ಜೀವ ವಿಮಾ ನಿಗಮದ 57 ನೇ ವಿಮಾ ಸಪ್ತಾಹ
ಚನ್ನರಾಯಪಟ್ಟಣ: ದೇಶ ಆರ್ಥಿಕ ಸಬಲತೆ ಹೊಂದಲು ಭಾರತೀಯ ಜೀವ ವಿಮಾ ನಿಗಮ ತನ್ನದೇ ಆದ ಕೊಡುಗೆ ನೀಡಿದೆ ಎಂದು ಶಾಖಾಧಿಕಾರಿ ಸಂಜಯ್ ಎಂ. ಮಾನೆ ಹೇಳಿದರು.
ಪಟ್ಟಣದ ಹೇಮಾವತಿ ಶಾಲಾ ಆವರಣದ ದತ್ತಾತ್ರೇಯ ಟಿಸಿಎಚ್ ಕಾಲೇಜು ಸಮೀಪದಲ್ಲಿ ಭಾರತೀಯ ಜೀವ ವಿಮಾ ನಿಗಮದ 57 ನೇ ವಿಮಾ ಸಪ್ತಾಹ ಮತ್ತು ನಿಗಮದ ಹುಟ್ಟು ಹಬ್ಬದ ಅಂಗವಾಗಿ ಪ್ರತಿನಿಧಿಗಳ ಕುಟುಂಬದವರಿಗೆ ತಾಲ್ಲೂಕು ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಏರ್ಪಡಿಸಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವ್ಯಕ್ತಿಗೂ ಜೀವ ವಿಮೆ ಅವಶ್ಯಕತೆಯಿದ್ದು, ಕಡ್ಡಾಯವಾಗಿ ವಿಮೆ ಹೊಂದಿರಬೇಕೆಂದರು. ತಾಯಿ ಸಂಸ್ಥೆಯಾದ ಜೀವ ವಿಮೆ 56 ವರ್ಷ ಪೂರೈಸಿದ್ದು ದೇಶಕ್ಕೆ ತನ್ನದೇ ಆದ ಸೇವೆ ಸಲ್ಲಿಸಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದೆ. ಕಡು ಬಡವರಿಗಾಗಿ ಸರ್ಕಾರದ ಸಹಯೋಗದೊಂದಿಗೆ ಆಮ್ ಆದ್ಮಿ ವಿಮಾ ಯೋಜನೆ ಹೊರ ತಂದಿದೆ ಎಂದರು.
ಇದೇ ಸಂದರ್ಭ ನಡೆಸಿದ ಪುರುಷರ ಓಟದಲ್ಲಿ ಪ್ರಥಮ ನವೀನ್, ಮಹಿಳೆಯರಲ್ಲಿ ಜ್ಯೋತಿ ನಂದೀಶ್ ಪ್ರಥಮ ಮಹಾದೇವಿ ದ್ವಿತೀಯ ಸ್ಥಾನ ಗಳಿಸಿದರು. ದಂಪತಿಗಳ ಮೂರು ಕಾಲಿನ ಓಟದಲ್ಲಿ ಜ್ಯೋತಿ ನಂದೀಶ್ ಪ್ರಥಮ, ವಿ.ಜಿ.ಅಶೋಕ್ ದಂಪತಿ ದ್ವಿತೀಯ ಸ್ಥಾನ ಪಡೆದರು. ಷಟಲ್ಕಾಕ್ ಜೋಡಿಯಲ್ಲಿ ಶಿವಪ್ರಸಾದ್ ಮತ್ತು ದೇವರಾಜು ಪ್ರಥಮ, ಲಕ್ಷ್ಮಣ್ ಹಾಗೂ ಉಮಾಶಂಕರ್ ದ್ವಿತೀಯ ಸ್ಥಾನ ಪಡೆದುಕೊಂಡರು.
ತಾ. ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಶಿವರಾಜು, ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳಾದ ಕುಂಬೇನಹಳ್ಳಿ ವಾಸು, ಕೃಷ್ಣಮೂರ್ತಿ ತಿರುಮಲೇ ಗೌಡ, ಜೆ.ಪ್ರಕಾಶ್, ಮೈಸೂರು ವಿಭಾಗೀಯ ಮಟ್ಟದ ಕಾರ್ಯದರ್ಶಿ ವಿ.ಜಿ ಅಶೋಕ್, ಲಿಯಾಫಿ ಕ್ಲಬ್ ಅಧ್ಯಕ್ಷ ಕೆ.ಎನ್. ಪುಟ್ಟಸ್ವಾಮಿ ಅಗಸ್ಟಿನ್, ಬೋಮ್ಮೇಗೌಡ, ಯೋಗೇಶ್, ಅಶೋಕ್ಕುಮಾರ್, ಎಸ್.ಪಿ.ಕುಮಾರ್, ಜಗದೀಶ್, ಎ.ಒ.ರಮೇಶ್, ಪವಾರ್, ಸತೀಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

