ಹಾಸನ

'ಅಗತ್ಯತೆ ಪರಿಗಣಿಸಿ ಹಣ ವಿನಿಯೋಗಿಸಿದರೆ ಪ್ರಗತಿ'

Published On :

ಕ.ಪ್ರ.ವಾರ್ತೆ ,  ಚನ್ನರಾಯಪಟ್ಟಣ ,  ಸೆ. 27
ಬಜೆಟ್ ರಚನೆ ಸಂದರ್ಭದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗಗಳ ಪಾತ್ರ ತುಂಬಾ ಪ್ರಮುಖವಾಗಿದ್ದು, ದೇಶದ ಹಾಗೂ ಜನರ ಅಗತ್ಯತೆಯನ್ನು ಪರಿಗಣಿಸಿ ಹಣಕಾಸನ್ನು ವಿನಿಯೋಗಿಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ರಾಜ್ಯ ಹಣಕಾಸು ಇಲಾಖೆಯ ಉಪ ಸಲಹೆಗಾರ್ತಿ ಅನಿತಾ ವಿ.ನಜರೆ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   2013-14ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತಕರ ವೇದಿಕೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕೆಲವು ವೇಳೆ ಸಾರ್ವಜನಿಕ ಹಣ ದುರುಪಯೋಗವಾಗುತ್ತಿರುವ ಬಗ್ಗೆ 2500 ವರ್ಷಗಳ ಹಿಂದೆಯೇ ಚಾಣಾಕ್ಯ ಪ್ರಸ್ತಾಪಿಸಿದ್ದರು. ಈಗಲೂ ಕೆಲವು ಸಮಸ್ಯೆಗಳು ಅದೇ ರೀತಿ ಇವೆ ಎಂದರೆ ಹಣಕಾಸಿನ ನಿರ್ವಹಣೆ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದು ತಿಳಿಯುತ್ತದೆ ಎಂದರು.
ಮುಂಗಡ ಪತ್ರ ಮುಂಬರುವ ವರ್ಷದ ಎಲ್ಲಾ ಹಣಕಾಸಿನ ವಿವರಗಳನ್ನು ಒಳಗೊಂಡಿದ್ದು, ಸರ್ಕಾರವು ವಿವಿಧ ಮೂಲಗಳಿಂದ ಪಡೆಯುವ ಆದಾಯದ ವಿವರಗಳು ಹಾಗೂ ವಿವಿಧ ಯೋಜನೆಗಳು ಹಾಗೂ ಸಾಮಾನ್ಯ ಹಾಗೂ ಅಗತ್ಯ ಸೇವೆಗಳಿಗೆ ವಿನಿಯೋಗಿಸಬಹುದಾದ ಹಣಕಾಸು ಹಾಗೂ ಅನುದಾನಗಳ ವಿವರಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
 ಮುಂಗಡ ಪತ್ರ ರಚನೆಯು ಅನೇಕ ತಾಂತ್ರಿಕ ಅಂಶಗಳನ್ನು ಒಳಗೊಂಡಿದ್ದು ಹಣಕಾಸಿನ ಹರಿವು, ಸರ್ಕಾರದ ಲೆಕ್ಕಗಳ ರಚನೆ ಮತ್ತು ವಹಿವಾಟುಗಳ ರಚನೆಯನ್ನು ಒಳಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ವತಿಯಿಂದ ಹೊರತರಲಾಗುತ್ತಿರುವ ಅರ್ಥ ಚಿಲುಮೆ ಎಂಬ ಚಾತುರ್ಮಾಸ ಪತ್ರಿಕೆಯನ್ನು ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಟಿ. ಸೋಮಶೇಖರ್ ಬಿಡುಗಡೆ ಮಾಡಿದರು. ಪ್ರಸ್ತುತ ವೃತ್ತ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗ   ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ವಿಷಯ ಎಂದರು.
ಪ್ರಾಂಶುಪಾಲ ಎಂ.ಕೆ. ಉಮಾನಾಥ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎನ್.ಲೋಕೇಶ್, ವಿತ್ತೀಯ ಕಾರ್ಯನೀತಿ ಸಂಸ್ಥೆಯ ಸಂಶೋಧನಾ ಸಹಾಯಕ ಬಿ.ರವಿಕುಮಾರ್  ಇದ್ದರು.   ದಿವ್ಯ ಜ್ಯೋತಿ ಸ್ವಾಗತಿಸಿದರು. ದಿವ್ಯ ವಂದಿಸಿದರು. ಸ್ಮಿತಾ ಹಾಗೂ ಅನುರಾಧ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.