್ಯುತ್ ಕೊರತೆ ಬೀದಿ ದೀಪಗಳ ಅವ್ಯವಸ್ಥೆ ಈ ರೀತಿಯ ಬೆಳಕಿನಿಂದ ವಂಚಿತಗೊಂಡು ಕಗ್ಗತಲಲ್ಲೇ ಮುಳುಗಿ ಹೋಗುತ್ತಿವೆ. ಇನ್ನು 24 ಗಂಟೆ ನಿರಂತರ ವಿದ್ಯುತ್ ಎನ್ನುವ ಮಾತು ಬರೀ ಭಾಷಣಕ್ಕೆ ಮಾತ್ರ ಸೀಮಿತ ಕಾರ್ಯರೂಪಕ್ಕೆ ತರಲು ಅಸಾಧ್ಯದ ಮಾತು ಬಿಡಿ ಎಂದು ಹೇಳಿದರು.
ಸದ್ಯಕ್ಕೆ ಸೋಲಾರ್ ಬೀದಿ ದೀಪಗಳನ್ನಾದರೂ ಅನುಷ್ಠಾನಕ್ಕೆ ತರಲು ಸರ್ಕಾರ ಚಿಂತಿಸಬೇಕು, ಪಟ್ಟಣಗಳು ಮತ್ತು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಊರುಗಳಿಗೆ ಈ ಬೀದಿ ದೀಪದ ಅವ್ಯವಸ್ಥೆ ಇಂದಿನ ವಿದ್ಯುತ್ ಅಡಚಣೆ ಅಷ್ಟಾಗಿ ಪರಿಣಾಮ ಬೀರಲಾರದು. ಆದರೆ ಹೆಚ್ಚು ಸಂಪರ್ಕ ಇಲ್ಲದಿರುವ ಕೆಲವು ಕುಗ್ರಾಮಗಳು ಹಾಗೂ ಅರೇ ಮಲೆನಾಡು, ಮಲೆನಾಡು ಬೆಟ್ಟಗುಡ್ಡಗಳ ತಪ್ಪಲಿನ ಗ್ರಾಮಗಳು ಮತ್ತು ಪ್ರತಿ ದೇವಾಲಯಗಳಿಗೆ ಈ ಸೋಲಾರ್ ದೀಪಗಳ ಅವಶ್ಯಕತೆ ಹೆಚ್ಚು ಇದೆ. ಇದರಿಂದ ಕಾಡು ಪ್ರಾಣಿಗಳ ಹಾವಳಿ, ಕಳ್ಳತನ, ಸುಲಿಗೆ ಸಾಧ್ಯವಾದಷ್ಟು ತಡೆಗಟ್ಟಬಹುದು ಎಂದು ಹೇಳಿದರು.
ಆಕಾಶದಲ್ಲಿ ಚಂದಮಾಮನ ತೋರುವಂತೆ ಬಜೆಟ್ ಮಂಡಿಸುವ ಬದಲು ರಾಜ್ಯ ಸರ್ಕಾರ ಈ ಬಾರಿ ಬೆಳಕಿನ ಹಬ್ಬಕ್ಕೆ ಈ ಸೋಲಾರ್ ಬೀದಿ ದೀಪಗಳ ಸುವ್ಯವಸ್ಥೆಯನ್ನು ಕಾರ್ಯರೂಪಕ್ಕೆ ಕೊಡುಗೆಯಾಗಿ ತರುವುದರ ಮೂಲಕ ನಾಡಿನ ಜನತೆಗೆ ತಮ್ಮ ನಿತ್ಯ ಜೀವನದಲ್ಲಿ ಬೆಳಕಿನ ಹಬ್ಬ ಆಚರಿಸುವಂಥ ಒಂದು ಅಮೂಲ್ಯ ಸುವರ್ಣಾವಕಾಶವನ್ನು ಒದಗಿಸಿಕೊಡುವಂತೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

