ಹಾಸನ

ಚನ್ನಕೇಶವ ದೇವಾಲಯ ಆಸ್ತಿ ರಕ್ಷಣೆಗೆ ಕ್ರಮ: ಡಿಸಿ

Published On :

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇವಾಸ್ಥಾನದ ಅಸ್ತಿ ಒತ್ತುವರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅದರ ರಕ್ಷಣೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು. ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಇತ್ತೀಚೆಗೆ  ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ದೇವಾಲಯದ ಒಟ್ಟು ಅಸ್ತಿ 29 ಎಕರೆ ಇದ್ದು, ಒತ್ತುವರಿ 9 ಎಕರೆಯಾಗಿದೆ ಎಂದು ತಿಳಿದಿದೆ. ಆದರೆ ನನಗೆ ಇನ್ನು ಸಂಪೂರ್ಣ ಮಾಹಿತಿ ಅವಶ್ಯ ಇಲ್ಲದ ಹಿನ್ನಲೆಯಲ್ಲಿ ಮಾಹಿತಿ ತಿಳಿದು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ  ಎಂದರು. ಬೇಲೂರು ಹಳೆ ತಾಲೂಕು ಕಚೇರಿಗೆ ಹೊಸ ರೂಪ ನೀಡುವಲ್ಲಿ ಅಧಿಕಾರಿಗಳಲ್ಲಿ ಚರ್ಚ ಮಾಡಲಾಗುತ್ತದೆ ಹಾಗೂ ಸಕಾಲ ಭೂಮಿ ಇನ್ನಿತರ ಅನ್‌ಲೈನ್‌ಗಳು ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿವೆ ಎಂದರು. ತಹಸೀಲ್ದಾರ್ ರವಿಚಂದ್ರನಾಯಕ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್. ಸದಸ್ಯರಾದ ಶ್ರೀಹರಿ, ಸಂತೋಷ್ ಸೇರಿದಂತೆ ಇತರರು ಇದ್ದರು.

'ಐತಿಹಾಸಿಕ ಪರಂಪರೆ ಉಳಿಸಿ'
ಅರಸೀಕೆರೆ: ನಾಡಿನ ಐತಿಹಾಸಿಕ ಪರಂಪರೆ ಸಾರುವ ವೀರಗಲ್ಲುಗಳು, ಶಾಸನಗಳು, ಮಹಾಸತಿ ಕಲ್ಲುಗಳು, ಇಂದಿನ ದಿನಗಳಲ್ಲಿ ಸಂರಕ್ಷಣೆಯ ಕೊರತೆಯಿಂದ ನಾಶದತ್ತ ಸಾಗಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ  ಸದಸ್ಯ ಪರಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಎನ್ನುವ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು ರಾಜ್ಯದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಪುರಾತತ್ವ ಇಲಾಖೆ ರ್ಲಕ್ಷ್ಯ ಮನೋಭಾವನೆಯಿಂದಾಗಿ ಇಂದು ಅವನತಿಯತ್ತ ಸಾಗಿ ಮರೆಯಾಗುತ್ತಿವೆ ಎಂದರು. ಪ್ರಾಂಶುಪಾಲ ಭೈರೇಶಪ್ಪ, ಇತಿಹಾಸ ಉಪನ್ಯಾಸಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.