ಹಾಸನ

ಮೋದಿ ಪ್ರಧಾನಿಯಾದರೆ ಕಪ್ಪು ಹಣ ಭಾರತಕ್ಕೆ ತರಲು ಸಾಧ್ಯ: ಮಂಜುನಾಥ್

Published On :

ಕ.ಪ್ರ. ವಾರ್ತೆ೤ ಅರಸೀಕೆರೆ೤ ಸೆ.16
ಈ ದೇಶವನ್ನಾಳಿದ ಅನೇಕರು ತಮ್ಮ ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್‌ನಲ್ಲಿಟ್ಟು ಈ ದೇಶವನ್ನು ಸಾಲದ ಸುಳಿಗೆ ಹಾಗೂ ಬಡತನದ ದವಡೆಗೆ ಸಿಲುಕಿಸಿದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಪ್ರಧಾನಿಯಾದರೆ ಮಾತ್ರ ಈ  ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರಲು ಸಾಧ್ಯ ಎಂದು ರಾಜ್ಯ ನರೇಂದ್ರ ಮೋದಿ ಅಭಿಮಾನಿ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಮುಖ್ಯಸ್ಥ ಬಿ.ಕೆ.ಮಂಜುನಾಥ್ ಹೇಳಿದರು.
 ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ ಹಲವು ದಶಕಗಳ ಕಾಲ ದೇಶವನ್ನಾಳಿದ ಮಾಜಿ ಪ್ರಧಾನಿ ಹಾಗೂ ಕುಟುಂಬ ಸದಸ್ಯರು ಅಕ್ರಮವಾಗಿ ಸಂಗ್ರಹಿಸಿದ ಕಪ್ಪುಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿದ್ದು ಈ ಬಗ್ಗೆ ಲೋಕಸಭೆಯಲ್ಲಿ ಮಾಧ್ಯಮಗಳ ಮೂಲಕ ಚರ್ಚೆ ನಡೆಯುತ್ತಿದೆಯೇ ಹೊರತು ದೇಶ ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದರೂ, ಡಾಲರ್ ಎದುರು ರೂಪಾಯಿ ಬೆಲೆ ಅಪಮೌಲ್ಯವಾಗುತ್ತಿದ್ದರೂ  ಈ ಕಪ್ಪುಹಣವನ್ನು ವಾಪಸ್ ತರುವತ್ತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಚಕಾರವೆತ್ತುತ್ತಿಲ್ಲ ಎಂದು ದೂರಿದರು.
 ಈ ಬಗ್ಗೆ ಆರ್‌ಟಿಐ ಮೂಲಕ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸೂಕ್ತ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಇಂತಹ ದೇಶ ವಿರೋಧಿಗಳಿಂದ ಭಾರತ ರಕ್ಷಿಸಬೇಕಾದರೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಲೇಬೇಕು. ಆಗ ಗಾಂಧಿ ಕುಟುಂಬದ ಹಗರಣಗಳು ಸಾಲು ಸಾಲಾಗಿ ಹೊರಬರಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
 ಈ ಆಂದೋಲನದಲ್ಲಿ ಜನಜಾಗೃತಿ ಉಂಟುಮಾಡಲು ಈ ದೇಶದ ರಾಜಕಾರಣಿಗಳ ಕಪ್ಪುಹಣ ಸಂಗ್ರಹ ಕುರಿತಂತೆ ರಾಷ್ಟ್ರವ್ಯಾಪಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಾಮಫಲಕಗಳನ್ನು ಹಾಕುವ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕರ್ತರು ಪ್ರತಿ ಹೋಬಳಿ ಕೇಂದ್ರಗಳಲ್ಲಿ ಇಂತಹ ನಾಮಪಲಕಗಳ ಮೂಲಕ ಜಾಗೃತಿ ಉಂಟು ಮಾಡುವರಲ್ಲದೇ ಪ್ರತಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರಿಗೆ ಮಾಹಿತಿ ನೀಡಲಾಗುವುದು.
  ಸೆ.17ರಂದು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯಾವ ಯಾವ ರಾಜಕಾರಣಿಗಳು ವಿದೇಶಿ ಬ್ಯಾಂಕುಗಳಲ್ಲಿ ಎಷ್ಟು ಸಾವಿರ ಕೋಟಿ ರೂ ಹಣ ಇಟ್ಟಿದ್ದಾರೆ. ಜನಸೇವೆಯ ಹೆಸರಿನಲ್ಲಿ ದೇಶದ ಹಣವನ್ನು ಲೂಟಿ ಹೊಡೆದಿರುವ ಇವರ ಅಕ್ರಮ ಸಂಪಾದನೆ ಎಷ್ಟು ಎಂಬ ಬಗ್ಗೆ ಮಾಹಿತಿ ಫಲಕ ಹಾಕಲಾಗುವುದು. ಅಲ್ಲದೇ ಇದೇ ದಿನದಂದು ಎಚ್ಚೆತ್ತ ಯುವಕರಿಂದ ಬೈಕ್ ರ್ಯಾಲಿ ನಡೆಸಿ ಜನಾಂದೋಲನಕ್ಕೆ ಚಾಲನೆ ನೀಡಲಾಗುವುದು ಅಲ್ಲದೇ ಅಂದು  ವಾಸವಿ ಕಲ್ಯಾಣ ಮಂದಿರದಲ್ಲಿ ಕಪ್ಪುಹಣದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿ ಯಶಸ್ವಿಯಾಗಲು ಸಹಕಾರ ನೀಡಬೇಕೆಂದರು.
 ಮೋದಿ ಅಭಿಮಾನಿ ಸಂಘದ ರಾಜ್ಯ ಕಾರ್ಯದರ್ಶಿ ಜಾನೇಕೆರೆ ಹೇಮಂತ್, ನವೀನ್‌ಕುಮಾರ್ ಎ.ಎಸ್.ಪ್ರಭಾಕರ್, ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ಶಿವನ್‌ರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.