ಹಾಸನ

ಜನಪದ ಉಳಿವಿಗೆ ಬೆಂಬಲ ಅಗತ್ಯ

Published On :

ಹೊಳೆನರಸೀಪುರ: ಜನಪದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜಾನಪದ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಜನಪದ ಗೀತೆಗಳು ಸಮಾಜದ ಜನರ ನಡುವೆ ಹಾಸು ಹೊಕ್ಕಾಗಬೇಕಾದರೆ ಇಂತಹ  ಸ್ಪರ್ಧೆಗಳನ್ನು ನಡೆಸುವ ಪರಿಪಾಟ ಬೆಳೆಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಸಂಸ್ಥೆಯ ಕ್ರಮ ಶ್ಲಾಘನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್ ಪ್ರಶಂಶಿಸಿದರು.
ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ನೌಕರರ ಸಂಘ ಹಾಗು ರೋಟರಿ ಸಂಸ್ಥೆ  ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿರಸ್ತೇದಾರ್ ಉಲಿವಾಲ ಮೋಹನ್‌ಕುಮಾರ್  ಮಾತನಾಡಿ, ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಿಕ್ಕ ಅವಕಾಶವನ್ನು ಬಸಳಿಕೊಂಡರೆ ಜನಪದ ಜ್ಞಾನವೂ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಕಸಾಪ ಅಧ್ಯಕ್ಷ ಪುಟ್ಟಸೋಮಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಎಚ್.ಎಸ್.ಶಿವಕುಮಾರ್, ಟಿ.ಎಸ್.ಕುಮಾರಸ್ವಾಮಿ, ಕಸಾಪ ಉಪಾಧ್ಯಕ್ಷ ಎಂ.ಎನ್.ಜೈಪ್ರಕಾಶ್, ಪ್ರಾಂಶುಪಾಲ ಎ.ನಾಗರಾಜು, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್, ಎಚ್.ಕೆ.ಪ್ರಸನ್ನಕುಮಾರ್, ಕೆ.ಬಿ.ವೆಂಕಟಸ್ವಾಮಿ, ಶಿಕ್ಷಕ ದಿವಾಕರ್, ಸಾಹಿತಿ ಗುಂಜೇವು ಅಣ್ಣಾಜಪ್ಪ ಮತ್ತಿತರರು ಇದ್ದರು.
ಸ್ಪರ್ಧೆಯಲ್ಲಿ ಆದರ್ಶ ಶಾಲೆಯ ಹೆಚ್.ಆರ್.ಯಶಸ್‌ಗೌಡ-ಪ್ರಥಮ, ಗ್ರೀನ್‌ವುಡ್ ಆಂಗ್ಲ ಶಾಲೆಯ ಎಚ್.ಆರ್.ಗಗನ-ದ್ವಿತೀಯ, ಸುಪ್ರಿಯ-ತೃತೀಯ ಹಾಗೂ ಹಿರಿಯರ ವಿಭಾಗದಲ್ಲಿ ಪಾನಿಪೂರಿ ದಾಸಪ್ಪ ಪ್ರಥಮ, ಶಿಕ್ಷಕರಾದ ಚನ್ನರಾಜು ದ್ವಿತೀಯ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್.ಆರ್.ಅನ್ನಪೂರ್ಣ ತೃತೀಯ ಬಹುಮಾನ ಗಳಿಸಿದರು.

