ರು. 25 ಲಕ್ಷ ವೆಚ್ಚದ ಗೋದಾಮು ಉದ್ಘಾಟನೆ
ಹೊಳೆನರಸೀಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯ ಪ್ರಾಂಗಣದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ 400 ಎಂ.ಟಿ ಸಾಮರ್ಥ್ಯದ ಗೋದಾಮನ್ನು ಗುರುವಾರ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರ ಉಳಿದೆಲ್ಲಾ ಕ್ಷೇತ್ರಗಳ ಜೊತೆಗೆ ಕೃಷಿ ಹಾಗೂ ಮಾರುಕಟ್ಟೆ ಕ್ಷೇತ್ರವನ್ನೂ ಪ್ರಮುಖವಾಗಿ ಪರಿಗಣಿಸಿ ರೈತರಿಗೆ ಅವರು ಬೆಳೆದ ಬೆಳೆಗಳಿಗೆ ಅನುಕೂಲಕರವಾದ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿದರು.
ಸಮಿತಿಯಿಂದ ಆರ್.ಕೆ.ವಿ.ವೈ ಯೋಜನೆಯಡಿಯಲ್ಲಿ ಒಟ್ಟು 1.08ಕೋಟಿ ರು ವೆಚ್ಚದಲ್ಲಿ ಹಳ್ಳಿಮೈಸೂರು ಮಾರುಕಟ್ಟೆ ಸಮಿತಿಯ ಆವರಣದಲ್ಲಿ 6.5ಲಕ್ಷ ರು ವೆಚ್ಚದಲ್ಲಿ ಹಾಗೂ ಅರಕಲಗೂಡು ಮಾರುಕಟ್ಟೆ ಪ್ರಾಂಗಣದಲ್ಲಿ 18ಲಕ್ಷ ರು ವೆಚ್ಚದಲ್ಲಿ ಹಾಗೂ ಹೊಳೆನರಸೀಪುರ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಇನ್ನೂ 4 ಗೋದಾಮು ಹಾಗೂ ಮಾರುಕಟ್ಟೆಯ ಒಳ ಆವರಣದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.
ಮಾರುಕಟ್ಟೆ ಸಮಿತಿಯಿಂದ ತಾಲೂಕಿನ ಗ್ರಾಮೀಣ ಭಾಗಗಳಿಗೆ ತೆರಳಿ, ಮಾರುಕಟ್ಟೆ ಸಮಿತಿಯ ಕಾರ್ಯವ್ಯಾಪ್ತಿ ಹಾಗೂ ಇದರಿಂದ ರೈತರಿಗೆ ಸಿಗುವ ಅನುಕೂಲತೆಗಳ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿ, ರೈತರು ಬೆಳೆದ ಬೆಳೆಗಳನ್ನು ಸಮಿತಿಯ ಪ್ರಾಂಗಣದಲ್ಲಿಯೇ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಮಿತಿ ಅಧ್ಯಕ್ಷ ಎಚ್.ಎಸ್.ಸುದರ್ಶನ್ ಮಾತನಾಡಿ, ಶಾಸಕ ಎಚ್.ಡಿ.ರೇವಣ್ಣನವರು ತಾಲೂಕು ಹಾಗೂ ಜಿಲ್ಲೆಯಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಆದರೆ ಈಗ ಅವರು ಕೃಷಿ ಕ್ಷೇತ್ರದ ಕಡೆಗೂ ಹೆಚ್ಚಿನ ಗಮನ ನೀಡುವ ಮೂಲಕ ರೈತರಿಗೆ ಉಪಯುಕ್ತವಾದ ಸಹಕಾರವನ್ನು ನೀಡಲು ಮಾರುಕಟ್ಟೆ ಸಮಿತಿಯನ್ನೂ ಬಲಯುತಗೊಳಿಸಲು ನೆರವಾಗುವಂತೆ ಕೋರಿದರು. ತಾಲೂಕಿನ ಮಾರುಕಟ್ಟೆ ಸಮಿತಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಲೇ ಸರ್ಕಾರಕ್ಕೆ 6 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಅನುದಾನ ದೊರಕಿಸಿಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆ ಎಚ್.ಡಿ.ರೇವಣ್ಣ ಅವರನ್ನು ಎಚ್.ಎಸ್.ಸುದರ್ಶನ್ ಕೋರಿದರು. ಸಮಿತಿಯ ಕಾರ್ಯದರ್ಶಿ ಬಿ.ಮಹೇಶ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ವರ್ತಕರ ಕ್ಷೇತ್ರದ ಪ್ರತಿನಿಧಿ ಕೆ.ಶ್ರೀಧರ್, ಸದಸ್ಯರಾದ ಜಿ.ಪಿ.ಪ್ರಕಾಶ್, ಶಂಕರೇಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

