ಕೆಎಸ್ಕ್ಯೂಓ ಪರೀಕ್ಷೆ: ಶೇ.100 ಫಲಿತಾಂಶ
ಅರಸೀಕೆರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದರಹಳ್ಳಿಯ ವಿದ್ಯಾರ್ಥಿಗಳು ಕೆಎಸ್ಕ್ಯೂಓ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ ಪಡೆದಿದ್ದಾರೆ. ಇದಕ್ಕೆ ಶಾಲೆ ಶಿಕ್ಷಕಿ ಎಂ.ವಿ. ಸುಮ ಶ್ರಮ ಕಾರಣವಾಗಿದ್ದು ಸಿದ್ದರಹಳ್ಳಿಯ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಸುಮಾ ಅವರು ಸಮುದಾಯದವರ ಮನವೊಲಿಸಿ ಶಾಲೆಗೆ ಅಗತ್ಯ ವಸ್ತುಗಳನ್ನು ದಾನವಾಗಿ ಪಡೆಯುವುದರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿರುತ್ತಾರೆ. 2006 ನೇ ಇಸವಿಯಲ್ಲಿ ಜಿಲ್ಲಾ ಪ್ರಶಸ್ತಿ, 2013 ನೇ ಸಾಲಿನ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ ಎಂದು ಗ್ರಾಮಸ್ಥರು ಶಿಕ್ಷಕಿಯನ್ನು ಶ್ಲಾಘಿಸಿದ್ದಾರೆ. ಶಿಕ್ಷಕಿ ಕುಸುಮ ಮಾತನಾಡಿ, ಸಿದ್ದರಹಳ್ಳಿ ಶಾಲೆ ಮುಖ್ಯೋಪಾಧ್ಯಾಯರು, ಶಾಲೆಯ ಸಮುದಾಯದವರು, ಎಸ್ಡಿಎಂಸಿಯವರು ಮತ್ತು ಶಾಲೆಯ ಸಹೋದ್ಯೋಗಿ ಮಿತ್ರರ ಸಹಕಾರದಿಂದ ಈ ಪ್ರಶಸ್ತಿಗಳು ಹಾಗೂ ಶಾಲೆಗೆ ಹಿರಿಮೆ ದೊರೆತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

