ಹಾಸನ

ಶಾಸಕರಿಗೆ ಸನ್ಮಾನ ಸಮಂಜಸವಲ್ಲ

Published On :

ಚನ್ನರಾಯಪಟ್ಟಣ: ತಾಲೂಕಿನಲ್ಲಿ ದಲಿತರ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮುಂದಾಗದಿರುವುದರಿಂದ ಕೆಲ ದಲಿತ ನಾಯಕರು ಅವರನ್ನು ಸನ್ಮಾನಿಸಲು ಮುಂದಾಗಿರುವುದು ಸಮಂಜಸವಲ್ಲ ಎಂದು ಜಿಲ್ಲಾ ದಲಿತ ಸೇನಾ ಪಡೆ ಅಧ್ಯಕ್ಷ ಸಿ.ಎನ್. ಮಂಜುನಾಥ್ ಆರೋಪಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಬಾಲಕೃಷ್ಣ ಅವರಿಗೆ ತಾಲೂಕು ದಲಿತ ಸಮುದಾಯದ ವತಿಯಿಂದ ಸನ್ಮಾನ ಕಾರ್ಯಕ್ರಮ ಎಂದು ಆಹ್ವಾನ ಪತ್ರಿಕೆ ಮುದ್ರಿಸಿ ಕೆಲವರು ಕಾರ್ಯಕ್ರಮ ಆಯೋಜಿಸಿದ್ದಾರೆ. ಇದು ದಲಿತ ಜೆಡಿಎಸ್ ಕಾರ್ಯಕರ್ತರಿಂದ ಸನ್ಮಾನ ಎಂದು ಮಾಡುವ ಬದಲಾಗಿ ತಾಲೂಕು ದಲಿತ ಸಮುದಾಯದ ವತಿಯಿಂದ ಸನ್ಮಾನ ಕಾರ್ಯಕ್ರಮ ಎಂದು ಬಿಂಬಿಸುತ್ತಿರುವುದಕ್ಕೆ ತಮ್ಮ ವಿರೋಧವಿದ್ದು, ಕಾರ್ಯಕ್ರಮ ರದ್ದುಪಡಿಸದಿದ್ದರೆ ತಾವು ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ತಿಳಿಸಿದರು.
 ಶಾಸಕ ಬಾಲಕೃಷ್ಣ ಅವರು ಹಿಂದೆ ಕೆಲ ಹುದ್ದೆಗಳನ್ನು ಹೊಂದಿರುವ ಸಂದರ್ಭದಲ್ಲಿಯೂ ದಲಿತರನ್ನು ನಿರ್ಲಕ್ಷ ಮಾಡಿದ್ದು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಷೇರುದಾರರಾಗಿ ಪರಿಶಿಷ್ಟರಿಗೆ ಮೀಸಲಿದ್ದ ಷೇರುಗಳನ್ನು ನೀಡದೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಶೇ.22.7 ಖರ್ಚು ಮಾಡದೆ ಅದರಲ್ಲಿ ಅವ್ಯವಹಾರ ಮಾಡಿದ್ದಾರೆಂದು ದೂರು ನೀಡಿದರೂ ಅದಕ್ಕೆ ಸ್ಪಂದಿಸದ ಶಾಸಕರನ್ನು ಸನ್ಮಾನಿಸುವುದು ಸೂಕ್ತವಲ್ಲ ಎಂದು  ಆರೋಪಿಸಿದರು.
 ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಶೇ.25ರಷ್ಟು ಮೀಸಲಿದ್ದರೂ,  ಶಾಸಕರ ಮೌಖಿಕ ಆದೇಶದಿಂದ  ಅವಕಾಶ ವಂಚಿತರಾಗಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಶಾಸಕರು   ಮೌಖಿಕವಾಗಿ ಸೂಚಿಸಿರುವ ಬಗ್ಗೆ ಹೇಳಿಕೆ ನೀಡುತ್ತಾರೆ.
 ಪರಿಶಿಷ್ಟರಿಗೆ ಮೀಸಲಿರುವ ವಸತಿ ನಿಲಯದಲ್ಲಿ ಅವಕಾಶ ನೀಡಿ ಹಿಂದುಳಿದ ವರ್ಗದಲ್ಲಿ  ಒಬ್ಬ  ಪರಿಶಿಷ್‌ಠ ವಿದ್ಯಾರ್ಥಿನಿಯರಿಗೆ  ಅವಕಾಶ ನೀಡಬಾರದು ಎಂಬ ಆದೇಶವನ್ನು ಅಧಿಕಾರಿಗಳು ಪಾಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದರು.
ಶಾಸಕರೇ ಮಾರ್ಗದರ್ಶಕರು: ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಶಾಸಕರು ಕೇವಲ ಸನ್ಮಾನ ಕಾರ್ಯಕ್ರಮಗಳನ್ನು ಮಾಡಿಸಿಕೊಳ್ಳುತ್ತಿದ್ದು, ಇದೊಂದು ಅವರೇ ರೂಪಿಸಿಕೊಳ್ಳುತ್ತಿರುವ ಕಾರ್ಯಕ್ರಮವಾಗಿದೆ. ತಾಲೂಕಿನ ಕೆಲ ಸಂಘಟನೆಗಳಿಂದ ತಮಗೆ ಸನ್ಮಾನ ಮಾಡುವಂತೆ ಅವರೇ ಪ್ರೇರಪಿಸಿ ಮಾಡಿಸಿಕೊಳ್ಳುತ್ತಿದ್ದಾರೆ. ಶಾಸಕರಿಗೆ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಅವರು ಕೇವಲ ಸನ್ಮಾನ ಪ್ರಚಾರದಲ್ಲಿ ಮುಂದಾಗಿದ್ದಾರೆ ಎಂದು ಆಪಾದಿಸಿದರು. ದಲಿತ ಮುಖಂಡ ರೇಣುಕಾನಂದ ಹಾಗೂ ಗಂಗಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.