'ಯಾಂತ್ರಿಕ ಬದುಕಿನಿಂದ ಪುಸ್ತಕ ಓದುವ ಹವ್ಯಾಸ ಕುಂಠಿತ'
ಹಾಸನ: ತಂತ್ರಜ್ಞಾನ ಯುಗದಲ್ಲಿ ಯಾಂತ್ರಿಕ ಬದುಕಿಗೆ ಅಂಟಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ ಎಂದು ಬಿ.ಸಿ.ಕೆ.ಎಸ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಪಿ. ವಿಜಯ ಕುಮಾರ್ ವಿಷಾದ ವ್ಯಕ್ತ ಪಡಿಸಿದರು.
ನಗರದ ಎನ್ಡಿಆರ್ಕೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಭಂಡಾರವನ್ನು ವಿದ್ಯಾರ್ಥಿಗಳು ಓದುವ ಮೂಲಕ ತಮ್ಮದನ್ನಾಗಿ ಮಾಡಿ ಕೊಳ್ಳಬೇಕು. ಈ ದಿಶೆಯಲ್ಲಿ ಓದುವ ಹವ್ಯಾಸ ಬೆಳಸುವ ಓಂದು ಪ್ರಾಮಾಣಿಕ ಪ್ರಯತ್ನವಾಗ ಬೇಕು ಎಂದು ತಿಳಿಸಿದರು. ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಸಿ.ಮುದ್ದಣ್ಣ ಮಾತನಾಡಿ ಪುಸ್ತಕದಿಂದ ದೊರೆತ ಜ್ಞಾನ ಮಸ್ತಕಕ್ಕೆ ಭೂಷಣ ಅಲ್ಲದೆ ಆತ್ಮ ಸಾಕ್ಷತ್ಕಾರದ ಅಂತರ ವೀಕ್ಷಣೆ ಸಾಧ್ಯ. ಪುಸ್ತಕಗಳು ವ್ಯಕ್ತಿ ಬದುಕನ್ನು ಸಮಾಜವನ್ನು ರೂಪಿಸುತ್ತವೆ. ಮಹಾನ್ ವ್ಯಕ್ತಿಗಳ ಉದಾತ್ತಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿ ಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ಶಾಮ್ಭಟ್ ಮಾತನಾಡಿದರು. ಗ್ರಂಥಪಾಲಕ ಡಾ.ಕುಂತಗಲ್ ಅರ್ಜುನ್ ಸ್ವಾಗತಿಸಿದರು. ಸಲಹಾ ಸಮಿತಿ ಸದಸ್ಯ ಜಯರಾಮು, ಎ.ಜಿ.ಶಾಂತೇಗೌಡ, ಎಚ್.ಎಸ್.ನಿಂಗಪ್ಪ, ಜೋಸೆಫ್, ಚೆಲವೇಗೌಡ, ಜಯಣ್ಣ ಇದ್ದರು. ಪವಿತ್ರ ಪ್ರಾರ್ಥಿಸಿದರು. ಆಶಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

