ತೆಂಗು ಬೆಳೆ ರೋಗ ನಿವಾರಣೆಗೆ ಪ್ರಾರ್ಥಿಸಿ ಗಣಯಾಗ
ಅರಸೀಕೆರೆ: ಪಟ್ಟಣ ಸಮೀಪದ ಕಂತೇನಹಳ್ಳಿ ಶ್ರೀಶನೈಶ್ಚರಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಅಮಾವಾಸ್ಯೆ ದಿನದಂದು ತೆಂಗು ಬೆಳೆಗೆ ತಗುಲಿರುವ ರೋಗಗಳ ನಿವಾರಣೆಗೆ ಪ್ರಾರ್ಥಿಸಿ ದೇವಾಲಯದಲ್ಲಿ ಸಹಸ್ರ ಶುಶ್ಕ ನಾರಿಕೇಳ ಗಣಯಾಗವನ್ನು ಸಾವಿರಾರು ಮಂದಿ ಭಕ್ತರು ಸೇರಿ ನೆರವೇರಿಸಿದರು.
ಶನೈಶ್ವರಸ್ವಾಮಿಗೆ ನಿತ್ಯರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ ಮತ್ತು ತೈಲಾಭಿಷೇಕ, ನವಗ್ರಹ ಶಾಂತಿ ಹಾಗೂ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೂಲದೇವರಿಗೆ ನವನೀತ ಶ್ರೀಉಡುಪಿ ಕೃಷ್ಣನಿಗೆ ಬೆಣ್ಣೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲೂಕಿನಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತೆಂಗಿನಮರಗಳಿಗೆ ಅನೇಕ ರೋಗಗಳ ಬಾಧೆಗಳು ಕಾಡುತ್ತಿದ್ದು, ತೆಂಗು ಮತ್ತು ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಯಿಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಮತ್ತು ಮನುಕುಲದ ಶ್ರೇಯಸ್ಸಿಗಾಗಿ ಗಣಯಾಗ ನಡೆಸಲಾಯಿತು. ಪ್ರಧಾನ ಅರ್ಚಕ ಮುರುಳಿ ಮಂದಾರ್ಥಿ ನೇತೃತ್ವ ವಹಿಸಿದ್ದರು. ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

