ಹಾಸನ

'ಉತ್ತಮ ಆಡಳಿತ ನಡೆಸುತ್ತಿದ್ದರೂ ಜೆಡಿಎಸ್ ಮುಖಂಡರ ಅನಗತ್ಯ ಟೀಕೆ'

Published On :

ಕನ್ನಡಪ್ರಭ ವಾರ್ತೆ ಹಾಸನ ಸೆ. 26
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದರೂ ಜೆಡಿಎಸ್ ಮುಖಂಡರು ಅನಗತ್ಯ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಸದಸ್ಯ ವಿನಯಗಾಂಧಿ ಟೀಕಿಸಿದ್ದಾರೆ.
 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡ ಅರ್ಧ ಗಂಟೆಯಲ್ಲೇ ದೀನ-ದಲಿತರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಸಾಲಗಳನ್ನು ಮನ್ನಾ ಮಾಡಿರುವ ಹಾಗೂ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾದ ಒಂದು ರು.ಗೆ ಕೆಜಿ ಅಕ್ಕಿ ಹಾಗೂ ಹಾಲು ಉತ್ಪಾದಕರಿಗೆ ರು.2 ಹೆಚ್ಚಿನ ಧನ ಸಹಾಯ ಮಾಡಿದ ಕೀರ್ತಿ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ.
 ವಿರೋಧಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಬಗ್ಗೆ ಟೀಕಿಸಿರುವುದು, ಅವರ ಮರೆವಿನ ರೋಗ ಇರಬಹುದು. ರಾಜ್ಯದ ರಾಜಕೀಯದ ಇತಿಹಾಸಗಳ ಪುಟಗಳಲ್ಲಿ ತಿರುವಿದಾಗ ಜನತಾ ಪಕ್ಷದ ಅಧೋಗತಿಗೆ ದೇವೇಗೌಡರ ದ್ವೇಷದ ರಾಜಕೀಯವೇ ಸಿಂಹಪಾಲಿನ ಕೊಡುಗೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
 ದೇವೇಗೌಡರ ಅವಕಾಶವಾದಿ ರಾಜಕೀಯ, ಸ್ವಾರ್ಥದ ರಾಜಕಾರಣ, ದ್ವೇಷದ ಮತ್ಸರದ ಸೇಡಿನ ರಾಜಕೀಯದಿಂದ ಜನತಾ ಪಕ್ಷ ಚಿದ್ರಗೊಂಡು ಜನತಾದಳವಾಗಿ ಅದು ಸಹ ಇಬ್ಬಾಗವಾಗಿ ಈಗ ಅಪ್ಪ ಮತ್ತು ಮಕ್ಕಳ ಕುಟುಂಬದ ಪಕ್ಷವಾಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.