ಹಾಸನ

ಗಳಿಕೆ ಕಾಲು ಭಾಗ ಸಮಾಜಕ್ಕೆ ನೀಡಿ

Published On :

ಕ.ಪ್ರ.ವಾರ್ತೆ   ಸುತ್ತೂರು   ಸೆ. 2
ನಾವು ಶ್ರಮವಹಿಸಿ ಗಳಿಸಿದ ಸಂಪಾದನೆಯಲ್ಲಿ ಕಾಲು ಭಾಗವನ್ನು ಸಮಾಜದ ಏಳಿಗೆಗೆ ಮೀಸಲಿಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.
ಸೋಮವಾರ ಸುತ್ತೂರಿನಲ್ಲಿ ನಡೆದ ವರ್ಲ್ಡ್ ಕಾಂಗ್ರೆಸ್ ಆನ್ ಕ್ಲಿನಿಕಲ್, ಪ್ರಿವೆಂಟೀವ್ ಕಾರ್ಡಿಯೋಲಜಿ ಆ್ಯಂಡ್ ಇಮೇಜಿಂಗ್ ಎಂಬ ವೈಜ್ಞಾನಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮೆರಿಕಾದಲ್ಲಿ ಇಂತಹ ಪ್ರವೃತ್ತಿಯನ್ನು ಅಲ್ಲಿನ ಜನ ಬೆಳೆಸಿಕೊಂಡಿದ್ದಾರೆ. ಯಾರೊಬ್ಬರೂ ತಾವಾಗಿಯೇ ಹಣ ಸೃಷ್ಟಿಸುವುದಿಲ್ಲ. ಸಮಾಜದಿಂದ ಹಣ ಗಳಿಸುತ್ತಾರೆ. ಅದೇ ರೀತಿ ಸಮಾಜಕ್ಕಾಗಿಯೇ ಆ ಹಣ ವ್ಯಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಾತ್ಮ- ವಿಜ್ಞಾನ ಬೇರೆಯಲ್ಲ: ನಮ್ಮ ದೇಶ ಆಧ್ಯಾತ್ಮಿಕತೆಗೆ ಹೆಸರುವಾಸಿಯಾದದು. ಸಾವಿರಾರು ವರ್ಷಗಳ ಹಿಂದೆ ಭಾರತೀಯರು ಅನುಸರಿಸುತ್ತಿದ್ದ ಆಯುರ್ವೇದ ವೈದ್ಯ ಪದ್ಧತಿ, ಯೋಗ ಇತ್ಯಾದಿಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಹಾಗೆ ವಿಜ್ಞಾನದಿಂದ ಆವಿಷ್ಕರಿಸಿದ ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಕ್ಷೇತ್ರ ಹೊಸ ಆಯಾಮ ಪಡೆದುಕೊಂಡಿದೆ. ಇದೀಗ ಈ ಎರಡು ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಈ ನಡುವೆ ಯುನಾನಿ ಎಂಬ ವೈದ್ಯಕೀಯ ಪದ್ಧತಿ ಭಾರತವನ್ನು ಪ್ರವೇಶಿಸಿದಾಗ ಎಲ್ಲರೂ ಮುಕ್ತವಾಗಿ ಸ್ವಾಗತಿಸಿದರು. ಇದು ಸಹ ಅತ್ಯಂತ ಕಡಿಮೆ ವೆಚ್ಚದ್ದಾಗಿದ್ದು, ಬಡವರಿಗೆ ಹತ್ತಿರವಾಯಿತು. ಜತೆಗೆ ಆಧ್ಯಾತ್ಮಿಕತೆ ಮನಸ್ಸನ್ನು ಶಾಂತ ರೀತಿಯಲ್ಲಿಡುತ್ತದೆ. ಹಾಗಾಗಿ ಅಧ್ಯಾತ್ಮ ಮತ್ತು ವಿಜ್ಞಾನ ಬೇರೆಯಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಪ್ರಪಂಚದಲ್ಲಿ ಯಾವುದೇ ವಸ್ತುವನ್ನು ಕಳೆದುಕೊಂಡರೆ ಮತ್ತೆ ಪಡೆಯಬಹುದು. ಆದರೆ, ಒಮ್ಮೆ ನಮ್ಮ ಉಸಿರು, ಹೃದಯವನ್ನು ಕಳೆದುಕೊಂಡರೆ ಬದುಕನ್ನೆ ಕಳೆದುಕೊಂಡಂತೆ. ಹೃದ್ರೋಗವು ಕೇವಲ ನಗರಕ್ಕೆ ಸೀಮಿತವಾಗಿಲ್ಲ. ಹಳ್ಳಿಗರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಗ್ರಾಮೀಣರಿಗೆ ಚಿಕಿತ್ಸೆ ಪಡೆಯಲು ಹೆಚ್ಚು ಹಣ ತಗಲುತ್ತಿದೆ. ಹೃದಯಾಘಾತಕ್ಕೆ ತಂಬಾಕು, ಗುಟ್ಕಾ ಮುಖ್ಯ ಕಾರಣ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.