ನಾಲ್ಕು ಹಸುಗಳ ಹಠಾತ್ ಸಾವು
ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿ ಬಾಳಿಗನಹಳ್ಳಿಯ ರಂಗೇಗೌಡ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಇತ್ತೀಚೆಗೆ ಇದ್ದಕ್ಕಿದ್ದಂತೆ ಸಾವನ್ನಪ್ಪಿ ಅವರ ಕುಟುಂಬಕ್ಕೆ ತೀವ್ರ ಆಘಾತ ಉಂಟು ಮಾಡಿದೆ.
ಕೃಷಿಯಿಂದ ಭಾರೀ ನಷ್ಟ ಅನುಭವಿಸಿ ಹೈನುಗಾರಿಕೆ ನಡೆಸುತ್ತಿದ್ದ ರಂಗೇಗೌಡ, ಬಿಕ್ಕೋಡು ಹಾಲು ಉತ್ಪಾದಕರ ಸಂಘಕ್ಕೆ ನಿತ್ಯ 25 ಲೀಟರ್ ಹಾಲು ಹಾಕುತ್ತಿದ್ದರು. ಈಗ ಅವರ ಎಲ್ಲಾ ನಾಲ್ಕು ಹಸುಗಳು ದಿಢೀರನೆ ಸಾವನ್ನಪ್ಪಿರುವುದರಿಂದ ಬೀದಿಗೆ ಬಿದ್ದಿದ್ದಾರೆ. ಈ ಹಸುಗಳ ಜೊತೆಗೆ ಅವರ ಸಾಕು ನಾಯಿ ಕೂಡ ಮೃತಪಟ್ಟಿದೆ. ಇವುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪಶು ವೈದ್ಯಾಧಿಕಾರಿ ಅಶೋಕ್ ಸ್ಥಳಕ್ಕೆ ಆಗಮಿಸಿ ಮೃತಪಟ್ಟ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಅವುಗಳ ಕೆಲ ಅಂಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಮೈಸೂರಿನ ಪ್ರಯೋಗಾಲ ಯಕ್ಕೆ ಕಳಿಸಿದ್ದಾರೆ. ಅಲ್ಲಿಂದ ವರದಿ ಬಂದ ನಂತರವಷ್ಟೆ ಸಾವಿಗೆ ಕಾರಣ ಗೊತ್ತಾಗಲಿದೆ. ಮೃತ ಹಸುಗಳ ಬೆಲೆ ಸುಮಾರು ರು. 2 ಲಕ್ಷ ಎಂದು ರಂಗೇಗೌಡ ತಿಳಿಸಿದ್ದು, ಶನಿವಾರವಷ್ಟೆ ಸಂಘದಿಂದ ತಂದಿದ್ದ ಪಶು ಆಹಾರವನ್ನು ತಿನ್ನಲು ಕೊಡಲಾಗಿತ್ತು. ಆನಂತರವಷ್ಟೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಹಸುಗಳಿಂದಲೇ ಅವರ ಕುಟುಂಬ ಜೀವನ ನಡೆಯುತ್ತಿತ್ತು. ಈಗ ಬೀದಿಗೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಪರಿ ಹಾರ ನೀಡಿ ಮತ್ತೆ ಹೈನುಗಾರಕೆ ನಡೆಸಲು ನೆರವಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹಸುಗಳ ಸಾವಿನ ಬಗ್ಗೆ ಗ್ರಾಮದಲ್ಲಿ ಅಚ್ಚರಿ, ಭೀತಿ ವ್ಯಕ್ತವಾಗುತ್ತಿದೆ. ಆರೋಗ್ಯವಾಗಿದ್ದು ಹಾಲು ಕೊಟ್ಟ ನಂತರ ಪಶು ಆಹಾರವನ್ನು ಸೇವಿಸುವಾಗ ಇದ್ದಕ್ಕಿಂತೆ ಮೃತಪಟ್ಟಿದ್ದು ಭೀತಿ ಹುಟ್ಟಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

