'ಶಿಕ್ಷಕ ಹುದ್ದೆ ಸಣ್ಣದೆಂದು ಭಾವಿಸಬಾರದು'
ಕ.ಪ್ರ. ವಾರ್ತೆ ಬೇಲೂರು ಸೆ. 5
ಯಾವುದೇ ದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ನಡೆಯಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಈ ದಿಸೆಯಲ್ಲಿ ಶಿಕ್ಷಕರು ತಮ್ಮ ಹುದ್ದೆಯನ್ನು ಸಣ್ಣ ಪ್ರಮಾಣ ಎಂದು ಭಾವಿಸಬಾರದು ಎಂದು ಶಾಸಕ ವೈ.ಎನ್.ರುದ್ರೇಶ್ಗೌಡ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂದಿರದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಾ. ರಾಧಾಕೃಷ್ಣನ್ 125ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಇತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಸುಮಾರು 16 ಸಾವಿರ ಕೋಟಿ ರು. ವೆಚ್ಚ ಮಾಡುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು. ಮುಖ್ಯ ಭಾಷಣಕಾರ ಶಾಹಿತಿ ಚಣ್ನಹಳ್ಳಿ ಮಹೇಶ್ ಮಾತನಾಡಿ, ಶಿಕ್ಷಕರ ದಿನಾಚರಣೆ ಯಾಂತ್ರಿಕ ದಿನವಾಗಿ ಅಚರಣೆ ಮಾಡಬಾರದು ಎಂದ ಅವರು, ಉತ್ತಮ ಶಿಕ್ಷಕನ ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜಕೀಯದ ಗಾಳಿ ಬೀಸುತ್ತಿದೆ, ಶಿಫಾರಸ್ಸು ಪಡೆದು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವುದು ದೇಶಕ್ಕೆ ಮಾರಕವೆಂದರು.
ತಾಪಂ ಅಧ್ಯಕ್ಷೆ ಸುಮಿತ್ರರುದ್ರಯ್ಯ, ಜಿಪಂ ಸದಸ್ಯರಾದ ಹೇಮಾವತಿ ಮಂಜುನಾಥ್, ಬಿ.ಡಿ.ಚಂದ್ರೇಗೌಡ, ಅಮಿತ್ಕುಮಾರ್ಶೆಟ್ಟಿ, ಜಿ.ಟಿ.ಇಂದಿರಾಧರ್ಮಪ್ಪ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಸುಂದ್ರೇಶ್, ತಾಪಂ ಉಪಾಧ್ಯಕ್ಷೆ ಕಮಲಮ್ಮ, ಪವಿತ್ರ, ಕೆ.ಪಿ,ನಾರಾಯಣ್, ಹೇಮಂತ್ಕುಮಾರ್, ರಂಗಸ್ವಾಮಿ, ಮುಳ್ಳಯ್ಯ, ಈರೇಶ್, ಗೌಡೇಗೌಡ, ಜಗದೀಶ್, ಭದ್ರೇಗೌಡ, ಕಮಲಚನ್ನಪ್ಪ, ಆನಂದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

