ದಿಡಗ ಹಾಲು ಉತ್ಪಾದಕರ ಸಂಘ ಲಾಭದಲ್ಲಿ
ಚನ್ನರಾಯಪಟ್ಟಣ: ತಾಲೂಕಿನ ದಿಡಗ ಹಾಲು ಉತ್ಪಾದಕರ ಸಂಘ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಹಾಸನ ಸಹಕಾರಿ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಎಸ್. ತಿಮ್ಮೇಗೌಡ ಸಂಘದ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿ 2012-13 ನೇ ಸಾಲಿಗೆ ಒಟ್ಟು ನಿವ್ವಳ ಲಾಭ ನಾಲ್ಕು ಲಕ್ಷ ರು. ಬಂದಿದೆ. ಹಾಸನ ಸಹಕಾರಿ ಹಾಲು ಒಕ್ಕೂಟದಿಂದ ರಾಸುಗಳಿಗೆ ಉಚಿತ ಖನಿಜ ಮಿಶ್ರಣ, ಕಾಕಂಬಿ, ಜಂತು ಹುಳು ಔಷಧಿ ಕೊಡಲಾಗು ವುದು. ಸರ್ಕಾರದ ಯೋಜನೆಯಡಿ ಶೇಕಡ 50 ರ ಅನುಪಾತದಲ್ಲಿ ವಿಮಾ ಸೌಲಭ್ಯ ಕಲ್ಪಿಸ ಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ಪಾದಕರ ಸಂಘದ ವತಿಯಿಂದ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಎಸ್ಎಸ್ಎಲ್ಸಿಯಲ್ಲಿ ತನುಜ ಸಿ.ಚಂದ್ರೇಗೌಡ ಪ್ರಥಮ, ಚೈತ್ರ ದ್ವಿತೀಯ, ಕೆ.ಎಮ್.ದಿಲೀಪ್, ನಾರಾಯಣಗೌಡ ತೃತೀಯ ಹಾಗೂ ಪಿಯುಸಿಯಲ್ಲಿ ಎನ್.ಬಿ. ಅರ್ಪಿತ ಪ್ರಥಮ ಸ್ಥಾನ ಪಡೆದಿದ್ದು ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಅಧ್ಯಕ್ಷ ರಾಮಸ್ವಾಮಿ ಮಾತನಾಡಿದರು. ನಿರ್ದೇಶಕ ಎನ್.ಅರ್.ಶ್ರೀನಿವಾಸ ಬಾಬು, ಕೆ.ಜಿ.ಚಂದ್ರೇಗೌಡ, ಕೆ.ಎನ್. ದಿನೇಶ, ವೆಂಕಟಕೃಷ್ಣ, ಎಮ್.ಆರ್. ಅಶ್ವತ್ಥ, ಕೆ.ಸಿ.ಮಂಜಪ್ಪ, ಲಲಿತಮ್ಮ, ಡಿ.ಪಿ.ಶಾಂತೇಶ್ ಇತರರಿದ್ದರು. ಮಲ್ಲಿಕಾರ್ಜುನ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

