ಮೋದಿ ಬಿಜೆಪಿ ಹತಾಶೆಯ ಕೂಸು: ವೀರಪ್ಪ ಮೊಯ್ಲಿ
ಹಾಸನ: ಬಿಜೆಪಿ ಹತಾಶೆಯ ಕೂಸೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೋಯ್ಲಿ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಗುಜರಾತ್ನಲ್ಲಿ ಏನು ಮಾಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಅಲ್ಲಿ ನಡೆದ ನರಮೇಧ, ಕೋಮುಗಲಭೆಯಂತಹ ಘಟನೆಗಳು ಬೇರೆ ಎಲ್ಲಾದರೂ ನಡೆದಿದ್ದರೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕೋರ್ಟ್ಗಳಿಗೆ ಅಲೆಯಬೇಕಿತ್ತು. ಅಂತಹ ವ್ಯಕ್ತಿ ದೇಶವನ್ನು ಆಳುವಂತಾದರೆ ಏನಾಗಲಿದೆ ಅನ್ನೋ ದುಸ್ವಪ್ನ ಎಲ್ಲರನ್ನು ಕಾಡುತ್ತಿದೆ ಎಂದು ನುಡಿದರು. ಬಿಜೆಪಿ ಅಂತಹ ಕೋಮುವಾದಿ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿ ಎಂದು ನಿರ್ಣಯಿಸಿದ್ದು, ಇದು ವಸುದೈವ ಕುಟುಂಬವಾದ ನಮ್ಮ ದೇಶದ ಸಂಸ್ಕೃತಿಗೆ ಒಗ್ಗುವುದಿಲ್ಲ. ಇದನ್ನು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾನಿ ಅವರೇ ಹೇಳಿದ್ದಾರೆ ಎಂದ ಮೋಯ್ಲಿ, ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಬೇರೆ ಬೇರೆ ವರ್ಗದವರು ಹಾಗೂ ಸೈನಿಕರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಜಾತಿ, ಧರ್ಮದ ವಿಷಯದಲ್ಲಿ ಪ್ರಚೋದನಕಾರಿ ಭಾಷಣದಿಂದ ದೇಶವನ್ನು ಒಡೆಯುತ್ತಿದ್ದು, ಇದರಿಂದ ಮುಂದೆ ದೇಶದ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

