ಹಾಸನ

ಪ್ರೀತಿ ಪ್ರವರ ಹೇಳಿದ್ದಕ್ಕೆ ಸಾರ್ವಜನಿಕವಾಗಿ ಗೂಸಾ:

Published On :

ಕ.ಪ್ರ. ವಾರ್ತೆ೤ ಚನ್ನರಾಯಪಟ್ಟಣ೤ ಸೆ.10
ಪಕ್ಕದ ಗ್ರಾಮದ ಯುವತಿ ಪ್ರೀತಿಸಲಿ ಬಿಡಲಿ ತಾನಂತೂ ಅವಳನ್ನೇ ಮದುವೆ ಮಾಡಿಕೊಳ್ಳುತ್ತೇನೆಂದು ಸಾರ್ವಜನಿಕವಾಗಿ ಹೇಳಿ ಚೆನ್ನಾಗಿ ಗೂಸಾ ತಿಂದು ನಂತರ ಜನರಿಂದಾದ ಅವಮಾನ ಸಹಿಸಲಾಗದೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಹಿರೀಸಾವೆ ಹೋಬಳಿ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ತಿಮ್ಲಾಪುರ ಗ್ರಾಮದ ಆಟೋ ಚಾಲಕ ಚಂದನ್(22) ನೇಣಿಗೆ ಶರಣಾದ ಯುವಕ. ಈತ ತನ್ನ ಪ್ರೇಮ ಪುರಾಣವನ್ನು ಹಿರೀಸಾವೆಯಲ್ಲಿ ಪ್ರಕಟಪಡಿಸಿದ. ಈ ವಿಷಯ ಗ್ರಾಮದ ಹೊನ್ನದೇವಿಹಳ್ಳಿಯ ಯುವತಿ ಮನೆಯಲ್ಲಿ ತಿಳಿಯುತ್ತಿದ್ದಂತೆ, ಯುವತಿ ಮನೆಯವರು ಹಿರಿಸಾವೆಗೆ ಬಂದು ಸಾರ್ವಜನಿಕವಾಗಿ ಯುವಕನಿಗೆ ಗೂಸಾ ಕೊಟ್ಟು  ಕಂಬಕ್ಕೆ ಕಟ್ಟಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತನ್ನ ಮನೆಯ ಕೊಟ್ಟಿಗೆಯಲ್ಲಿ ಚಂದನ್ ನೇಣಿಗೆ ಶರಣಾಗಿದ್ದಾನೆ.  
ಮಂಡ್ಯ ಜಿಲ್ಲೆಯ ಹೊನ್ನದೇವಿಹಳ್ಳಿ ಗ್ರಾಮದ ಯುವತಿಯನ್ನು ತಾನು ಪ್ರೀತಿಸುತ್ತಿದ್ದು, ಆಕೆ ಒಪ್ಪದಿದ್ದರೂ ಅವಳನ್ನು ಕದ್ದೊಯ್ದು ಮದುವೆಯಾಗುವುದಾಗಿ ಚಂದನ್ ಹಿರೀಸಾವೆಯಲ್ಲಿ ತನ್ನ ಸ್ನೇಹಿತರೊಂದಿಗೆ ಹೇಳಿದ್ದು ಯುವತಿ ಮನೆಗೆ ತಿಳಿದು ಆತನಿಗೆ ಬುದ್ದಿ ಕಲಿಸಲು ಆತನನ್ನು ಹುಡುಕುತ್ತಿದ್ದರು.  ಸೆ.6ರಂದು  ಚಂದನ್ ಹಿರೀಸಾವೆಯಲ್ಲಿರುವುದನ್ನು ತಿಳಿದು ಹೊನ್ನದೇವಿಹಳ್ಳಿಯ 10ಕ್ಕೂ ಹೆಚ್ಚು ಮಂದಿ ಆತನನ್ನು ಶ್ರೀಕಂಠಯ್ಯ ಸರ್ಕಲ್ನಲ್ಲಿ ಹಿಡಿದು ಥಳಿಸಿ ತೃಪ್ತರಾಗದೆ ಆತನ ಬಟ್ಟೆ ಬಿಚ್ಚಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಕಂಬಕ್ಕೆ ಕಟ್ಟಿ ಥಳಿಸಿ ಸಾರ್ವಜನಿಕವಾಗಿ ಅವಮಾನ ಮಾಡಿದರು. ನಂತರದಲ್ಲಿ ತಿಮ್ಮಾಪುರ ಹಾಗೂ ಹೊನ್ನದೇವಿಹಳ್ಳಿ ಗ್ರಾಮದ ಮುಖಂಡರು ಸೇರಿ ಎರಡೂ ಮನೆಯವರನ್ನು ಕರೆಸಿ ರಾಜಿ ಪಂಚಾಯಿತಿ ಮಾಡಿಸಿ ಯಾವುದೇ ಕಾರಣಕ್ಕೂ ಚಂದನ್ನನ್ನು ಥಳಿಸದಂತೆ ಎಚ್ಚರಿಕೆ ನೀಡಿದರು. ಹಾಗೂ ಯುವತಿ ಸಹವಾಸಕ್ಕೆ ಹೋಗದಂತೆ ಚಂದನ್ಗೂ ಎಚ್ಚರಿಸಿದ್ದಾರೆ.  ಪಂಚಾಯಿತಿಯಲ್ಲಿ ಆದ ಅವಮಾನ ತಾಳಲಾರದ ಚಂದನ್ ಸೋಮವಾರ ಸಂಜೆ ತನ್ನ ಮನೆಯ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಚಂದನ್ ತಂದೆ ಕೃಷ್ಣೇಗೌಡ ತಿಮ್ಮಾಪುರ ಗ್ರಾಮದ ಯುವತಿ ಸೇರಿ ತಂದೆ ನಾಗಣ್ಣ, ತಾಯಿ ಅನುಸೂಯ, ಸುರೇಶ್, ದೇವರಾಜು ವಿರುದ್ಧ ಹಿರೀಸಾವೆಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.