ಹಾಸನ

ಭಗವದ್ಗೀತೆ ಮಾನವ ಜೀವನಕ್ಕೆ ದಾರಿದೀಪ'

Published On :

ಅರಸೀಕೆರೆ: ಧರ್ಮ ಮತ್ತು ಅಧರ್ಮಗಳ ನಡುವೆ ಯುದ್ಧ ನಡೆದಾಗ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ  ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ದಾರಿ ದೀಪ ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ರಾಕೇಶ್ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶಾಂತವೀರಮ್ಮ ಪರಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ಸೇವಾ ಸಂಕಲ್ಪ ಶಾಲೆ ಮಂಗಳವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾಭಾರತೀ ಸೇವಾ ಸಂಸ್ಥೆಯ ಮೈಸೂರು ವಿಭಾಗದ ವ್ಯಕ್ತಿತ್ವ ವಿಕಾಸನ ಪ್ರಶಿಕ್ಷಕ ಪ್ರದ್ಯುಮ್ನ ಮಾತನಾಡಿ, ಶ್ರೀಕೃಷ್ಣನ ಹುಟ್ಟು, ಬಾಲ್ಯದ ಲೀಲೆಗಳು ಮತ್ತು ಆತ ಸಂಹಾರ ಮಾಡಿದ ರಾಕ್ಷಸರ ಕಥೆಗಳನ್ನು ಮಕ್ಕಳಿಗೆ ಹೇಳಿದರು.  ಮಾಜಿ ಶಾಸಕ ಎ.ಎಸ್.ಬಸವರಾಜು ಮಾತನಾಡಿ, ಶಾಲೆಗಳಲ್ಲಿ ಇಂತಹ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಮಕ್ಕಳೆಲ್ಲರೂ ಸಮಚಿತ್ತದಿಂದ ಭಾಗವಹಿಸುವ ಕಾರಣ ಮಕ್ಕಳಲ್ಲಿ ಪೋಷಕರಲ್ಲಿ ಹಿಂದು ಮುಸ್ಲಿಂ ಎಂಬ ಭೇಧಭಾವನೆಗಳು ದೂರವಾಗಲು ಸಾಧ್ಯವಾಗುತ್ತವೆ ಎಂದರು.
ಇದೆ  ವೇಳೆ ವರ್ತಕ ಕುಮಾರ್ ವಿದ್ಯಾಥಿಗಳಿಗೆ ಬಹುಮಾನ ವಿತರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ ಕೊ.ರಾ.ಶ್ರೀನಿವಾಸಮೂರ್ತಿ, ಸೇವಾ ಸಂಕಲ್ಪ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಮಂಜುನಾಥ್ರಾವ್, ರೇವಣ್ಣಸಿದ್ದಪ್ಪ, ಮುಖ್ಯೋಪಾಧ್ಯಾಯ ಬಸಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಕೃಷ್ಣನ ನೃತ್ಯ ರೂಪಕ, ಸತ್ಸಂಗ, ಕೃಷ್ಣ ಮತ್ತು ನಾರದರ ನಡುವಿನ ಸಂವಾದ ಪೋಷಕರನ್ನು ರಂಜಿಸಿದವು. ಪಟ್ಟಣದ ವಿವಿಧ ಶಾಲೆಗಳಿಂದ 70 ಮಕ್ಕಳು ಕೃಷ್ಣ ವೇಶ ಮತ್ತು ರಾಧೆ ವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.