ಹಾಸನ

ಕಾನೂನು ಅರಿವು ಕಾರ್ಯಕ್ರಮ ಉದ್ಘಾಟನೆ

Published On :

ಅರಸೀಕೆರೆ: ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರ ಬಗ್ಗೆ ಪೊಲೀಸರು ಸೂಕ್ಷ್ಮತೆಗಳನ್ನು ಅರಿತು, ವೈದ್ಯಕೀಯ ವರದಿಗಳೊಂದಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರೆ ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ  ಸರಸ್ವತಿ ವಿ. ಕೋಸಂದರ್ ತಿಳಿಸಿದರು.
  ಪುರಸಭಾ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಆರೋಪಪಟ್ಟಿ ಅಥವಾ ವೈದ್ಯಕೀಯ ವರದಿಯ ಸಣ್ಣಪುಟ್ಟ ಹುಳುಕುಗಳ ಸಹಾಯದಿಂದ ಈವರೆಗೆ ದೌರ್ಜನ್ಯ ನಡೆಸಿದವರು ಕಾನೂನಿನಿಂದ ಸುಲಭವಾಗಿ ಪಾರಾಗುತ್ತಿದ್ದರು. ಆದರೆ ಹೊಸ ಕಾಯ್ದೆಯಲ್ಲಿ ಅದಕ್ಕೆ ಅವಕಾಶವಿಲ್ಲ ಎಂದರು.
  ಅಶ್ಲೀಲ ಪದ ಬಳಕೆ ಸಂಜ್ಞೆಯೂ ಅಪರಾಧವೇ. ಯಾರೇ ಆಗಲಿ ಇಂತಹ ಪ್ರಕರಣ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಇದು ಮಾಧ್ಯಮದವರಿಗೂ ಅನ್ವಯವಾಗುತ್ತದೆ. ಅದರಂತೆ ದೂರು ದಾಖಲಾಗಿಲ್ಲ ಎಂಬ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸುವಂತಿಲ್ಲ ಎಂದು ನುಡಿದರು.
  ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ್ ಮಾತನಾಡಿ, ದೌರ್ಜನ್ಯಕ್ಕೆ ಒಳಗಾದ ಮಗುವಿಗೆ ಅರ್ಥವಾಗುವ ಸರಳ ಭಾಷೆಯಲ್ಲಿಯೇ ಹೇಳಿಕೆ ದಾಖಲು ಮಾಡಬೇಕು. ಜೊತೆಗೆ ಹೇಳಿಕೆ ನೀಡಲು ಠಾಣೆಗೆ ಬರುವಂತೆ ಒತ್ತಾಯಿಸುವಂತಿಲ್ಲ. ಮಕ್ಕಳು ಹೇಳಿದ ಜಾಗಕ್ಕೆ ಹೋಗಿ ಹೇಳಿಕೆ ದಾಖಲಿಸಬೇಕು. ತಂದೆ-ತಾಯಿ ಅಥವಾ ಪಾಲಕರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಬೇಕು ಎಂದು ಕಾಯ್ದೆ ಹೇಳುತ್ತದೆ ಎಂದು ತಿಳಿಸಿದರು.
 ನ್ಯಾ. ಪ್ರಕಾಶ್ ಚನ್ನಪ್ಪ ಕುರುಬೆಟ್ ಮಾತನಾಡಿದರು. ಪೊಲೀಸ್ ಉಪ ಅಧೀಕ್ಷಕ ಐ.ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಅಧಿಕಾರಿಗಳು ಸತ್ಯನಾರಾಯಣ, ಕುಟುಂಬ ದೌರ್ಜನ್ಯ ರಕ್ಷಣಾ ಕಾಯ್ದೆ ಮತ್ತು ದುಡಿಯುವ ಮಹಿಳೆಯ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಸರ್ವೇಶ್, ಕಾರ್ಯದರ್ಶಿ ಓ.ಎ.ಶಿವಕುಮಾರ್, ವಕೀಲರಾದ ವೆಂಕಟೇಶ ಮೂರ್ತಿ, ನಟರಾಜ್, ಮಹದೇವಪ್ಪ, ಅಶೋಕ್‌ಕುಮಾರ್, ವಕೀಲರಾದ ದೇವರಾಜೇಗೌಡ, ಎಚ್.ಆರ್.ಪ್ರಸನ್ನ, ಸದಾನಂದ್, ಎ.ಎಸ್.ಮಹೇಶ್ವರಪ್ಪ, ವಿಜಯಕುಮಾರ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.