ಆಧಾರ್ ಕೇಂದ್ರ ಐದು ಕೌಂಟರ್ ಉದ್ಘಾಟನೆ
ಹಾರನಹಳ್ಳಿ (ಅರಸೀಕೆರೆ ತಾ.): ಆಧಾರ್ ಕಾರ್ಡ್ಗಾಗಿ ಜನ ಪರಿತಪಿಸುತ್ತಿದ್ದು ಪ್ರಸ್ತುತ ಇರುವ ಕೇಂದ್ರಗಳಲ್ಲಿ ಒತ್ತಡ ಹೆಚ್ಚಾಗಿದ್ದು ಆಧಾರ್ ಕಾರ್ಡ್ ಹೊಂದಲು ಸುಲಭವಾಗುವಂತೆ ಹಾರನಹಳ್ಳಿ ಗ್ರಾಪಂ ಕಚೇರಿಯಲ್ಲಿ ಐದು ಕೌಂಟರ್ಗಳ ಕೇಂದ್ರವನ್ನು ಗ್ರಾಪಂ ಅಧ್ಯಕ್ಷೆ ರೇಣುಕಾ ಉದ್ಘಾಟಿಸಿದರು.ನೋಡಲ್ ಅಧಿಕಾರಿ ನಾಗಪ್ಪ ಮಾತನಾಡಿ ಒಂದು ಕೌಂಟರ್ನಲ್ಲಿ ದಿನಕ್ಕೆ 100 ಆಧಾರ್ ಕಾರ್ಡ್ಗಳನ್ನು ಮಾಡುವ ಸೌಲಭ್ಯ ಹೊಂದಿದ್ದು, ಅದರಂತೆ ದಿನಕ್ಕೆ 500 ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ. ಇದಕ್ಕೆ ಅಂತಿಮ ದಿನವೆಂಬುದಿಲ್ಲ. ಯಾರೂ ತರಾತುರಿ ಮಾಡದೆ ಸರದಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಈ ಸೌಲಭ್ಯ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು. ಗ್ರಾಪಂ ವ್ಯಾಪ್ತಿಯ 20 ಗ್ರಾಮಗಳಿಗೂ ಹೆಚ್ಚು ಜನತೆಗೆ ಈ ಕೇಂದ್ರ ಸಹಕಾರಿಯಾಗಲಿದೆ ಎಂದರು. ಗ್ರಾಪಂ ಸದಸ್ಯ ಕೃಷ್ಣಪ್ಪ, ಶಿವಲಿಂಗಮೂರ್ತಿ, ಗ್ರಾಮಲೆಕ್ಕಾಧಿಕಾರಿ ಯದುಕುಮಾರ್, ಖರೀಂ ಸಾಬ್, ಗುರುಲಿಂಗಪ್ಪ, ಪಿ.ಡಿ.ಓ. ಶಾರದಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