ಕರ್ತವ್ಯ ಲೋಪ: ಬ್ಯಾಂಕ್ ನಿರ್ದೇಶಕರ ವಿರುದ್ಧ ಕ್ರಮ
ಬೇಲೂರು: ಬ್ಯಾಂಕ್ ಆಡಳಿತದ ಬಗ್ಗೆ ಹುರುಳಿಲ್ಲದ ಆರೋಪ ಮಾಡಿ ಬ್ಯಾಂಕ್ ವಹಿವಾಟಿಗೆ ಧಕ್ಕೆ ತರುತ್ತಿರುವ ಇಬ್ಬರು ನಿರ್ದೇಶಕರ ಮೇಲೆ ಕಾನೂನಿನಂತೆ  ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕರಾದ ಅಣ್ಣೇಗೌಡ ಹಾಗೂ ದೇವರಾಜ್  ಮಾಡಿರುವ ಆರೋಪದಲ್ಲಿ ಎಳ್ಳಷ್ಟು ಹುರುಳಿಲ್ಲ. ಸರ್ವಸದಸ್ಯರ ಸಭೆಗೆ ಉಚಿತವಾಗಿ ಸಮುದಾಯ ಭವನ ನೀಡುವುದಿಲ್ಲ ಎಂದು ಕಲ್ಯಾಣಮಂಟದ ವ್ಯವಸ್ಥಾಪಕರು ಲಿಖಿತವಾಗಿ ತಿಳಿಸಿದ್ದಾರೆ.
 ಸ್ವಂತ ಹಣ ನೀಡುವುದಾಗಿ ತಿಳಿಸಿರುವ ನಿರ್ದೇಶಕರು ಬ್ಯಾಂಕ್ ಮೇಲೆ ಕಳಕಳಿ ಇದ್ದರೆ ಸ್ವಂತ ಕಟ್ಟಡ ನಿರ್ಮಿಸಲು ಹಣ ನೀಡಲಿ ಎಂದರು.  ಬ್ಯಾಂಕ್ ಭದ್ರತೆ ಹಿನ್ನಲೆಯಲ್ಲಿ ಶೀಘ್ರವೇ ಸಿಸಿಟಿವಿ ಅಳವಡಿಸಲಾಗುತ್ತಿದೆ. ಊಟದ ಬದಲಿಗೆ ಹಣ ಕೊಟ್ಟು ಕಳುಹಿಸಿ ಎನ್ನುವ ಇವರ ವಾದ ನೋಡಿದೆ ಇವರ ಮನೆಯಲ್ಲಿನ ಶುಭಕಾರ್ಯಕ್ಕೆ ಬರುವ ಅತಿಥಿಗಳಿಗೂ ಊಟದ ಬದಲು ಹಣ ಕೊಟ್ಟು ಕಳುಹಿಸುವರೆ ಎಂಬ ಅನುಮಾನ ಮೂಡುತ್ತದೆ ಎಂದು ಟೀಕಿಸಿದರು.
ತಮ್ಮ ಸ್ವಹಿತಾಸಕ್ತಿಯಿಂದ ಠೇವಣಿ ಶೇಖರಣೆ ಮಾಡಿಲ್ಲ, ಪಿಗ್ಮಿ ಖಾತೆ ತೆರೆಸಿಲ್ಲ. ನಿರ್ದೇಶಕರ ಸಭೆಗೆ ತಡವಾಗಿ ಬಂದ ಕಾರಣ ಕೋರಂ ಇಲ್ಲದೆ ಸಭೆ ಮುಂದೂಡಲಾಗಿದೆ. ತಡವಾಗಿ ಬಂದರೂ ಸಹ ಸಭೆಗೆ ಹಾಜರಾಗಿದ್ದೇವೆ ಎಂದು ಅಣ್ಣೇಗೌಡ, ದೇವರಾಜ್ ಹಣ ಪಡೆದಿದ್ದಾರೆ. ಬ್ಯಾಂಕ್ ಉಪಾಧ್ಯಕ್ಷ ಉಮಾಶಂಕರ್ ಅವರಿಗೆ ವಾಸ್ತವಾಂಶ ತಿಳಿಸದೆ ತಮ್ಮಡೆಗೆ ಸಳೆದುಕೊಂಡು ಅವರೂ ಬ್ಯಾಂಕ್ ವಿರೋಧಿ ಎಂಬಂತೆ ಮಾಡಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.