ಹಾಸನ

ಅರಸೀಕೆರೆ ರಸ್ತೆ ಅಯೋವುಯ

Published On :

 ಪಿ. ಶಾಂತಕುಮಾರ್
ಅರಸೀಕೆರೆ:  ಪಟ್ಟಣದಿಂದ ಹಾದು ಹೋಗುವ ಪಂಚನಹಳ್ಳಿ ರಸ್ತೆಯಲ್ಲಿ ಜೀವ ಬಿಗಿಹಿಡಿದು ಧೂಳಿನ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಪ್ರಾಣ ಸಂಕಟ ಎದುರಿಸಬೇಕಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಗೋಳು ಹೇಳತಿರದಾಗಿದೆ.
ಪಟ್ಟಣದಿಂದ ಬಳ್ಳಾರಿ, ಗುಲ್ಬರ್ಗ, ಹೊಸಪೇಟೆ, ಚಿತ್ರದುರ್ಗ, ದಾವಣಗೆರೆ, ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ಹಾಗೂ 17ಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ನೂರಾರು ಬಸ್‌ಗಳು ಸಂಚರಿಸುತ್ತವೆ. ಮಾತ್ರವಲ್ಲ, ನೂರಾರು ಲಾರಿಗಳು, ದ್ವಿಚಕ್ರ ವಾಹನಗಳು ಈ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿಯೇ ಸಂಚರಿಸುತ್ತಿವೆ. ಕಳೆದ ಒಂದು ವರ್ಷಗಳ ಹಿಂದೆಯೇ ರಸ್ತೆಯಲ್ಲಿ ಡಾಂಬರ್ ಕಿತ್ತುಬಿದ್ದಿರುವ ಮಾರುದ್ದದ ಗುಂಡಿಗಳು, ಎದ್ದು ನಿಂತಿರುವ ಜಲ್ಲಿಕಲ್ಲುಗಳು, ಅಲ್ಲದೆ ದಿನನಿತ್ಯ ಸಂಚರಿಸುವ ವಾಹನಗಳಿಗೆ ಉಂಟಾಗುತ್ತಿದ್ದ ಕಿರಿಕಿರಿಯನ್ನು ದೂರಮಾಡಲು ಹಿಂದಿನ ಸರ್ಕಾರ ರಸ್ತೆಯ ರಿಪೇರಿಗಾಗಿ ಹಣ ಬಿಡುಗಡೆ ಮಾಡಿತ್ತು.
ಪಟ್ಟಣದಿಂದ ಜೆ.ಸಿ ಪುರ, ಡಿ.ಎಂ.ಕುರ್ಕೆ ಮಾಡಾಳು ಮಾರ್ಗವಾಗಿ ಪಂಚನಹಳ್ಳಿ ಹ್ಯಾಂಡ್ ಪೋಸ್ಟ್‌ವರೆಗಿನ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ನಡೆಸಲು ಈ ಹಿಂದಿನ ಸರ್ಕಾರ ರು. 23 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ರಸ್ತೆ   ಡಾಂಬರೀಕರಣಕ್ಕೆ ಟೆಂಡರ್ ಕರೆದು ಹಣ ಬಿಡುಗಡೆ ಮಾಡಿತ್ತು. ಆದರೆ ರಾಜಕೀಯ ವೈಷಮ್ಯದ ಕಾರಣದಿಂದಾಗಿ ರಾಜ್ಯ ಹೆದ್ದಾರಿ ಕೇರಳಾಪುರ, ಹಿರಿಯೂರು ರಸ್ತೆಯು ಅತ್ಯಂತ ದುಃಸ್ಥಿತಿಯಲ್ಲಿದ್ದು, ಈ ಭಾಗದ ಅನೇಕ ಗ್ರಾಮಗಳ ಜನರು ಇನ್ನಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹುಳಿಯಾರು, ಪಂಚನಹಳ್ಳಿ ಮಾರ್ಗವಾಗಿ ಬರುವ ವಾಹನಗಳ ಚಾಲಕರು ದೋಣನಕಟ್ಟೆ, ಕಿತ್ತನಕೆರೆ ಮಾಡಾಳು ಬರುತ್ತಿದ್ದಂತೆ ಬಾಯಿ ತೆರೆದು ನಿಂತಿರುವ ಜಲ್ಲಿಕಲ್ಲಿನ ಪುಡಿ ಹಾಗೂ ಧೂಳು ವಾಹನಗಳನ್ನು
ಆವರಿಸುತ್ತಿದ್ದು, ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಹಿಡಿದಿರುವ ಗ್ರಹಣ ಬಿಟ್ಟು, ಸಾರ್ವಜನಿಕರ ಸೇವೆಗಾಗಿ ಡಾಂಬರೀಕರಣ ರಸ್ತೆಯೂ ಮುಕ್ತವಾಗಲಿ ಎಂಬುವುದೇ ಈ ಭಾಗದ ಜನತೆಯ ಆಶಯವಾಗಿದೆ.


ಇಂದು ಪೊಲೀಸ್
ಧ್ವಜ ದಿನಾಚರಣೆ
ಹಾಸನ:  ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏ.2ರಂದು ಬೆಳಗ್ಗೆ 9ಕ್ಕೆ  ಆಚರಿಸಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಪೊಲೀಸ್ ಅಧಿಕಾರಿ ರಂಗಸ್ವಾಮಯ್ಯ ಭಾಗವಹಿಸುವರು.



ಆಟೋ ಚಾಲಕಿ ಶಂಷಾದ್‌ಳಿಗೆ ಸುವರ್ಣ ಪ್ರಶಸ್ತಿ
ಹಾಸನ:  ಈ ಸಾಲಿನ ಸುವರ್ಣ ಸುದ್ದಿವಾಹಿನಿ ಹಾಗೂ ಕನ್ನಡಪ್ರಭ ನಡೆಸಿದ ವರ್ಷದ ಸಾಧಕಿ ಸುವರ್ಣ ಮಹಿಳೆ-2014ರ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಜಯ ಸಾಧಿಸಿ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಆಟೋ ಚಾಲಕಿ ಶಂಷಾದ್ ಅವರಿಗೆ ನಗರದ ಎವಿಕೆ ಕಾಲೇಜಿನ ಆಡಳಿತ ವರ್ಗ ಅಭಿನಂದನೆ ಸಲ್ಲಿಸಿದೆ. ಶಂಷಾದ್ ಸ್ವಾವಲಂಬನೆ ಪ್ರತೀಕದಂತೆ ತನ್ನ ಬದುಕನ್ನು ಅತ್ಯಂತ ಆತ್ಮವಿಶ್ವಾಸದಿಂದ ಕಟ್ಟಿಕೊಂಡಿದ್ದು, ನಗರದ ಪ್ರಥಮ ಹಾಗೂ ಏಕೈಕ ಮಹಿಳಾ ಆಟೋ ಚಾಲಕಿಯಾಗಿದ್ದಾರೆ. ಸಮಾಜದ ಎಲ್ಲ ವೈರುಧ್ಯದ ವಸಂಧರ್ಭಗಲನ್ನು ಮೆಟ್ಟಿ ನಿಂತು ತನ್ನ ಮಗಳನ್ನು ಬಿಇ ವ್ಯಾಸಂಗ ಮಾಡಿಸಿ, ಉತ್ತಮ ಬದುಕು ನಿರ್ಮಿಸುತ್ತಿರುವ ಅಚಲ ವಿಶ್ವಾಸದ ಮಹಿಳೆ  ಶಂಷಾದ್ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.