'ತೇಜಸ್ವಿ ಸರಳ ಚಿಂತನಾ ಪ್ರತಿಪಾದಕ'
ಅರಕಲಗೂಡು: ವೈಚಾರಿಕ ಪ್ರಜ್ಞೆ ಮತ್ತು ಜಾತ್ಯತೀತ ನಿಲುವಿನ ಗುಣ ಹೊಂದಿದ್ದ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತಮ್ಮ ಛಾಪು ಮೂಡಿಸುವ ಮೂಲಕ ಜ್ಞಾನದ ಅರಿವನ್ನು ವಿಸ್ತರಿಸಿದ್ದಾರೆ ಎಂದು ಶಾಸಕ ಎ.ಮಂಜು ಹೇಳಿದ್ದಾರೆ.
ತಾಲೂಕಿನ ಕೊಣನೂರು ಬಿ.ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ನಡೆದ ತೇಜಸ್ವಿ-75 ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೇಜಸ್ವಿಯವರ ಸರಳ ಬದುಕು ಮತ್ತು ಚಿಂತನೆಗಳು ಯಾವತ್ತಿಗೂ ವರ್ತಮಾನದಲ್ಲಿ ಸಲ್ಲುತ್ತವೆ. ಪರಿಸರದೊಂದಿಗೆ ಅವರ ಒಡನಾಟ ಆ ಮೂಲಕ ಜ್ಞಾನದ ಹರವನ್ನು ವಿಸ್ತರಿಸಿದ ತೇಜಸ್ವಿ ಸಾರಸ್ವತ ಲೋಕದಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಕಾದಂಬರಿಗಳು ಮತ್ತು ಕಥೆಗಳು ನೈಜ ಬದುಕಿನ ಪ್ರತೀಕವಾಗಿದ್ದು ಓದುಗನ ಅನುಭವಕ್ಕೆ ತಂದುಕೊಡುತ್ತವೆ. ವಿಜ್ಞಾನದ ಮತ್ತು ಪರಿಸರದ ಕುರಿತು ರಚನೆಯಾಗಿರುವ ಇವರ ಕೃತಿಗಳನ್ನು ವಿಸ್ಮಯಕಾರಿ ಸಂಗತಿಗಳನ್ನು ಪರಿಚಯಿಸಿವೆ ಎಂದರು.
ಪ್ರಾಸ್ತಾವಿಕ ಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೈಲಶ್ರಿ, ತೇಜಸ್ವಿ ವರ್ತಮಾನದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮತ್ತು ಸದಸ್ಯತ್ವ ಹೆಚ್ಚಿಸುವ ದಿಸೆಯಲ್ಲಿ ಪರಿಷತ್ ಯೋಜನೆ ಹಮ್ಮಿಕೊಂಡಿದೆ ಎಂದರು.
ಕಾಲೇಜು ಪ್ರಾಂಶುಪಾಲ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಡಾ. ಕವಿತಾ, ಮುಖಂಡರಾದ ಚೌಡೇಗೌಡ, ಕಾಲೇಜು ಮಂಡಳಿ ಸದಸ್ಯ ಶ್ರೀಧರ್, ಗ್ರಾಪಂ ಅಧ್ಯಕ್ಷ ಕೃಷ್ಣ ಕಸಾಪ ಉಪಾಧ್ಯಕ್ಷ ಡೆಲ್ವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
'ದಾನಗಳಲ್ಲಿ ರಕ್ತದಾನವೇ ದೊಡ್ಡದು'
ಅರಸೀಕೆರೆ: ಇತರೆ ಎಲ್ಲ ದಾನಗಳಿಗಿಂತ ರಕ್ತದಾನವೇ ಅತ್ಯಂತ ಶ್ರೇಷ್ಠ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಒಮ್ಮೆಯಾದರೂ ರಕ್ತದಾನ ಮಾಡುವ ಮೂಲಕ ರಕ್ತದ ಅಗತ್ಯವಿರುವ ಮತ್ತೊಂದು ಜೀವಕ್ಕೆ ಆಸರೆ ನೀಡುತ್ತದೆ ಎಂದು ಹೊಯ್ಸಳೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಸರೋಜಮ್ಮ ಅಭಿಪ್ರಾಯಪಟ್ಟರು.
ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ ಸಿರಿಗೆರೆಯಲ್ಲಿ ಸೆ.24ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಹೊಯ್ಸಳೇಶ್ವರ ಪ್ರಥಮ ದರ್ಜೆ ಕಾಲೇಜು, ರೋಟರಿ ಸಂಸ್ಥೆ, ಜೀವ ರಕ್ಷಾನಿಧಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್ಸಿಸಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶವಿದ್ದು, ಅಂತಹ ಶ್ರೇಷ್ಠ ಕೆಲಸಗಳಲ್ಲಿ ರಕ್ತದಾನ ಮಾಡುವುದು ಕೂಡ ಒಂದು ಬಗೆಯ ಸಾಧನೆಯೇ ಸರಿ. ಒತ್ತಾಯ ಪೂರ್ವಕವಾಗಿ ಅಥವಾ ಒಲ್ಲದ ಮನಸ್ಸಿನಿಂದ ರಕ್ತ ನೀಡಲು ಬಯಸಬಾರದು. ಆಸಕ್ತರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದೆಂದರು.
ಪುರಸಭಾಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, ರಕ್ತದಾನದ ಪಾವಿತ್ರ್ಯತೆ ಬಗ್ಗೆ ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ಪಿಸಿಯೋ ಮಧು, ರೋಟರಿ ಅಧ್ಯಕ್ಷ ಪ್ರವೀಣ್ಕುಮಾರ್, ಕಾರ್ಯದರ್ಶಿ ಮೋಹನ್ಕುಮಾರ್ ಇನ್ನಿತರರು ಇದ್ದರು.
ಪ್ರಾಧ್ಯಾಪಕ ಪ್ರಭು ಸ್ವಾಗತಿಸಿ, ಶಿವಲಿಂಗಪ್ಪ ವಂದಿಸಿದರು. ಶಿಬಿರದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಇದೆ ವೇಳೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ತಗುಂಪು ಪರೀಕ್ಷೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

