ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಸಕಲೇಶಪುರ ಸೆ.19
ವ್ಯವಸ್ಥಿತವಾದ ವಾಸ ಯೋಗ್ಯ ಮನೆಗಳನ್ನು ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ಆದಿ ದ್ರಾವಿಡ ಪೌರ ಕಾರ್ಮಿಕ ಯುವಕ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಪೊರಕೆ ಹಿಡಿದು ಗುರುವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ದಶಕಗಳಿಂದ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿರುವ ಪೌರ ಕಾರ್ಮಿಕರು ವಾಸಿಸುವ ಮನೆಗಳು ಬೀಳುವ ಸ್ಥಿತಿಯಲ್ಲಿದ್ದು ಪ್ರತಿ ಮಳೆಗಾಲದಲ್ಲಿ ಮೂರರಿಂದ ನಾಲ್ಕು ಮನೆಗಳು ಬೀಳುತ್ತಿವೆ. ಇದರಿಂದಾಗಿ ಪೌರ ಕಾರ್ಮಿಕರು ಈ ಮನೆಗಳಲ್ಲಿ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ಹಲವು ವರ್ಷಗಳ ಹಿಂದೆ ಬಿದ್ದಿರುವ ಮನೆಗಳನ್ನು ಪುನರ್ ನಿರ್ಮಿಸದ ಕಾರಣ ಗುಡಿಸಿಲಿನಲ್ಲಿ ಜೀವನ ನಡೆಸುವಂತಾಗಿದೆ.
ಈ ಬಗ್ಗೆ ಹಲವು ಬಾರಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿ ಕೇವಲ ಆಶ್ವಾಸನೆ ನೀಡಿ ವಾಪಸ್ಸಾಗುತ್ತಿದ್ದಾರೆ. ಆದರೆ, ಇದುವರೆಗೆ ಯಾವುದೇ ಪರಿಹಾರ ಕಾಣದಾಗಿದೆ.
ಆದ್ದರಿಂದ, ಮುಂದಿನ ಒಂದು ತಿಂಗಳ ಅವಧಿಯಲ್ಲಿ ವ್ಯವಸ್ಥಿತ ಮನೆ ನಿರ್ಮಾಣದ ಬಗ್ಗೆ ಸರ್ಕಾರ ಘೋಷಣೆ ಹೊರಡಿಸದಿದ್ದರೆ ಆಮರಣಾಂತ ಉಪವಾಸ ಮಾಡುವ ಮೂಲಕ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಉಪವಿಭಾಗಾಧಿಕಾರಿ ಶ್ರೀವಿದ್ಯಾ ಅವರಿಗೆ ನೀಡಲಾದ ಮನವಿಯಲ್ಲಿ ತಿಳಿಸಲಾಗಿದೆ.ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಉಪವಿಭಾಗಾಧಿಕಾರಿ ಕಚೇರಿ ಕಚೇರಿವರಿಗೆ ಪೌರ ಕಾರ್ಮಿಕರು ಪೊರಕೆ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಆದಿದ್ರಾವಿಡ ಯುವಕರ ಸಂಘದ ಅಧ್ಯಕ್ಷ ಸಿ.ನಂಜ, ಜಿಲ್ಲಾಧ್ಯಕ್ಷ ಎಸ್.ಆರ್. ಕೃಷ್ಣ, ಜಿಲ್ಲಾ ಕಾರ್ಯದರ್ಶಿ ಮಂಜ, ಗೌರವ ಅಧ್ಯಕ್ಷ ಪಳನಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಮದ್ಯ, ಧೂಮಪಾನಿಗರಲ್ಲಿ ಮೂರ್ಛೆ ಕಾಯಿಲೆ ಹೆಚ್ಚು: ದಾಮೋದರ ರಾವ್
ಸಕಲೇಶಪುರ: ಧೂಮಪಾನ ಹಾಗೂ ಮದ್ಯಪಾನಿಗರಲ್ಲಿ ಹೆಚ್ಚಾಗಿ ಎಪಿಲೆಪ್ಟಿಕ್ಕ್ಪಿಟ್ ಕಾಯಿಲೆ ಕಂಡು ಬರುತ್ತದೆ ಎಂದು ಭಾರತೀಯ ಎಪಿಲೆಪ್ಸಿ ಆರೈಕೆ ಸಮೂಹ ಕಾರ್ಯದರ್ಶಿ ದಾಮೋದರ್ರಾವ್ ತಿಳಿಸಿದರು.
ಬುಧವಾರ ತಾಲೂಕಿನ ಕೌಡಳ್ಳಿಯ ಜೆಎಸ್ಎಸ್ ಶುಶ್ರೂಷ ಶಾಲೆಯಲ್ಲಿ ನಡೆದ ಆರೈಕೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಅರಿವಿಲ್ಲದ ಕಾರಣ ಇದು ಒಂದು ಮೂಢನಂಬಿಕೆ, ದೆವ್ವ, ವಾಮಾಚಾರ, ಅಮಾವಾಸ್ಯೆ ಹುಣ್ಣಿಮೆಗೆ ಒಮ್ಮೆ ಬರುವ ಕಾಯಿಲೆ ಎಂದು ನಂಬಿದ್ದಾರೆ. ಆದರೆ ಇದು ಒಂದು ನೆರಳಿನ ಹಾಗೆ, ಯಾರಿಗೆ ಬೇಕಾದರೂ, ಯಾವಾಗಲಾದರೂ ಬರಬಹುದು. ಈ ಕಾಯಿಲೆ ಎಂತಹವರನ್ನು ಬಿಟ್ಟಿಲ್ಲ ಎನ್ನುವುದಕ್ಕೆ ನಿದರ್ಶನ ಗಣಿತಜ್ಞ ಪೈಥಾಗೊರಸ್, ಜಾಂಟಿ ರೋಡ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಜಾಂಟಿ ರೋಡ್, ವಿಜ್ಞಾನಿ ಐಸಾಕ್ ನ್ಯೂಟನ್ ಇಂತಹ ಘಟಾನುಘಟಿಗಳಿಗೂ ಅವರ ಚಿಕ್ಕ ವಯಸ್ಸಿನಲ್ಲಿ ಈ ಎಪಿಲೆಪ್ಸಿ ಕಾಯಿಲೆ ಬೆಂಬಿಡದೆ ಕಾಡುತ್ತಿತ್ತು ಎಂದು ತಿಳಿಸಿದರು.
ಶೇ 75ರಷ್ಟು ನಿರ್ಧಿಷ್ಟ ಕಾರಣವಿಲ್ಲದೆ ಈ ಎಪಿಲೆಪ್ಸಿ ಕಾಯಿಲೆ ಬರುತ್ತದೆ. ಆದ್ದರಿಂದ ಈ ಕಾಯಿಲೆಗೆ ತುತ್ತಾಗಿರುವವರು ವೈದ್ಯರು ಸೂಚಿಸಿರುವ ಮುಂಜಾಗ್ರತ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.
ಕಾಲೇಜು ಪ್ರಾಂಶುಪಾಲ ವಿ.ವಿನೋಲಿಂಗ್ರಾಜ್, ಅಧೀಕ್ಷಕ ವಿ. ನಾಗರಾಜ್ ಡಾ.ಎನ್.ಎಸ್.ಸುರೇಶ್, ಮಹದೇವಸ್ವಾಮಿ ಉಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

