'ಕಲೆ ಹೊರ ತರಲು ಪ್ರೋತ್ಸಾಹ ಅಗತ್ಯ'
ಹಾಸನ: ಮಕ್ಕಳಲ್ಲಿರುವ ಕಲೆಯನ್ನು ಹೊರತರಲು ಪ್ರೋತ್ಸಾಹ ಮುಖ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾ ಜ್ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಶನಿವಾರ ಏರ್ಪಡಿಸಿದ್ದ ಚಿತ್ರಕಲಾ ಶಿಕ್ಷಕರ ವರ್ಣಮಿಲನ ಚಿತ್ರಕಲಾ ಪ್ರದರ್ಶನದ ಪ್ರಾತ್ಯಕ್ಷತೆ-ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ಎಂಬುದು ಚಿತ್ತಾರ: ಚಿತ್ರಕಲೆ ಎಂಬುದು ಭಾವನಾತ್ಮಕವಾಗಿ ಬರುವ ಒಂದು ಚಿತ್ತಾರವಾಗಿದೆ. ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ನಾನಾ ರೀತಿ ಅಭಿರುಚಿವುಳ್ಳ ಕಲೆ ಇದ್ದು, ಹೊರಗೆ ತರುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಸಲಹೆ ನೀಡಿದರು.
ಪಾಠ-ಪ್ರವಚನ ನೀಡುವ ಜೊತೆಯಲ್ಲಿ ಕಲೆಯನ್ನು ಹೊರತರುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ನಾನಾ ರೀತಿಯ ಕಲೆಗಳನ್ನು ಉಳ್ಳ ಕಲಾವಿದರು ಇದ್ದಾರೆ. ಕೆಲವರು ಮಾತ್ರ ಹೊರಗೆ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಉಳಿದವರಿಗೆ ಅವಕಾಶ ಲಭ್ಯವಾಗದೆ ಮೂಲೆಯಲ್ಲಿಯೇ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಮೂರು ದಿನಗಳ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಅವಟಿ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಕೆ.ಜಿ. ಈಶ್ವರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಮಹಂತೇಶ್ಕಂಠಿ, ಚಿತ್ರಕಲಾ ಸಂಪನ್ಮೂಲ ವ್ಯಕ್ತಿ ಎಂ. ರಾಮಚಂದ್ರನ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ, ವೈ.ಬಿ. ರವಿ ಇತರರು ಇದ್ದರು.
'ಕಲಬೆರಕೆ ಮಿಶ್ರಣ ಸತ್ಯಕ್ಕೆ ದೂರ'
ಹಾಸನ: ಹಾಲಿನಲ್ಲಿ ಗೊಬ್ಬರ, ಯೂರಿಯಾ ಮಿಶ್ರಣ ಮಾಡಿ ಕಲಬೆರಕೆ ಮಾಡಲಾಗುತ್ತಿದೆ ಎಂಬುದು ಸತ್ಯಕ್ಕೂ ದೂರವಾದ ವಿಷಯವಾಗಿದೆ ಎಂದು ಹಾಸನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ಸ್ಪಷ್ಟಪಡಿಸಿದ್ದಾರೆ.
ವೀರಾಪುರ ಹಾಲು ಉತ್ಪಾದಕರ ಸಹಕಾರ ಸಂಘ, ಹಾಸನ ತಾಲ್ಲೂಕು ಇಲ್ಲಿನ ಗ್ರಾಮಸ್ಥರು ಮಾರ್ಗ ಸಂಖ್ಯೆ ಹೆಚ್.16ರ ಗುತ್ತಿಗೆ ವಾಹನವು ಸೆ.18ರಂದು ಸಂಜೆ ಹಾಲು ಶೇಖರಿಸಲು ಬಂದಾಗ ಅರ್ಧ ಕ್ಯಾನು ಉಪ್ಪು ಮಿಶ್ರಿತ ನೀರು ಇದ್ದು, ಇದನ್ನು ಸಂಘದ ಹಾಲಿಗೆ ಬೆರೆಸಿದಲ್ಲಿ ಗುಣಮಟ್ಟ ಹಾಳಾಗುವುದೆಂದು ವಾಹನ ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದರಿ ಕ್ಯಾನಿನಲ್ಲಿರುವ ನೀರನ್ನು ಪರಿಶೀಲನೆ ನಡೆಸಿದಾಗ ಕ್ಯಾನಿನಲ್ಲಿರುವ ನೀರು ಉಪ್ಪು ಮಿಶ್ರಿತವಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿರುತ್ತದೆ. ಸಂಘದವರು ವಶಪಡಿಸಿಕೊಂಡ ಕ್ಯಾನಿನಲ್ಲಿ ಗೊಬ್ಬರ ಯೂರಿಯಾ ಮಿಶ್ರಣವಿರುವುದಾಗಿ ಇದನ್ನು ಹಾಲಿನಲ್ಲಿ ಮಿಶ್ರಣ ಮಾಡಲಾಗುತ್ತಿದೆ ಎಂಬ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾದ ಅಂಶವಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

